ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾಮದ ಮನೆಜಾಲ್‌ನಲ್ಲಿ ಗುರುವಾರ ಮುಂಜಾನೆಯ ವೇಳೆ ಭಾರೀ ಮಳೆಯ ಪರಿಣಾಮ ಗುಡ್ಡವೊಂದು ಕುಸಿದು ಮನೆಯ ಮೇಲೆ ಬಿದ್ದಿದ್ದು, ಮನೆಯ ಒಂದು ಬದಿಗೆ ಸಂಪೂರ್ಣ ಹಾನಿಯಾಗಿದ್ದು, ಮನೆಯಲ್ಲಿ ಮಲಗಿದ್ದ ನಾಲ್ವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಂಜಾನೆ 4ರ ವೇಳೆಗೆ ಗುಡ್ಡವೊಂದು ಏಕಾಏಕಿ ಮನೆಯ ಮೇಲೆಯೇ ಕುಸಿದು ಬಿದ್ದು, ಮಣ್ಣು ಸಂಪೂರ್ಣವಾಗಿ ಮನೆಯ ಒಳಗೆ ನುಗ್ಗಿದೆ. ಮನೆಮಂದಿ ಮಣ್ಣು ಬಿದ್ದಿರುವ ಪ್ರದೇಶದ ವಿರುದ್ಧ ದಿಕ್ಕಿನ ಕೋಣೆಯಲ್ಲಿ ಮಲಗಿದ್ದ ಹಿನ್ನೆಲೆ ಜೀವಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿ ಜೆಸ್ಸಿ ವೇಗಸ್ ದಂಪತಿ ಹಾಗೂ ಇಬ್ಬರು ಮಕ್ಕಳು ಮಲಗಿದ್ದರು. ಮನೆಯಲ್ಲಿ ಸುಮಾರು 45 ಲಕ್ಷ ರೂ. ಸೊತ್ತುಗಳೂ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಮನೆಮಂದಿ ಬೇರೆಡೆಗೆ ಸ್ಥಳಾಂತರಗೊಂಡಿದ್ದು, ಘಟನ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t