ಮಂಗಳೂರು: ಹೃದಯಾಘಾತ ಬಾರದಂತೆ ತಡೆಯಲು ಯಾವುದೇ ಔಷಧಗಳಿಲ್ಲ, ಆದರೆ ಈ ಬಗ್ಗೆ ಮೊದಲೇ ಮುನ್ನೆಚ್ಚರಿಕೆ ವಹಿಸಬೇಕು. ನಿದ್ರಾ ಕೊರತೆ, ಶಾರೀರಿಕ ಚಟುವಟಿಕೆಯ ಕೊರತೆ, ರಾಸಾಯನಿಕಯುಕ್ತ ಆಹಾರ, ಫಾಸ್ಟ್ ಫುಡ್ ಸೇವನೆ, ಒತ್ತಡ ಜೀವನ, ಪರಸ್ಪರ ಪ್ರೀತಿಯ ಸಂವಹನ ಇಲ್ಲದೇ ಮಾನಸಿಕ ಒತ್ತಡ ಇರುವುದರಿಂದ ಹೃದಯಾಘಾತ ಪ್ರಕರಣಗಳು ಹಚ್ಚಾಗಲು ಕಾರಣವಿರಬಹುದು. ಆದರೆ ಇದಕ್ಕೆ ಸ್ಪಷ್ಟ ಕಾರಣ ಇದುವರೆಗೆ ಪತ್ತೆಯಾಗಿಲ್ಲ ಎಂದು ದಕ್ಷಿಣ ಭಾರತದ ಪ್ರಮುಖ ಹೃದಯ ತಜ್ಞ, ಮಂಗಳೂರಿನ ಇಂಡಿಯಾನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸಫ್ ಕುಂಬ್ಳೆ ಹೇಳಿದರು.
ಮಂಗಳೂರಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೃದಯಾಘಾತ ತಡಯಲು ಸರ್ಕಾರದಿಂದಲೇ ನಿಯಮಗಳನ್ನು ತರಬೇಕಾಗಿದೆ. ಉದಾಹರಣೆಗೆ ಇಂದು ನಗರ ಪ್ರದೇಶಗಳ ಶಾಲೆಗಳಲ್ಲಿ ಆಟದ ಮೈದಾನಗಳೇ ಇಲ್ಲ. ಇದರಿಂದ ಮಕ್ಕಳು ಆಟವಾಡುತ್ತಿಲ್ಲ. ಮೊಬೈಲ್‌ನಲ್ಲಿ ಮುಳುತ್ತಿದ್ದು, ಜಾಲತಾಣಗಳಲ್ಲಿ ಮುಳುಗಿರುತ್ತಾರೆ. ಪ್ರತೀದಿನ ಮೈ ದಂಡಿಸುವಂತೆ ಕೆಲಸ ಮಾಡುತ್ತಿಲ್ಲ. ಸರಿಯಾಗಿ ನಿದ್ದೆ ಮಾಡುವುದಿಲ್ಲ. ಇದರಿಂದ ಮನುಷ್ಯನ ರಕ್ತ ಹೆಪ್ಪುಗಟ್ಟಿ ಹೃದಯ ಸ್ತಂಭನ ಉಂಟಾಗಬಹುದು ಎಂದರು.
ಬಿಪಿ, ಸುಗರ್, ಕೊಲೆಸ್ಟ್ರಾಲ್ ಚೆಕ್ ಅಪ್ ಮಾಡಿಸಿದರೆ ಹೃದಯಾಘಾತದ ಸಂಭವನೀಯತೆಯನ್ನು ಪತ್ತೆಹಚ್ಚಿ ದೂರ ಮಾಡಬಹುದು. ಆದದು ದಿಢೀರ್ ಅಂತ ಹೃದಯಾಘಾತ ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿದೆ. ಸಣ್ಣ ಸಣ್ಣ ವಯಸ್ಸಿನವರೂ ಇದಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕೆ ಸರಿಯಾದ ಕಾರಣ ಇದುವರೆಗೂ ಪತ್ತೆಯಾಗಿಲ್ಲ ಎಂದರು.
ಕೊರೊನಾ, ಲಸಿಕೆ ಕಾರಣವೇ?
ಹೃದಯಾಘಾತಕ್ಕೆ ಕಾರಣಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ. ಕೊರೊನಾದಿಂದಾಗಲೀ, ಅಥವಾ ಲಸಿಕೆಯಿಂದಾಗಲೀ ಹೃದಯಾಘಾತ ಸಂಭವಿಸಬಹುದು ಎನ್ನುವುದು ಸಾಬೀತಾಗಿಲ್ಲ. ಮಾಂಸಾಹಾರ ಸೇವನೆಯಿಂದಲೂ ಹೃದಯಾಘಾತ ಸಂಭವಿಸುವುದಿಲ್ಲ. ರಾಸಾಯನಿಕಯುಕ್ತ ತರಕಾರಿ, ಕರಿದ ಎಣ್ಣೆಯಿಂದ ಮಾಡಿದ ಆಹಾರಗಳಿಗಿಂತ ಮಾಂಸಾಹಾರವೇ ಉತ್ತಮ. ಆದರೆ ಮೀನು ಹಾಗೂ ಶುದ್ಧ ಸಸ್ಯಹಾರ ಆರೋಗ್ಯಕ್ಕೆ ಒಳ್ಳೆಯದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಅವರು ಮಾಹಿತಿ ನೀಡಿದರು.
ಯುವಕರು ರಾತ್ರಿಯವರೆಗೂ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿರುವ ಕಾರಣ ಉತ್ತಮ ನಿದ್ರೆ ಇಲ್ಲ. ದಿನಕ್ಕೆ ಕನಿಷ್ಠ 7-8 ಗಂಟೆಗಳ ಗುಣಮಟ್ಟದ ನಿದ್ರೆ ಅತ್ಯವಶ್ಯ. ಎಸಿ ಹಾಗೂ ಕೃತಕ ಪರಿಸರದಲ್ಲಿ ದಿನಕಳೆಯುತ್ತಿರುವವರು ನೀರಿನ ಅವಶ್ಯಕತೆಯ ಅರಿವಿಲ್ಲದೆ ಕಡಿಮೆ ನೀರು ಕುಡಿಯುತ್ತಾರೆ. ಇದು ರಕ್ತದ ಹೆಪ್ಪುಗಟ್ಟುವಿಕೆಯನ್ನು ಉಂಟುಮಾಡಿ ಹೃದಯಾಘಾತ ಅಥವಾ ಸ್ತಂಭನಕ್ಕೆ ಕಾರಣವಾಗಬಹುದು.. ವ್ಯಾಯಾಮ ಇಲ್ಲದ ಜೀವನಶೈಲಿಯು ಅಪಾಯಕಾರಿಯಾಗಿದೆ. 50 ವರ್ಷದ ನಂತರ ವ್ಯಾಯಾಮ ಪ್ರಾರಂಭಿಸುವ ಬದಲು, ಆ ಅಭ್ಯಾಸ ಬಾಲ್ಯದಿಂದಲೇ ಆರಂಭವಾಗಬೇಕು, ಎಂದು ಸಲಹೆ ನೀಡಿದರು.
“ಹೃದಯ ಸಂಬಂಧಿ ಸಮಸ್ಯೆಗಳ ಅಪಾಯದ ಸೂಚನೆ ಇರುವವರು, ಕುಟುಂಬದಲ್ಲಿ ಹೃದಯಾಘಾತದ ಇತಿಹಾಸ ಇರುವವರು, ತಡವಾಗಿ ವ್ಯಾಯಾಮ ಪ್ರಾರಂಭಿಸಿದವರು, ಜಡ ಜೀವನಶೈಲಿ ಹೊಂದಿರುವವರು ಪ್ರತಿವರ್ಷ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು,” ಎಂದು ಡಾ.ಕುಂಬ್ಳೆ, ಸಲಹೆ ನೀಡಿದರು. ರಕ್ತಪರೀಕ್ಷೆ, ಕ್ರಿಯಾಟಿನಿನ್, ಲಿಪಿಡ್ ಪ್ರೊಫೈಲ್, ಇಸಿಜಿ, ಎಕೋಕಾರ್ಡಿಯೋಗ್ರಾಂ, ಟ್ರೆಡ್‌ಮಿಲ್ ಟೆಸ್ಟ್ (TMT) ಹಾಗೂ ಹಾಗೂ ಹೃದಯ ತಜ್ಞರ ಸಮಾಲೋಚನೆ ನಡೆಸಬೇಕು ಎಂದರು.
ಹೃದಯ ತಪಾಸಣಾ ಶಿಬಿರ: ಮಂಗಳೂರು ಇಂಡಿಯಾನಾ ಆಸ್ಪತ್ರೆಯು ಜನರಲ್ಲಿ ಜಾಗೃತಿ ಮೂಡಿಸಲು ʻಲವ್ ಯೂವರ್ ಹಾರ್ಟ್’ ಪ್ಯಾಕೇಜ್ ಅನ್ನು ರೂ. 1999/-ಗೆ ನೀಡುತ್ತಿದೆ (ಸಾಧಾರಣ ಶುಲ್ಕ ರೂ. 4500/-). ಈ ವಿಶೇಷ ತಪಾಸಣಾ ಅವಕಾಶ ಜುಲೈ 15 ರಿಂದ 31, 2025 ರವರೆಗೆ ಲಭ್ಯವಿದೆ. ಅಪಾಯಿಂಟೆಂಟ್ ಬುಕ್ ಮಾಡಲು 9611953300ಗೆ ಕರೆ ಮಾಡುವಂತೆ ಆಸ್ಪತ್ರೆಯ ಪ್ರಮುಖರಾದ ವಿಜಯಚಂದ್ರ ವಿವರಿಸಿದರು.
ಆಸ್ಪತ್ರೆಯ ಮಾರ್ಕೆಟಿಂಗ್ ಪ್ರಮುಖರಾದ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದು ಪ್ರಾಸ್ತಾವಿಕ ಮಾತನಾಡಿದರು.