ನವದೆಹಲಿ: ಭಾರತದ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಗಗನಯಾನಿಗಳು ‘ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ (ಐಎಸ್‌ಎಸ್) ಜುಲೈ 14ರಂದು ಭೂಮಿಗೆ ಮರಳಲಿದ್ದಾರೆ.
‘ಆ್ಯಕ್ಸಿಯಂ–4’ ಯೋಜನೆಯ ಪ್ರಗತಿಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ. ಡ್ರ್ಯಾಗನ್ ಬಾಹ್ಯಾಕಾಶ ಕೋಶವನ್ನು ಐಎಸ್‌ಎಸ್‌ನಿಂದ ಅನ್‌ಡಾಕ್ (ಬೇರ್ಪಡಿಸುವುದು) ಮಾಡಬೇಕಿದೆ. ಆ ಪ್ರಕ್ರಿಯೆಗೆ ಜುಲೈ 14ರ ದಿನಾಂಕ ನಿಗದಿಪಡಿಸಿದ್ದೇವೆ’ ಎಂದು ನಾಸಾ ಅಧಿಕಾರಿ ಸ್ಟೀವ್ ಸ್ಟಿಚ್ ಗುರುವಾರ ತಿಳಿಸಿದ್ದಾರೆ.
‘ಆ್ಯಕ್ಸಿಯಂ–4’ ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ‘ಡ್ರ್ಯಾಗನ್’ ಬಾಹ್ಯಾಕಾಶ ಕೋಶವನ್ನು ಹೊತ್ತ ಸ್ಪೇಸ್‌ಎಕ್ಸ್‌ನ ‘ಫಾಲ್ಕನ್–9’ ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಜೂನ್ 25ರಂದು ನಭಕ್ಕೆ ಚಿಮಿತ್ತು.