ಪುತ್ತೂರು ʻಬೇಬಿ ಡೆಲಿವರಿʼ ಪ್ರಕರಣ ಆರೋಪಿಯ ತಂದೆಗೆ ಬಿಜೆಪಿ ನೋಟೀಸ್

ಪುತ್ತೂರು: ಪುತ್ತೂರು ʻಬೇಬಿ ಡೆಲಿವರಿʼ ಪ್ರಕರಣದ ಆರೋಪಿ ಶ್ರೀಕೃಷ್ಣನ ತಂದೆ, ಬಿಜೆಪಿ ಮುಖಂಡ, ಪುತ್ತೂರು ನಗರ ಸಭಾ ಸದಸ್ಯ ಪಿ.ಜಿ.ಜಗನ್ನಿವಾಸ್ ರಾವ್ ಗೆ ಬಿಜೆಪಿಯಿಂದ ಶಿಸ್ತು ಕ್ರಮದ ಎಚ್ಚರಿಕೆಯ ನೋಟೀಸ್ ನೀಡಲಾಗಿದೆ.


ಪಿ.ಜಿ.ಜಗನ್ನಿವಾಸ್ ರಾವ್ ಪುತ್ರ ಶ್ರೀಕೃಷ್ಣ ಯುವತಿಗೆ ವಂಚನೆ ಎಸಗಿದ ಪ್ರಕರಣದಿಂದ ಬಿಜೆಪಿ ಪಕ್ಷಕ್ಕೆ ಮುಜುಗರ ಉಂಟಾಗಿದೆ. ನಿಮ್ಮ ಮಗ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿ ವಂಚನೆ ಮಾಡಿರುವ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ಸಂತ್ರಸ್ತೆಯ ಪೋಷಕರು ನೀವು ನ್ಯಾಯಸಮ್ಮತವಾಗಿ ನಡೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ. ತಾವು ಪಕ್ಷದಲ್ಲಿದ್ದು ನ್ಯಾಯಯುತವಾಗಿ, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿತ್ತು. ಸಂತ್ರಸ್ತೆ‌ ಯುವತಿಗೆ ನ್ಯಾಯ ಒದಗಿಸಿಕೊಡಬೇಕು, ಇಲ್ಲದಿದ್ದಲ್ಲಿ ಪಕ್ಷದ ಹಿತದೃಷ್ಟಿಯಿಂದ ನಿಮ್ಮ ಮೇಲೆ ಕ್ರಮ‌ ಕೈಗೊಳ್ಳಬೇಕಾಗುತ್ತದೆ. ಈ ಬಗ್ಗೆ ತಕ್ಷಣವೇ ಉತ್ತರಿಸಬೇಕು ಎನ್ನುವ ಎಚ್ಚರಿಕೆಯ ನೋಟೀಸ್ ನೀಡಲಾಗಿದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

 

error: Content is protected !!