ಖ್ಯಾತ ಫುಟ್ಬಾಲ್‌ ಆಟಗಾರ ಡಿಯೋಗೊ ಲ್ಯಾಂಬೋರ್ಗಿನಿ ಅಪಘಾತದಲ್ಲಿ ದುರ್ಮರಣ


ಮ್ಯಾಡ್ರಿಡ್: ಲಿವರ್‌ಪೂಲ್ ಫುಟ್ಬಾಲ್ ಆಟಗಾರ ಡಿಯೋಗೊ ಜೋಟಾ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. 28 ವಯಸ್ಸಿನ ಜೋಟಾ ಅವರು ಎರಡು ವಾರಗಳ ಹಿಂದಷ್ಟೇ ಮದುವೆಯಾಗಿದ್ದರು. ಉತ್ತರ ಸ್ಪೇನ್‌ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ.
ಜೋಟಾ ಅವರು ಲ್ಯಾಂಬೋರ್ಗಿನಿ ಚಾಲನೆ ಮಾಡುತ್ತಿದ್ದರು. ಪೋರ್ಚುಗೀಸ್ ಗಡಿಯ ಸಮೀಪವಿರುವ ಝಮೊರಾ ಪ್ರಾಂತ್ಯದ ಸೆರ್ನಾಡಿಲ್ಲಾ ಬಳಿ A-52 ನಲ್ಲಿ ಓವರ್‌ಟೇಕ್ ಮಾಡುವಾಗ ಕಾರಿನ ಟೈರ್‌ ಸ್ಫೋಟಗೊಂಡು ಅಪಘಾತ ಸಂಭವಿಸಿದೆ.
ಡಿಯೋಗೊ ಅವರ ಕಿರಿಯ ಸಹೋದರ, ಪೋರ್ಚುಗೀಸ್ ತಂಡದ ಎಫ್‌ಸಿ ಪೆನಾಫಿಯೆಲ್ ಪರ ಆಡಿದ್ದ ಸಹ ವೃತ್ತಿಪರ ಫುಟ್‌ಬಾಲ್ ಆಟಗಾರ ಆಂಡ್ರೆ ಸಿಲ್ವಾ (26) ಕೂಡ ವಾಹನದಲ್ಲಿದ್ದರು. ಅಪಘಾತದಲ್ಲಿ ಇಬ್ಬರೂ ಸಹೋದರರು ಪ್ರಾಣ ಕಳೆದುಕೊಂಡಿದ್ದಾರೆ. ಜೂನ್ 22 ರಂದು ಪೋರ್ಟೊದಲ್ಲಿ ಜೋಟಾ, ರೂಟ್ ಕಾರ್ಡೋಸೊ ಅವರನ್ನು ವಿವಾಹವಾಗಿದ್ದರು.

error: Content is protected !!