ಜು.7ರಂದು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ 17ನೇ ವಾರ್ಷಿಕೋತ್ಸವ, ʻರಂಗ ಭಾಸ್ಕರ’ ಪ್ರಶಸ್ತಿ ಪ್ರದಾನ

ಮಂಗಳೂರು: ಕರಾವಳಿಯ ಪ್ರತಿಷ್ಠಿತ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸಂಘಟನೆಯಾದ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ 17ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜು.7ರಂದು ಸೋಮವಾರ ಸಂಜೆ 5.30ರಿಂದ ಮಂಗಳೂರಿನ ಸಂತ ಆಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯದ -ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ವಿಶ್ವಸ್ಥ ಮಂಡಳಿ ಸದಸ್ಯ ಮೈಮ್ ರಾಮದಾಸ್ ಹೇಳಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತಾಡಿದ ಅವರು, ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮ ಅಗರಿ ಶ್ರೀನಿವಾಸ ಭಾಗವತ ವೇದಿಕೆಯಲ್ಲಿ 2008 ರಲ್ಲಿ ಪ್ರಾರಂಭವಾದ ರಂಗಸಂಗಾತಿ ಸಾಂಸ್ಕೃತಿಕ ಸಂಘಟನೆ ಸಮಾನ ಮನಸ್ಕರು ಸೇರಿ ಕಟ್ಟಿದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಸ್ಥೆ ಬರ್ಬರಿಕ, ನೆಮ್ಮದಿ ಅಪಾರ್ಟ್‌ ಮೆಂಟ್, ಮರಗಿಡಬಳ್ಳಿ, ಕೇಳೇಸಖ ಚಂದ್ರಮುಖಿ, ದಾಟ್ಸ್ ಆಲ್ ಯುವರ್ ಆನರ್, ಸಂಪಿಗೆ ನಗರ ಪೋಲೀಸ್ ಸ್ಟೇಷನ್ ಮನುಗೆಲೆ ಮಿನುಗೆ ನಕ್ಷತ್ರ ಮುಂತಾದ ನಾಟಕಗಳ ಪ್ರದರ್ಶನ, ಪ್ರತೀ ವರ್ಷ ಫೆಬ್ರುವರಿ 14ಕ್ಕೆ ಪುಸ್ತಕ ಪ್ರೇಮಿಗಳ ದಿನಾಚರಣೆ, ದಿ.ಕುಂಬ್ಳೆ ಸುಂದರ ರಾವ್ ರವರ ನೆನಪಿನಲ್ಲಿ ʻಕುಂಬ್ಳೆ ಪ್ರಶಸ್ತಿ’ ಕಾರ್ಯಕ್ರಮ, ದಿ.ಬೈಕಾಡಿ ಜನಾರ್ದನ ಆಚಾರ್ ನೆನಪಿನಲ್ಲಿ ಬೈಕಾಡಿ ಪ್ರತಿಷ್ಠಾನದ ಸಹಯೋಗದೊಂದಿಗೆ ಬೈಕಾಡಿ: ಪ್ರಶಸ್ತಿ ಮತ್ತು ಮಕ್ಕಳ ನಾಟಕ ಪ್ರದರ್ಶನ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿರುವ ಕ್ರಿಯಾಶೀಲ ಸಂಘಟನೆ ನಾಟಕ ಕಾರ್ಯಾಗಾರ, ಪುಸ್ತಕ ಬಿಡುಗಡೆ ಕಾರ್ಯಕ್ರಮ, ವಿಚಾರ ಗೋಷ್ಟಿ, ಆಶ್ರಮಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸುವುದನ್ನೂ ಸಂಸ್ಥೆ ನಿರಂತರವಾಗಿ ಮಾಡುತ್ತಾ ಇದೆ ಎಂದರು.

ಬಹುಮುಖ ಪ್ರತಿಭೆ, ರಂಗಸಂಗಾತಿಯ ಸ್ಥಾಪಕ ಸದಸ್ಯ ದಿವಂಗತ ಭಾಸ್ಕರ ನೆಲ್ಲಿತೀರ್ಥ ನೆನಪಲ್ಲಿ ನೀಡಲಾಗುವ ರಂಗ ಭಾಸ್ಕರ ಪ್ರಶಸ್ತಿ ಕಾರ್ಯಕ್ರಮ ನಡೆಯಲಿದ್ದು ಈ ಬಾರಿಯ ಪ್ರಶಸ್ತಿಯನ್ನು ಹಿರಿಯ ನಟ, ನಿರ್ದೇಶಕ, ಚಲನಚಿತ್ರ ನಟ ಲಕ್ಷ್ಮಣ ಕುಮಾರ್ ಮಲ್ಲೂರುಗೆ ರಂಗಭಾಸ್ಕರ-2025 ಪ್ರದಾನ ಮಾಡಲಾಗುತ್ತಿದೆ. ಈ ಪ್ರಶಸ್ತಿಯನ್ನು ಉಡುಪಿಯ ಕಲಾಪೋಷಕ ಮತ್ತು ರಂಗಪ್ರೇಮಿ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿಸುತ್ತಿದ್ದಾರೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

1962 ರಲ್ಲಿ ಬಾಲನಟನಾಗಿ ರಂಗಪ್ರವೇಶ ಮಾಡಿದ ಲಕ್ಷ್ಮಣ ಕುಮಾರ್ ಮಲ್ಲೂರು ಕಳೆದ 65 ವರ್ಷಗಳಿಂದ ನಿರಂತರ ರಂಗಚಟುವಟಿಕೆಗಳಿಂದ ನಟನಾಗಿ, ನಿರ್ದೇಶಕನಾಗಿ ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಒರಿಯೆ ಮಗೆ ನಾಟಕ ನಿರ್ದೇಶನ, ಒರಿಯರ್ದೊರಿ ಆಸಲ್, ಬಂಜಿ ನಿಮಿಷ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಣೆ, ಧೈರ್ಯಗೊಂಜಿ ದೇವೆರ್, ಕೋಟಿಚೆನ್ನಯ, ಪರಬಗ್ ಪೋಪಿಕಾಲ, ಅಜ್ಜಿ ಸಾಂಕಿದಿ ಪುಳ್ಳಿ, ಕಲಂಕ್‌ದಿ ನೀರ್, ಮುಂತಾದ ತುಳು ನಾಟಕ, ಆಪಾಡದ ಒಂದು ದಿನ, ತುಘಲಕ್, ಜೈಸಿದನಾಯ್ಕ, ಉರುಳು, ಕೋರ್ಟ್ ಮಾರ್ಶಲ್, ಊರೆಲ್ಲಾ ಹೇಳೋಡಿ, ದಿವ್ಯದರ್ಶನ, ಮಳೆ ನಿಲ್ಲುವವರೆಗೆ ಮುಂತಾದ ಕನ್ನಡ ನಾಟಕಗಳಲ್ಲಿ ಅದ್ಭುತ ಅಭಿನಯ ನೀಡಿ ಮನೆಮಾತಾಗಿದ್ದಾರೆ. ಬಂಗಾರ್ ಪಟೇರ್, ಚಾಲಿಪೋಲಿಲು, ಜಬರ್‌ಸ್ಟ್ ಶಂಕರ ಮುಂತಾಗಿ 30 ಕ್ಕೂ ಹೆಚ್ಚು ಕನ್ನಡ, ತುಳು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ಧಾರಾವಾಹಿಯಲ್ಲೂ, ಕಿರುಚಿತ್ರಗಳಲ್ಲೂ ಜಾಹೀರಾತುಗಳಲ್ಲೂ ತನ್ನ ಅಭಿಯನ ಸಾಮರ್ಥವನ್ನು ಮೆರೆದಿದ್ದಾರೆ.

12015 ರಲ್ಲಿ ಆರಂಭವಾದ ‘ರಂಗ ಭಾಸ್ಕರ ಪ್ರಶಸ್ತಿಯನ್ನು ಈ ಹಿಂದೆ ವೇಣುಮಿತ್ರ ಕಾಸರಗೋಡು(2015), ವಿಟ್ಲ ಮಂಗೇಶ್ ಭಟ್ (2016), ಶ್ರೀಮತಿ ರೋಹಿಣಿ ಜಗರಾಮ್ (2017). ಜಗನ್ ಪವಾರ್ ಬೇಕಲ್(2018), ಐ.ಕೆ.ಬೊಳುವಾರು(2019), ಕಾಸರಗೋಡು ಚಿನ್ನ(2020), ಗಣೇ ಕೊಲೆಕಾಡಿ(2021), ಕೆ.ರಾಧಾಕೃಷ್ಣ(2022), ಡಾ.ಎಂ.ಗಣೇಶ್ ಹೆಗ್ಗೋಡು(2023) ನವೀನ್ ಡಿ ಪಡೀಲ್(2024) ರವರಿಗೆ ಕೊಡಲಾಗಿದೆ.

ಕರ್ಮಯೋಗಿ ಡಾ.ಹರಿಕೃಷ್ಣ ಪುನರೂರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಪ್ರಸಿದ್ಧ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರು ನಡೆಸಿಕೊಡಲಿದ್ದಾರೆ. ಹಿರಿಯ ಜನಪದ ವಿದ್ವಾಂಸರಾದ ಡಾ.ಬಿ.ಎ.ವಿವೇಕ ರೈಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ರಂಗ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ ಬೈಲ್, ಡಾ.ಆಶ್ವಿನ್ ದೇಸಾ, ಶ್ರೀ ಪುಂಡಲೀಕ ಹೊಸಬೆಟ್ಟು, ಶ್ರೀ ಸಂತೋಷ್ ಶೆಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದಾರೆ.

ಸಭಾಕಾರ್ಯಕ್ರಮದ ನಂತರ ಹೆಗ್ಗೋಡಿನ ಜನಮನದಾಟ ತಂಡದಿಂಡ ಎರಡು ಕನ್ನಡ ನಾಟಕ ಪ್ರದರ್ಶನ ಇರಲಿದೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮಾಯಾಮೃಗ (ನಿರ್ದೇಶನ: ಶ್ರೀ ರಂಜಿತ್ ಶೆಟ್ಟಿ ಕುಕ್ಕುಡೆ) ಮತ್ತು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್‌ರವರ ಎದೆಯ ಹಣತೆ (ನಿರ್ದೇಶನು ಶ್ರೀ ಗಣೇಶ್ ಎಂ.ಹೆಗ್ಗೋಡು) ನಾಟಕ ಪ್ರದರ್ಶನ ಇರಲಿದ್ದು ಪ್ರವೇಶ ಉಚಿತ ಎಂದು ಸಂಘಟಕರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ.ಗೋಪಾಲಕೃಷ್ಣ ಶೆಟ್ಟಿ, ಸಂಸ್ಥೆಯ ವಿಶ್ವಸ್ಥ ಮಂಡಳಿ ಸದಸ್ಯರಾದ ಮೈಮ್ ರಾಮದಾಸ್, ಗೋಪಿನಾಥ್ ಭಟ್, ಕರುಣಾಕರ ಶೆಟ್ಟಿ, ಸುರೇಶ್ ಬೆಳ್ಳಡ ಬಟ್ರೆ, ನಾಗೇಶ್ ಶೆಟ್ಟಿ ಬಜಾಲ್, ರಂಜನ್ ಬೋಳೂರು, ಪ್ರಸಾದ್ ಶೆಟ್ಟಿ, ಚಂದ್ರಶೇಖರ ಕೂಳೂರು, ಜಯಶೀಲ್, ಜಯದೇವ್, ಹರಿಪ್ರಸಾದ್ ಕುಂಪಲ, ಜಗನ್ನಾಥ್ ಕಲ್ಲಾಪು, ಶಶಿರಾಜ್ ಕಾವೂರು ಮತ್ತು ಇತರರು ಉಪಸ್ಥಿತರಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!