ಮಂಗಳೂರು: ಭಾರತದ ಪ್ರಧಾನ ಮಂತ್ರಿ ಹಾಗೂ ಕೇಂದ್ರ ಸರ್ಕಾರದ ಗೃಹ ಮಂತ್ರಿಯ ಚಿತ್ರದೊಂದಿಗೆ ಮಧ್ಯ ಮಹಿಳೆಯೋರ್ವರ ನಗ್ನ ಫೋಟೋವನ್ನು ಅಳವಡಿಸಿ ಹಿಂದೂ ದೇವರುಗಳ ಫೋಟೋಗಳನ್ನು ಬಿಂಬಿಸುವ ರೀತಿಯಲ್ಲಿ ಕಾರ್ಟೂನ್ ಚಿತ್ರ ಇರುವ ಫೋಟೋಗಳ ಕೆಳಗೆ ಶಿರ್ಷಿಕೆಯನ್ನು ವಾಟ್ಸ್ಯಾಪ್ ಸ್ಟೇಟಸ್‌ನಲ್ಲಿ ಹಾಕಿ ಜು. 1ರಂದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ಆರೋಪಿಯ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜಿ.ಎಂ. ಜೋಸ್ ಎಂಬಾತ ಪ್ರಕರಣದ ಆರೋಪಿ.
ಈತ ಧಾರ್ಮಿಕ ಭಾವನೆಗೆ ಧಕ್ಕೆ ಯಾಗುವಂತೆ, ದ್ವೇಷ ಭಾವನೆ ಉಂಟು ಮಾಡುವಂತಹ ಪೋಸ್ಟ್ ನ್ನು ಉದ್ದೇಶ ಪೂರ್ವಕವಾಗಿ ಹಾಕಿದ್ದಾಗಿ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 57/2025 ಕಲಂ: Us 353(2) BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.