ದಾವಣಗೆರೆ: ಕೇವಲ 24 ವರ್ಷದ ಯುವಕನ ಜೊತೆ 48 ವರ್ಷದ ಅತ್ತೆ ಓಡಿ ಹೋದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಅಸಲಿಗೆ ಐನಾತಿ ಅತ್ತೆಗೆ ಯುವಕನ ಜೊತೆ ಮೊದಲೇ ಅಕ್ರಮ ಸಂಬಂಧ ಇದ್ದು, ತಮ್ಮ ಸಂಬಂಧ ಗಟ್ಟಿಗೊಳಿಸಲು ಮಗಳನ್ನೇ ತನ್ನ ಎಳೆ ಲವ್ವರ್‌ಗೆ ಧಾರೆ ಎರೆದುಕೊಟ್ಟಳು ಎನ್ನುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಅಳಿಯ ಗಣೇಶ್ (24) ಹಾಗೂ ಅತ್ತೆ ಶಾಂತಾ (48) ಓಡಿಹೋಗಿ ಪರಾರಿಯಾದ ಘಟನೆ ಮುದ್ದೇನಹಳ್ಳಿಯಲ್ಲಿ ನಡೆದಿತ್ತು. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಮೇ 2 ರಂದು ಪ್ರತ್ಯೇಕ ದೂರುಗಳು ದಾಖಲಾಗಿತ್ತು.
ಓಡಿ ಹೋದ ಜೋಡಿ ಕೌಟುಂಬಿಕ ಸಂಬಂಧದಲ್ಲಿ ಅತ್ತೆ- ಅಳಿಯನಾಗಿದ್ದರೂ, ಮದುವೆ ಮಾಡಿಕೊಟ್ಟಿರುವ ಮಗಳು ಹೇಮಾವತಿಯು ಶಾಂತಾಳ ಸ್ವಂತ ಮಗಳಲ್ಲ. ತನ್ನ ಗಂಡನ ಮೊದಲ ಹೆಂಡತಿಯ ಮಗಳಾಗಿದ್ದು ಶಾಂತಾ ಮಲತಾಯಿ ಆಗಿದ್ದಾಳೆ.
ಶಾಂತಾ ಮೂರ್‍ನಾಲ್ಕು ವರ್ಷಗಳ ಹಿಂದೆಯೇ ಮರವಂಜಿಯ ಗಣೇಶ್ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಆಕೆ ತನ್ನ ಮಲಮಗಳು (ಗಂಡನ ಮೊದಲ ಹೆಂಡತಿಯ ಮಗಳು) ಹೇಮಾವತಿಯನ್ನು 25 ದಿನಗಳ ಹಿಂದಷ್ಟೇ ತಾನೇ ಮುಂದಾಗಿ ನಿಂತು ತಾನು ಸಂಬಂಧ ಇಟ್ಟುಕೊಂಡ ಯುವಕನೊಂದಿಗೆ ಮದುವೆ ಮಾಡಿಸಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ಮೊಬಲ್‌ನಲ್ಲಿದ್ದ ಚಾಟ್, ಪೋಟೊಗಳಿಂದ ಅಕ್ರಮ ಸಂಬಂಧ ಬಹಿರಂಗಗೊಂಡಾಗ ಬೆದರಿದ ಶಾಂತಾ, ಅದೇ ಯುವಕನೊಂದಿಗೆ ಪರಾರಿಯಾಗಿದ್ದಾಳೆ.
ಹೇಮಾವತಿ ಎಂಬುವರು ತನ್ನ ಗಂಡ ಗಣೇಶ್, ತನ್ನನ್ನು ಬಂಕ್ ಬಳಿ ನಿಲ್ಲಿಸಿ ಇಲ್ಲೇ ಹೋಗಿ ಬರುವುದಾಗಿ ಹೇಳಿ ಹೋದವರು ಇನ್ನೂ ಬಂದಿಲ್ಲ ಎಂದು ದೂರು ನೀಡಿದರೆ, ಶಾಂತಾಳ ಸಂಬಂಧಿ ಪೂಜಾ ಎಂಬುವರು ಅದೇ ದಿನ ತನ್ನ ಸಂಬಂಧಿ ಶಾಂತಾ ಕಾಣೆಯಾಗಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝