ಕಳತ್ತೂರಿನಲ್ಲಿ ಐಟಿಐ ಪ್ರಾರಂಭಿಸಲು ಮಂಜುನಾಥ ಭಂಡಾರಿ ಮನವಿ

ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಎಲ್ಲೂರು ಗ್ರಾಮದಲ್ಲಿ ಆರಂಭಗೊಂಡಿರುವ ಐ.ಟಿ.ಐ ತಾಂತ್ರಿಕ ಕಾಲೇಜು ಸ್ಥಗಿತಗೊಂಡಿದ್ದು ಇದನ್ನು ಕಳತ್ತೂರು ಗ್ರಾಮಕ್ಕೆ ವರ್ಗಾಯಿಸಿ, ಕೂಡಲೇ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ವಿಪ ಸದಸ್ಯ ಮಂಜುನಾಥ ಭಂಡಾರಿ ರಾಜ್ಯದ ವೈದ್ಯಕೀಯ, ಶಿಕ್ಷಣ ಹಾಗೂ ಕೌಶಲಯಾಭಿವೃದ್ಧಿ ಸಚಿವರಾದ ಡಾ. ಶರಣ ಪ್ರಕಾಶ್‌ ರುದ್ರಪ್ಪ ಪಾಟೀಲರು  ಹಾಗೂ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಸುಮಾರು 8 ವರ್ಷಗಳ ಹಿಂದೆ ಕಾಪು ತಾಲೂಕಿನ ಎಲ್ಲೂರು ಗ್ರಾಮದಲ್ಲಿ ಪ್ರಾರಂಭಗೊಂಡ ಐ.ಟಿ.ಐ ತಾಂತ್ರಿಕ ಕಾಲೇಜಿಗೆ ಸರಿಯಾದ ಕಟ್ಟಡವಿಲ್ಲದೆ ಗ್ರಾಮ ಪಂಚಾಯಿತಿಯ ಒಂದು ಸಣ್ಣ ಕೊಠಡಿಯಲ್ಲಿದೆ. ಕಾಲೇಜಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ತೀರಾ ನಿರಾಸೆಗೊಂಡು ಇದೀಗ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನಲೆಯಲ್ಲಿ ಪಕ್ಕದ ಕಳತ್ತೂರು ಗ್ರಾಮದಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಸರ್ಕಾರಿ ಜಾಗವನ್ನು ಐ.ಟಿ.ಐ ಕಾಲೇಜಿಗೆ ಮೀಸಲಿರಿಸಲಾಗಿದ್ದು, ಕಾಲೇಜನ್ನು ಶ್ರೀದಲ್ಲಿ ಇಲ್ಲಿಗೆ ವರ್ಗಾಯಿಸಿ ಸ್ವಂತ ಕಟ್ಟಡ ರಚನೆ ಮಾಡಿ, ಶೈಕ್ಷಣಿಕ ಚಟುವಟಿಕೆ ಪ್ರಾರಂಭಿಸುವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ರಸ್ತೆಯ ಪಕ್ಕದಲ್ಲಿರುವ ಕಳತ್ತೂರು ಗ್ರಾಮದಲ್ಲಿ ಸರಕಾರಿ ಜಾಗವನ್ನು ಐ.ಟಿ.ಐ ಕಾಲೇಜಿಗೆ ಮೀಸಲಿರಿಸಿದ್ದು, ಈ ಕಾಲೇಜನ್ನು ಇಲ್ಲಿಗೆ ವರ್ಗಾಯಿಸಿ ಸ್ವಂತ ಕಟ್ಟಡ ರಚನೆ ಮಾಡುವಂತೆ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ‌ ಡಾ। ದೇವಿ ಪ್ರಸಾದ್ ಶೆಟ್ಟಿ ಕೂಡಾ ಮಂಜುನಾಥ ಭಂಡಾರಿಯವರಲ್ಲಿ ಮನವಿ ಮಾಡಿದ್ದರು.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!