ಸುಳ್ಯ: ಜಾನುವಾರು ಸಾಗಾಟ ಪ್ರಕರಣದ ವಿಚಾರಣೆ ಸುಳ್ಯ ನ್ಯಾಯಾಲಯದಲ್ಲಿ ನಡೆದು ರತೀಶ್ ಮೇಲಿನ ಆರೋಪ ಸಾಬೀತಾಗಿದ್ದು ನ್ಯಾಯಾಲಯ ಶಿಕ್ಷೆ ವಿಧಿಸಿದೆ.

2023 ಜುಲೈ 13 ರಂದು ರತೀಶ್ ಜಾನುವಾರುಗಳನ್ನು ಸಾಕಲೆಂದು ಹಣ ನೀಡಿ ಖರೀದಿಸಿದ್ದ. ಆದರೆ ಅದನ್ನು ವಧೆ ಮಾಡುವ ಉದ್ದೇಶದಿಂದ ಪರವಾನಿಗೆ ಇಲ್ಲದೇ ಪಿಕ್ ಅಪ್ ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡು ಹೋಗುತ್ತಿದ್ದಾಗ ಸುಳ್ಯ ಪೊಲೀಸರು ಈತನ ವಾಹನವನ್ನು ಜಾಲ್ಸೂರು ಗ್ರಾಮದ ಸೋಣಂಗೇರಿಯ ಆರ್ತಾಜೆ ಎಂಬಲ್ಲಿ ತಡೆದು, ಆರೋಪಿಯನ್ನು ವಶಪಡಿಸಿಕೊಂಡು ಕೇಸು ದಾಖಲಿಸಿದ್ದರು.
2023ರ ಜುಲೈ 13ರಂದು ನಡೆದ ಪ್ರಕರಣದ ವಿಚಾರಣೆ ಸುಳ್ಯದ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಬಿ. ಮೋಹನ್ ಬಾಬು ಅವರು ನಡೆಸಿ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿ 3 ವರ್ಷಗಳ ಸಾದಾ ಕಾರಾಗೃಹ ವಾಸ ಮತ್ತು ಕಲಂ 6 ರಡಿ 3 ವರ್ಷಗಳ ಸಾದಾ ಕಾರಾಗೃಹ ವಾಸದ ಶಿಕ್ಷೆಯನ್ನು ವಿಧಿಸಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝