ಪರಮಾಣು ಸ್ಥಾವರಕ್ಕೆ ತೀವ್ರ ಹಾನಿ: ಒಪ್ಪಿಕೊಂಡ ಇರಾನ್, ಮತ್ತೆ ಗುಡುಗಿದ ಟ್ರಂಪ್‌

ನವದೆಹಲಿ: ವಾರಾಂತ್ಯದಲ್ಲಿ ಅಮೆರಿಕ ನಡೆಸಿದ ದಾಳಿಗಳಿಂದಾಗಿ ದೇಶದ ಪರಮಾಣು ಸ್ಥಾವರಗಳು “ತೀವ್ರವಾಗಿ ಹಾನಿಗೊಳಗಾಗಿವೆ” ಎಂದು ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ದೃಢಪಡಿಸಿದ್ದಾರೆ.

Esmail Baghaei

ಅಲ್ ಜಜೀರಾ ಜೊತೆ ಮಾತನಾಡಿದ ಬಘೈ, ಹೆಚ್ಚಿನ ವಿವರಹಳನ್ನು ನೀಡಲು ನಿರಾಕರಿಸುತ್ತಾರೆ. ಆದರೆ ಬಂಕರ್ ಬಸ್ಟರ್ ಬಾಂಬ್‌ಗಳನ್ನು ಬಳಸಿಕೊಂಡು ಅಮೆರಿಕದ ಬಿ -2 ಬಾಂಬರ್‌ಗಳು ಭಾನುವಾರ ನಡೆಸಿದ ದಾಳಿಗಳು ಗಮನಾರ್ಹವಾಗಿದ್ದವು ಎಂದು ಒಪ್ಪಿಕೊಂಡಿದ್ದಾರೆ.

“ನಮ್ಮ ಪರಮಾಣು ಸ್ಥಾವರಗಳು ಕೆಟ್ಟದಾಗಿ ಹಾನಿಗೊಳಗಾಗಿರುವುದು ನಿಜ ಎಂದು ಅವರು ಹೇಳಿದ್ದಾರೆ. ಈತನ್ಮಧ್ಯೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇರಾನ್‌ ಮತ್ತೆ ಪರಮಾಣು ಕೆಲಸದಲ್ಲಿ ನಿರತರಾದರೆ ಮತ್ತೊಮ್ಮೆ ದಾಳಿ ನಡೆಸಲಾಗುವುದು ಎಂದು ಗುಡುಗಿದ್ದಾರೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!