ಇಂದಿರಾ ಗಾಂಧಿಗೆ ಬಾಲ ಅಲ್ಲಾಡಿಸುವ ಡ್ಯಾಷ್‌ ಡ್ಯಾಷ್‌ ಡ್ಯಾಷ್‌ಗಳಾಗಿದ್ರು ಅಂತ ಸಿ.ಟಿ. ರವಿ ಹೇಳಿದ್ದು ಯಾರಿಗೆ?

ಮಂಗಳೂರು: ಒಂದು ವೇಳೆ ತುರ್ತು ಪರಿಸ್ಥಿತಿ ಹೇರುವ ಸಂದರ್ಭದಲ್ಲಿ ಡಾ ಬಿ.ಆರ್‌. ಅಂಬೇಡ್ಕರ್‌ ಬದುಕಿದ್ದರೆ ಕಾಂಗ್ರೆಸ್‌ ಅವರನ್ನು ಕೂಡಾ ಜೈಲಿಗೆ ಹಾಕ್ತಾ ಇದ್ರು. ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿಯ ಒಂದು ನಾಯಿಯೂ ಪಾಲ್ಗೊಂಡಿರಲಿಲ್ಲ ಎನ್ನುವ ಕಾಂಗ್ರೆಸಿಗರೇ ಆ ಸಂದರ್ಭದಲ್ಲಿ ಬಿಜೆಪಿ, ಜನಸಂಘ ಹುಟ್ಟಿರಲಿಲ್ಲ. ನಾವು ದೇಶಕ್ಕೆ ನಿಯತ್ತಿರುವ ನಾಯಿಗಳಾದರೆ ಈ ಕಾಂಗ್ರೆಸಿಗರು ಸಂವಿಧಾನ, ಪ್ರಜಾಪ್ರಭುತ್ವ, ದೇಶಕ್ಕೆ ನಿಯತ್ತಾಗಿರಲಿಲ್ಲ, ಇಂದಿರಾ ಗಾಂಧಿಗೆ ಬಾಲ ಅಲ್ಲಾಡಿಸುವಂಥಾ ಡ್ಯಾಷ್‌ ಡ್ಯಾಷ್‌ ಡ್ಯಾಷ್‌ಗಳಾಗಿದ್ರು ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಗಂಭೀರ ಆರೋಪ ಮಾಡಿದ್ದಾರೆ.

ಅವರು ಕದ್ರಿ ಗೋರಕ್ಷನಾಥ ಸಭಾಭವನದಲ್ಲಿ ತುರ್ತು ಪರಿಸ್ಥಿತಿಯ 50ನೇ ವರ್ಷದ ಕರಾಳ ಇತಿಹಾಸ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಮಾತಾಡಿ, ದೇಶದ ರಕ್ಷಣೆಯಂತಹಾ ಸಂದರ್ಭದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗುತ್ತದೆ, ಆದರೆ ಇಂದಿರಾ ಗಾಂಧಿ ತನ್ನ ಹಾಗೂ ಕಾಂಗ್ರೆಸ್‌ ರಕ್ಷಣೆಗಾಗಿ ಅಲಹಾಬಾದ್‌ ಕೋರ್ಟ್‌ ತೀರ್ಪು ವಿರುದ್ಧವಾಗಿ ತುರ್ತು ಪರಿಸ್ಥಿತಿ ಹೇರಿದ್ರು. 21 ತಿಂಗಳ ಕಾಲ ನಮ್ಮ ಸಂವಿಧಾನ ಆಸ್ಪತ್ರೆ ಸೇರಿ ಕೋಮಾದಲ್ಲಿತ್ತು. ಪ್ರಜಾ ಪ್ರಭುತ್ವದ ಪರವಾಗಿ ಮಾತಾಡಿದ ದೇವಗೌಡ, ಪಿಜಿ ಆರ್‌ ಸಿಂಧ್ಯಾ, ದತ್ತಾತ್ರೇಯ ಹೊಸಬಾಳೆ, ಇಲ್ಲಿನ ಡಾ ಪ್ರಭಾಕರ ಭಟ್‌ ಕಲ್ಲಡ್ಕ, ಕಮಲಕ್ಕ, ವಾಮನ್‌ ಶೆಣೈ ಹೀಗೆ ಕೇಂದ್ರದಲ್ಲಿ ಜಯಪ್ರಕಾಶ್‌ ನಾರಾಯಣ್‌, ಅಟಲ್‌ ಬಿಹಾರಿ ವಾಜಪೇಯಿ, ಅಡ್ವಾಣಿ, ಜಾರ್ಜ್‌ ಫೆರ್ನಾಂಡಿಸ್‌ ಇವರೆಲ್ಲ ಸಾವಿರಾರು ಜನರು ಬಂಧಿಗಳಾಗಿದ್ದರು. ಈ ಸಂವಿಧಾನದ ಪುಸ್ತಕವನ್ನು ಕೈಯ್ಯಲ್ಲಿ ಹಿಡಿದುಕೊಂಡು ಹೋಗುವ ಕಾಂಗ್ರೆಸಿಗೆ ಸಂವಿಧಾನದ ಬಗ್ಗೆ ಮಾತಾಡುವ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.

ʻಹೈದರಬಾದ್‌ ಗೋಲಿʼ ಲಾಠಿ ಎಂದು ಕರೆಯಲಾಗುತ್ತಿದ್ದ ಲಾಠಿಗೆ ಖಾರದ ಪುಡಿ ಹಾಕಿ ಅದನ್ನು ಗುಧದ್ವಾರಕ್ಕೆ ತುರುಕಿಸಿ ಶಿಕ್ಷೆ ಕೊಡಲಾಗುತ್ತಿತ್ತು. ಚಪಾತಿ ಲಟ್ಟಣಿಗೆ ಎಂದು ಕರೆಯಲ್ಪಡುತ್ತಿದ್ದ ಶಿಕ್ಷೆಯಲ್ಲಿ ಹೋರಾಟಗಾರ ಚಪಾತಿಯಾಗಿದ್ದರೆ ಒನಕೆಯಲ್ಲಿ ಇಬ್ಬರು ಪೊಲೀಸರು ಅವರನ್ನು ಲಟ್ಟಿಸುತ್ತಿದ್ದರು. ಕೈಗಳನ್ನು ಹಿಂದಕ್ಕೆ ಕಟ್ಟಿ ನೇಯುಹಾಕಲಾಗುತ್ತಿತ್ತು. ರುಕ್ಮಯ ಪೂಜಾರಿ ಶಿಕ್ಷೆ ಅನುಭವಿಸಿದ್ದರು. ಇಲ್ಲಿನ ಇಸ್ಮಾಯಿಲ್‌ ಎಂಬಾತ ಹಾಕಿದ್ದ ಇಂದಿರಾ ನನ್ನ ತಾಯಿ ಎಂದು ಬೋರ್ಡ್‌ ಕಳೆಗಡೆ ಯಾರೋ ಒಬ್ಬರು ತಂದೆ ಯಾರು ಎಂದು ಬರೆದಿದ್ದ. ಕೊನೆಗೆ ಆ ಕೊನೆಗೆ ಬೋರ್ಡ್‌ ಇರ್ಲಿಲ್ಲ. ಇಸ್ಮಾಯಿಲ್‌ ಕೂಡ ನಾಪತ್ತೆಯಾದ. ಅದೇ ಸಮಯ ಒಂದು ಅಪರಿಚಿತ ಶವ ಸಿಕ್ಕಾಗ ಇಲ್ಲಿನ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ ಸೇರಿ ಒಟ್ಟು 40 ಜನರನ್ನು ಬಂಧಿಸಿ ನಿಗೂಢ ಸ್ಥಳದಲ್ಲಿ ಬಂಧಿಸಿ 60 ದಿನಗಳ ಕಾಲ ಚಿತ್ರಹಿಂಸೆ ಕೊಟ್ಟಿದ್ದರು. ಆದರೆ ಇಸ್ಮಾಯಿಲ್‌ ಪತ್ತೆಯಾಗಲಿಲ್ಲ, ಅಲ್ಲದೆ ಅದು ಅಪರಿಚಿತ ಶವ ಎಂದು ನ್ಯಾಯಾಲಯದ ತೀರ್ಪು ಬಂದಾಗ ಅವರು ವಿಮುಕ್ತರಾದ್ರು ಎಂದು ಹೇಳಿದರು.

ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯಲ್ಪಡುವ ಪತ್ರಿಕಾ ಸ್ವಾತಂತ್ರ್ಯ ಕಸಿದುಕೊಂಡರು. ಪತ್ರಕರ್ತರು, ಸಂಪಾದಕರು ಜೈಲಿಗೆ ಸೇರಿದ್ರು. ಪತ್ರಿಕೆಯನ್ನು ನೋಡಲು ಒಬ್ಬ ಸರ್ಕಾರದ ಅಧಿಕಾರಿ ಇರುತ್ತಿದ್ದ. ಅವನು ಅನುಮತಿ ಕೊಟ್ಟರಷ್ಟೇ ಪತ್ರಿಕೆ ಬಿಡುಗಡೆಗೊಳಿಸಬೇಕಿತ್ತು. ಪತ್ರಿಕೆಯನ್ನು ನೆಲಮಾಳಿಗೆಯಲ್ಲಿ ಮುದ್ರಿಸಿ ಜನರಿಗೆ ಮುಟ್ಟಿಸುವ ಕೆಲಸವನ್ನು ಅಂದು ಪತ್ರಿಕೆಗಳು ಮಾಡಿವೆ. 21 ತಿಂಗಳ ಬಳಿಕ ದೇಶದಲ್ಲಿ ಯಾವುದೇ ಸಮಸ್ಯೆ ಇಲ್ಲ ಚುನಾವಣೆ ನಡೆಸಬಹುದು, ಈ ಬಾರಿ ಚುನಾವಣೆ ಮಾಡಿದ್ರೆ ಕಾಂಗ್ರೆಸ್‌ 400ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ ಎಂದು ಇಂಟೆಲಿಜೆನ್ಸ್‌ ವರದಿಯಿಂದ ತನಗೆ ಸೋಲೇ ಇಲ್ಲ ಎಂದು ಭಾವಿಸಿದ ಇಂದಿರಾಗಾಂಧಿ ಚುನಾವಣೆ ನಡೆಸಿ ಧೂಳಿಪಟವಾದ್ರು. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ಸರಕಾರದ ವಿರುದ್ಧ ಜನಸಾಮಾನ್ಯರೇ ಹೋರಾಟ ನಡೆಸಿ ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸ ಮಾಡಿದರು. ಆದರೆ ತುರ್ತು ಪರಿಸ್ಥಿತಿ ಹೇರಿ ಇಂದಿಗೆ 50 ವರ್ಷವಾದರೂ, ಕಾಂಗ್ರೆಸ್‌ನ ಮನಸ್ಥಿತಿ ಬದಲಾಗಿಲ್ಲ. ಇಲ್ಲದೇ ಇರುತ್ತಿದ್ದರೆ ದಕ್ಷಿಣ ಕನ್ನಡದಲ್ಲಿ ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರು ರಾತ್ರಿ ನುಗ್ಗುವ ಪರಿಸ್ಥಿತಿ ಬರ್ತಾ ಇರಲಿಲ್ಲ ಎಂದರು.
ತುರ್ತು ಪರಿಸ್ಥಿತಿ ಸಂದರ್ಭ ಅಂಬೇಡ್ಕರ್‌ ಇರುತ್ತಿದ್ದರೆ ಏನ್ಮಾಡ್ತಾ ಇದ್ದರು ಎಂದು ಪ್ರಶ್ನಿಸಿದ ಸಿಟಿ ರವಿ, ಜೆಪಿಯವರನ್ನು ಒಡೆದು ಹಾಕಿದವರು, ಮೊರಾರ್ಜಿ ದೇಸಾಯಿಗೆ ಮೂತ್ರ ಕುಡಿಸಿದವರು, ಅಂಬೇಡ್ಕರ್‌ ಅವರನ್ನು ಬಿಡ್ತಿದ್ದರಾ? ಅವರನ್ನೂ ಜೈಲಿಗೆ ಹಾಕ್ತಾ ಇದ್ರು. ಎಂದರು. ಅಂಬೇಡ್ಕರ್‌ ವಾದಿಗಳಲ್ಲಿ ವಿನಂತಿ ಮಾಡ್ತೇನೆ. ಅಂಬೇಡ್ಕರ್‌ ಕೊಟ್ಟಿರುವ ಸಂವಿಧಾನವನ್ನು ಉಳಿಸಿಕೊಳ್ಬೇಕಾದ್ರೆ ಕಾಂಗ್ರೆಸ್‌ ಒಂದು ಒಡೆಯುವ ಮನೆ ಅದರಿಂದ ದೂರ ಇರಿ.. ಎಂದು ಹೇಳಿದ ಅಂಬೇಡ್ಕರ್‌ ಮಾತನ್ನು ನೆನಪಿಟ್ಟುಕೊಳ್ಳಿ. ಅಂದು ಅವರು ಅಂಬೇಡ್ಕರ್‌ ಸಂವಿಧಾನವನ್ನೇ ಮುಗಿಸ್ಲಿಕ್ಕೆ ಹೊರಟವರು ಎಂದರು.

ಬಿಜೆಪಿಯ ಒಂದು ನಾಯಿಯೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ ಎನ್ನುವ ಕಾಂಗ್ರೆಸಿಗರೇ ಬಿಜೆಪಿ ಹುಟ್ಟಿದ್ದೇ 1980ರಲ್ಲಿ, ಜನಸಂಘ ಹುಟ್ಟಿದ್ದು 1951ರಲ್ಲಿ, ಸ್ವಾತಂತ್ರ್ಯ ಸಿಕ್ಕಿದ್ದು 1947ರಲ್ಲಿ ನಾವು ಸ್ವಾತಂತ್ರ್ಯ ಹೋರಾಟಕ್ಕೆ ಪಾಲ್ಗೊಳ್ಳಬೇಕಂದ್ರೆ ನಮ್ಮ ಪಾರ್ಟಿಯೇ ಹುಟ್ಟಿಕೊಂಡಿರಲಿಲ್ಲ. ಆದರೆ ಅಂಬೇಡ್ಕರ್‌ ಕೊಟ್ಟಿರುವ ಸಂವಿಧಾನವನ್ನು ಕೋಮಾಗೆ ಸೇರಿಸಿದ್ರಲ್ಲ, ಪ್ರಜಾಪ್ರಭುತ್ವವನ್ನು ಬಂಧಿಯಾಗಿಟ್ಟಿರಲ್ಲ… ಆ ಸಂದರ್ಭದಲ್ಲಿ ನೀವೇನ್ಮಾಡ್ತಿದ್ರಿ? ನಮ್ಮನ್ನು ನಾಯಿ ಅಂತ ಹೇಳ್ತೀರಿ… ಆದರೆ ಆ ಇಂದಿರಾವನ್ನು ಹೊಗಳುವ ಪಟಾಲಮ ಬಾಲ ಅಲ್ಲಾಡಿಸುವ ರೀತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಇದ್ರು.. ನಾನು ಡ್ಯಾಷ್‌ ಡ್ಯಾಷ್‌ ಅಂತ ಹೇಳಲ್ಲ… ನೀವು ಅರ್ಥ ಮಾಡ್ಕೊಳ್ಳಿ. ನಾವು ದೇಶಕ್ಕೆ ನಿಯತ್ತಿರುವ ನಾಯಿಗಳಾದರೆ ಈ ಕಾಂಗ್ರೆಸಿಗರು ಸಂವಿಧಾನಕ್ಕೆ ನಿಯತ್ತಾಗಿರಲಿಲ್ಲ. ಪ್ರಜಾಪ್ರಭುತ್ವಕ್ಕೆ, ದೇಶಕ್ಕೆ ಅಲ್ಲ, ಇಂದಿರಾ ಗಾಂಧಿಗೆ ಬಾಲ ಅಲ್ಲಾಡಿಸುವಂಥಾ ಡ್ಯಾಷ್‌ ಡ್ಯಾಷ್‌ ಡ್ಯಾಷ್‌ಗಳಾಗಿದ್ರು ಎಂದು ಲೇವಡಿ ಮಾಡಿದ ಸಿ.ಟಿ. ರವಿ ಏನಾಗಿದ್ರು ಅಂತ ಸಭಿಕರನ್ನು ಪ್ರಶ್ನಿಸಿದಾಗ ಸಭೀಕರೂ ಸಹ ಡ್ಯಾಷ್‌ ಡ್ಯಾಷ್‌ ಡ್ಯಾಷ್‌ಗಳಾಗಿದ್ರು ಅಂದಿದ್ದಾರೆ.

ನಾನು ಆ ಪದ ಬಳಕೆ ಮಾಡುವುದಿಲ್ಲ. ಇವ್ರು ನಮ್ಗೆ ಪಾಠ ಹೇಳ್ತಾರೆ… ಇವರು ನಮಗೆ ಹೇಳ್ತಾರೆ… ಬಿಜೆಪಿಯವರು ಸ್ವಾತಂತ್ರ್ಯಕ್ಕೆ ಹೋರಾಡದೇ ಇದ್ದರೂ ನಮ್ಮ ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿದ್ಯಾರ್ಥಿ ಪರಿಷತ್‌, ಭಾರತೀಯ ಮಜ್ದೂರ್‌ ಸಂಘ ಪ್ರಜಾಪ್ರಭುತ್ವ ಉಳಿವಿಗಾಗಿ ಹೋರಾಡಿದ್ದರಿಂದ ಸಂವಿಧಾನ ಉಳೀತು. ಈಗ ಸಂವಿಧಾನ ಇಟ್ಟು ನಾಟಕ ಆಡ್ತೀರಲ್ಲಾ ನೀವೇನು ಮಾಡಿದ್ರಿ? ನೀವು ಇಂದಿರಾ ಗಾಂಧಿ ಪರವಾಗಿ ಬಾಲ ಅಲ್ಲಾಡಿಸ್ತಾ ಇದ್ರಿ… ಇಂದಿರಾ ಗಾಂಧಿ ಎಸೆಯುವ ಬಿಸ್ಕೆಟಿಗೆ ಕುಂಯಿ ಕುಂಯಿ ಕುಂಯಿ ಅಂತ ಬಾಲ ಅಲ್ಲಾಡಿಸ್ತಿದ್ರಿ… ನೀವು ನಮಗೆ ಹೇಳ್ಳಿಕ್ಕೆ ಬರ್ತಾ ಇದ್ದೀರಾ ನೀವು ಇಂತವರ ಬಗ್ಗೆ ಎಚ್ಚರ ವಹಿಸ್ಬೇಕು… ನಿಜವಾಗಿಯೂ ಸಂವಿಧಾನವನ್ನು ಉಳಿಸಿದ್ದು ನಾವು ಎಂದು ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.

ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯರು ಆಗಿರುವ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಕದ್ರಿ ಉದ್ಯಾನವನದಲ್ಲಿ ಸಸಿ ನಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಳಿಕ ಕದ್ರಿ ಗೋರಕ್ಷನಾಥ ಸಭಾಭವನದಲ್ಲಿ ತುರ್ತು ಪರಿಸ್ಥಿತಿಯ 50ನೇ ವರ್ಷದ ಕರಾಳ ಇತಿಹಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾ ದ.ಕ. ಎಂಪಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಸಕರಾದ ,ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಭರತ್ ಶೆಟ್ಟಿ, ಭಾಗೀರಥಿ ಮರುಳ್ಯ, ಹರೀಶ್ ಪೂಂಜಾ, ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಪ್ರೇಮಾನಂದ ಶೆಟ್ಟಿ, ಯತೀಶ್‌ ಆಳ್ವ, ಪುರುಷೋತ್ತಮ ಮಂಗ್ಲಿಮನೆ, ಗಣೇಶ್‌, ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಂಚೆ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ ಹಿರಿಯರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಭರತ್‌ ರಾಜ್‌ ಕೃಷ್ಣಾಪುರ ನಿರೂಪಿಸಿದರು.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!