ಟೆಲ್ ಅವಿವ್: ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಕದನ ವಿರಾಮಕ್ಕೆ ಸೊಪ್ಪು ಹಾಕದ ಇಸ್ರೇಲ್ ವಾಯುಪಡೆಯು ಪಶ್ಚಿಮ ಇರಾನ್ ಮೇಲೆ ಸರಣಿ ವಾಯುದಾಳಿಗಳನ್ನು ನಡೆಸಿದೆ ಎಂದು ದೃಢಪಡಿಸಿದೆ, ಇದು ಇರಾನಿನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ನಡೆಸಿದ ದಾಳಿಯ ನಂತರ ನಡೆಸಿದ ಮೊದಲ ನೇರ ದಾಳಿಯಾಗಿದೆ.
)
ಇಸ್ರೇಲ್ ರಕ್ಷಣಾ ಪಡೆಗಳು ಒಂದು ಹೇಳಿಕೆಯಲ್ಲಿ, ಇಸ್ರೇಲ್ ವಾಯುಪಡೆ (IAF) “ಪಶ್ಚಿಮ ಇರಾನ್‌ನಲ್ಲಿರುವ ಮಿಲಿಟರಿ ತಾಣಗಳನ್ನು” ಗುರಿಯಾಗಿಸಿಕೊಂಡಿದೆ ಎಂದು ಹೇಳಿದೆ. ಇಸ್ರೇಲ್‌ನತ್ತ ಮುಖ ಮಾಡಿ ಹಾರಲು ಸಜ್ಜಾಗಿ ನಿಂತಿದ್ದ ಕ್ಷಿಪಣಿ ಉಡಾವಣಾಕಾರಗಳನ್ನು ಇಸ್ರೇಲ್ ವಾಯುಸೇನೆ ಉಡೀಸ್ ಮಾಡಿದ್ದು, ಇರಾನಿನ ಸಶಸ್ತ್ರ ಪಡೆಗಳ ಸಿಬ್ಬಂದಿ ಮೃತಪಟ್ಟಿದ್ದಾರೆ. ಪಶ್ಚಿಮ ಇರಾನ್ ಮೇಲೆ ಇಸ್ರೇಲ್ ವಾಯುದಾಳಿ ಮುಂದುವರಿದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇರಾನ್‌ನ ಪರಮಾಣು ಶಕ್ತಿ ಸಂಸ್ಥೆಯ ಮುಖ್ಯಸ್ಥ ಮೊಹಮ್ಮದ್ ಎಸ್ಲಾಮಿ, “ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಮತ್ತು ದಾಳಿಯಿಂದ ಉಂಟಾದ ಹಾನಿಯ ಅವಲೋಕನ ನಡೆಸುತ್ತಿದ್ದೇವೆ” ಎಂದು ಹೇಳಿದರು.
ಕೈದಿಗಳ ಸ್ಥಳಾಂತರ:
ಇಸ್ರೇಲ್ ದಾಳಿಯಿಂದ ಜೈಲಿನಲ್ಲಿರುವ ಕೈದಿಗಳೂ ಕೂಡಾ ತತ್ತರಿಸಿದ್ದಾರೆ. “ಈ ಜೈಲಿನಲ್ಲಿ (ಎವಿನ್) ಶಿಕ್ಷೆಯನ್ನು ಅನುಭವಿಸುತ್ತಿದ್ದ ಕೈದಿಗಳನ್ನು ಟೆಹ್ರಾನ್ ಪ್ರಾಂತ್ಯದೊಳಗಿನ ಇತರ ಕಡೆಗಳಿಗೆ ಸ್ಥಳಾಂತರಿಸಲಾಗಿದೆ. ಕೈದಿಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಕ್ಷಿಪ್ರ ಪ್ರತಿಕ್ರಿಯೆ ತಂಡಗಳಿಗೆ ಸ್ಥಳಾವಕಾಶವನ್ನು ಒದಗಿಸಲು ಬೇರೆಡೆ ವ್ಯವಸ್ಥೆ ಮಾಡಲಾಗಿದೆ ಎಂದು ಜೈಲು ಪ್ರಾಧಿಕಾರ ತಿಳಿಸಿದೆ.
ಇಸ್ರೇಲ್ ವಿರೋಧ ಪಕ್ಷದ ನಾಯಕ ಯೈರ್ ಲ್ಯಾಪಿಡ್ ಅವರು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್‌ನ ಪರಮಾಣು ಕಾರ್ಯಕ್ರಮದ ಮೇಲೆ ನಡೆಸಿದ ದಾಳಿಗೆ ಬೆಂಬಲ ಸೂಚಿಸಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಣೆಯ ನಂತರ ಇಸ್ರೇಲ್ ಮೇಲೆ ಕೊನೆಯ ಕೆಲವು ಗಂಟೆಗಳ ಕಾಲ ಕ್ಷಿಪಣಿಗಳನ್ನು ಹಾರಿಸಿಲ್ಲ ಎನ್ನುವುದನ್ನು ಇರಾನ್ ನಿರಾಕರಿಸಿದೆ. ಹಾಗಾಗಿ ಟ್ರಂಪ್ ಹೇಳಿರುವಂತೆ ಇಸ್ರೇಲ್ ಹಾಗೂ ಇರಾನ್ ಮಧ್ಯೆ ಯಾವುದೇ ಕದನ ವಿರಾಮ ನಡೆದಿಲ್ಲ ಎನ್ನುವುದು ಸ್ಪಷ್ಟವಾದಂತಾಗಿದೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝