ಸುರತ್ಕಲ್: ಸುರತ್ಕಲ್ ಬೈಕಂಪಾಡಿಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಂಚರಿಸಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ನ್ಯಾಯ ಒದಗಿಸುವ ಸಲುವಾಗಿ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಮೇಲೆ ಕೇಸು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಎಂಎಸ್ ರಿಕ್ಷಾ ಮಾಲಕ ಚಾಲಕರ ಸಂಘ ಸುರತ್ಕಲ್ ವತಿಯಿಂದ ಸುರತ್ಕಲ್ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಗಿದೆ.
ಸುರತ್ಕಲ್ ಬೈಕಂಪಾಡಿ ಪ್ರದೇಶದಲ್ಲಿ ಹೆದ್ದಾರಿ 66ರಲ್ಲಿ ಹೊಂಡಗಳು ಬಿದ್ದಿದ್ದು ಹೆದ್ದಾರಿ ಇಲಾಖೆ ತುರ್ತು ಕ್ರಮ ಕೈಗೊಂಡು ಹಾಗಾಗಿ ಮುಚ್ಚಬೇಕಾಗಿರುವುದು ಜವಾಬ್ದಾರಿಯಾಗಿದೆ. ಆದರೆ ಇಲಾಖೆಯ ನಿರ್ಲಕ್ಷದಿಂದ ಕಳೆದ ಒಂದೆರಡು ವಾರಗಳ ಹಿಂದೆ ಬೈಕಂಪಾಡಿಯಲ್ಲಿ ಓರ್ವರು ಪ್ರಾಣ ಕಳೆದುಕೊಂಡಿದ್ದಾರೆ.
ಅಲ್ಲದೆ ಸುರತ್ಕಲ್ ಜಂಕ್ಷನಿನಲ್ಲಿ ಇರುವ ಹೊಂಡಕ್ಕೆ ಶುಕ್ರವಾರ ರಿಕ್ಷಾ ಒಂದು ಬಿದ್ದು ಪಲ್ಟಿ ಆಗಿದ್ದು ಚಾಲಕ ಪವಾಡ ಸದಸ್ಯರಾಗಿ ಪಾರಾಗಿದ್ದಾರೆ. ಕಳದು ಒಂದು ವರ್ಷದಿಂದಲೂ ಸುರತ್ಕಲ್ ಜಂಕ್ಷನ್ ನ ಸಮಸ್ಯೆ ಜೀವಂತವಾಗಿದ್ದು ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಹೆದ್ದಾರಿ ಇಲಾಖೆ ವಿಳಂಬಿಸುತ್ತಿದೆ. ತಡಂಬೈಲು, ಮುಕ್ಕ ಪ್ರದೇಶವು ಅವೈಜ್ಞಾನಿಕ ಹೆದ್ದಾರಿ ನಿರ್ಮಾಣದಿಂದ ಸಾವು ನೋವುಗಳನ್ನು ಕಾಣುತ್ತಿದೆ. ಜೀವ ಹಾನಿಗೊಂಡರೆ ಬಡವರ್ಗದ ಜನತೆಯನ್ನು ಕೇಳುವವರಿಲ್ಲದಂತಾಗುತ್ತದೆ. ಆದ್ದರಿಂದ ತಮ್ಮಲ್ಲಿ ಮನವಿ ಮಾಡುವುದೇನೆಂದರೆ ಹೆದ್ದಾರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದ ಸಂಚಾರದ ವೇಳೆ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ನ್ಯಾಯ ಒದಗಿಸುವ ಸಲುವಾಗಿ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಮೇಲೆ ಕೇಸು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಮಾಜ ಸೇವಕ ಉಮೇಶ್ ಇಡ್ಯಾ ನೇತೃತ್ವದಲ್ಲಿ ರಿಕ್ಷಾ ಚಾಲಕ ಮಾಲಕರು ಮನವಿ ಸಲ್ಲಿಸಿದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝