ಉಡುಪಿ: ಹೆಂಡತಿ ಸದಾ ಮೊಬೈಲ್‌ನಲ್ಲೇ ಇರುತ್ತಾಳೆ ಎಂಬ ಸಿಟ್ಟಿನಿಂದ ಗಂಡ ತನ್ನ ಹೆಂಡತಿಯನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಉಡುಪಿ ತಾಲೂಕಿನ ಬ್ರಹ್ಮಾವರ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ಘಟನೆ ಜೂ.19 ರಾತ್ರಿ 11.30ಕ್ಕೆ ಸಂಭವಿಸಿದೆ.
ರೇಖಾ(27) ಕೊಲೆಯಾದ ಮಹಿಳೆ. ಕೊಳಂಬೆ ಗ್ರಾಮದ ನಿವಾಸಿ ಆರೋಪಿ ಗಣೇಶ ಪೂಜಾರಿ(42) ಕೊಲೆ ಮಾಡಿದ ಆರೋಪಿ. ಈತನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.
ರೇಖಾ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಪೈಂಟರ್ ಆಗಿದ್ದ ಗಣೇಶ್ ಪೂಜಾರಿ ಹಾಗೂ ರೇಖಾಳಿಗೆ 8 ವರ್ಷಗಳ ಹಿಂದೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ.
ರೇಖಾ ಸದಾ ಮೊಬೈಲ್‌ನಲ್ಲಿ ಬ್ಯುಸಿಯಾಗಿರುವುದರಿಂದ ಗಣೇಶ್ ಆಗಾಗ್ಗೆ ರೇಖಾ ಜೊತೆ ಗಲಾಟೆ ಮಾಡುತ್ತಿದ್ದ. ಈ ಬಗ್ಗೆ ಈ ಹಿಂದೆ ಶಂಕರನಾರಾಯಣ ಪೊಲೀಸರಿಗೆ ದೂರು ಅರ್ಜಿ ನೀಡಲಾಗಿತ್ತು. ಪೊಲೀಸರು ಬುದ್ದಿವಾದ ಹೇಳಿ ಮುಚ್ಚಳಿಕೆ ಬರೆಸಿ ಕಳಿಸಿದ್ದರು. ಇದೀಗ ಗಣೇಶ್ ತನ್ನ ಪತ್ನಿಯನ್ನೇ ಕ್ಷುಲಕ ಕಾರಣಕ್ಕೆ ಕೊಲೆ ಮಾಡಿದ್ದಾನೆ.
ಶಂಕರನಾರಾಯಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj