ನವದೆಹಲಿ: ಇಸ್ರೇಲ್ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ ಕಠಿಣ ಎಚ್ಚರಿಕೆ ನೀಡಿದ್ದು, ಅವರು ಇನ್ನು ಅಸ್ತಿತ್ವದಲ್ಲಿ ಮುಂದುವರಿಯಲು ಸಾಧ್ಯವಿಲ್ಲ” ಎಂದು ಹೇಳಿದೆ. ಅಲ್ಲದೆ ಇಸ್ರೇಲ್ ರಕ್ಷಣಾ ಪಡೆಗಳಿಗೆ ಅದನ್ನೇ ಖಚಿತಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದೆ. ಇರಾನ್ ತನ್ನ ಪ್ರತೀಕಾರದ ದಾಳಿಯಲ್ಲಿ ಗುರುವಾರ ಇಸ್ರೇಲ್‌ನ ಆಸ್ಪತ್ರೆಯ ಮೇಲೆ ದಾಳಿ ಮಾಡಿ ಸುಮಾರು 40 ಜನರು ಗಾಯಗೊಂಡ ನಂತರ ಇಸ್ರೇಲ್ ಈ ನಿರ್ಧಾರ ತೆಗೆದುಕೊಂಡಿದೆ.
“ಇರಾನ್‌ನಂತಹ ದೇಶವನ್ನು ಮುನ್ನಡೆಸುವ ಮತ್ತು ಇಸ್ರೇಲ್‌ನ ನಾಶವನ್ನು ತನ್ನ ಧ್ಯೇಯವನ್ನಾಗಿ ಮಾಡಿಕೊಂಡಿರುವ ಖಮೇನಿಯಂತಹ ಸರ್ವಾಧಿಕಾರಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ” ಎಂದು ಇಸ್ರೇಲ್ ರಕ್ಷಣಾ ಸಚಿವ ಕ್ಯಾಟ್ಜ್ ಹೇಳಿದರು. “ ತನ್ನ ಗುರಿಗಳನ್ನು ಸಾಧಿಸಲು ಐಡಿಎಫ್‌ಗೆ ಸೂಚನೆ ನೀಡಲಾಗಿದೆ ಈ ವ್ಯಕ್ತಿ ಅಸ್ತಿತ್ವದಲ್ಲಿರಬಾರದು ಎಂದು ತಿಳಿಸಲಾಗಿದೆ, ಅವನೊಬ್ಬ ಹಿಟ್ಲರ್ ಎಂದು ಅವರು ಹೇಳಿದರು.
ಖಮೇನಿಯವರನ್ನು ಕೊಲ್ಲುವ ಯಾವುದೇ ಯೋಜನೆ ಅಮೆರಿಕಕ್ಕೆ ಇಲ್ಲ, ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಸ್ಪಷ್ಟಪಡಿಸಿದ್ದರು. ʻಸುಪ್ರೀಂ ಲೀಡರ್’ ಎಂದು ಕರೆಯಲ್ಪಡುವ ವ್ಯಕ್ತಿ ಎಲ್ಲಿ ಅಡಗಿದ್ದಾರೆಂದು ನಮಗೆ ನಿಖರವಾಗಿ ತಿಳಿದಿದೆ. ಅವರು ನಮಗೆ ಸುಲಭ ಗುರಿಯಾಗಿದ್ದು, ನಾವು ಅವರನ್ನು ಕೊಲ್ಲಲು ಹೋಗುವುದಿಲ್ಲ. ಆದರೆ ನಾಗರಿಕರು ಅಥವಾ ಅಮೇರಿಕನ್ ಸೈನಿಕರ ಮೇಲೆ ಕ್ಷಿಪಣಿಗಳನ್ನು ಹಾರಿಸುವುದನ್ನು ನಾವು ಬಯಸುವುದಿಲ್ಲ” ಎಂದು ಅವರು ಬುಧವಾರ ಹೇಳಿದ್ದರು.
ಆದರೆ ದಕ್ಷಿಣ ಇಸ್ರೇಲ್‌ನ ಮುಖ್ಯ ಆಸ್ಪತ್ರೆಗೆ ಇರಾನಿನ ಕ್ಷಿಪಣಿ ಬಡಿದು “ವ್ಯಾಪಕ ಹಾನಿ” ಉಂಟುಮಾಡಿತು ಆದರೆ ಯಾವುದೇ ಗಂಭೀರ ಗಾಯಗಳಿಲ್ಲ ಎಂದು ಆಸ್ಪತ್ರೆ ತಿಳಿಸಿದೆ. ಇತರ ಕ್ಷಿಪಣಿಗಳು ಟೆಲ್ ಅವಿವ್ ಬಳಿಯ ಎತ್ತರದ ಕಟ್ಟಡ ಮತ್ತು ವಸತಿ ಕಟ್ಟಡಗಳನ್ನು ಹೊಡೆದವು. ದಾಳಿಯಲ್ಲಿ ಕನಿಷ್ಠ 40 ಜನರು ಗಾಯಗೊಂಡರು, ಮತ್ತು ಕಪ್ಪು ಹೊಗೆ ಎದ್ದಿದ್ದರಿಂದ ರೋಗಿಗಳನ್ನು ತುರ್ತು ತಂಡಗಳು ಬೀರ್‌ಶೆಬಾದ ಸೊರೊಕಾ ವೈದ್ಯಕೀಯ ಕೇಂದ್ರದಿಂದ ಸ್ಥಳಾಂತರಿಸಿದವು.
ಇಸ್ರೇಲ್ -ಇರಾನ್ ಸಂಘರ್ಷ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಗಾಜಾ ಸೇರಿ ಇಸ್ರೇಲ್ 622 ದಿನಗಳಿಂದ ಯುದ್ಧದಲ್ಲಿ ನಿರತವಾಗಿದೆ. ಏಳನೇ ದಿನದಲ್ಲಿ, ಇಸ್ರೇಲ್ ಇರಾನ್‌ನ ಅರಾಕ್ ಭಾರೀ ನೀರಿನ ರಿಯಾಕ್ಟರ್ ಮೇಲೆ ದಾಳಿ ಮಾಡಿತು, ಇರಾನ್‌ನ ಪರಮಾಣು ಯೋಜನೆಯ ಮೇಲೆ ತನ್ನ ದಾಳಿಯನ್ನು ಮುಂದುವರೆಸಿತು. ಇರಾನ್ ಮಿಲಿಟರಿ ತಾಣಗಳು, ಹಿರಿಯ ಅಧಿಕಾರಿಗಳು ಮತ್ತು ಪರಮಾಣು ವಿಜ್ಞಾನಿಗಳನ್ನು ಗುರಿಯಾಗಿಸಿಕೊಂಡು ಇಸ್ರೇಲಿ ವಾಯುದಾಳಿಗಳು ಅನಿರೀಕ್ಷಿತವಾಗಿ ಪ್ರಾರಂಭವಾದವು.
ಅಮೆರಿಕ ಮೂಲದ ಇರಾನಿನ ಮಾನವ ಹಕ್ಕುಗಳ ಗುಂಪಿನ ಪ್ರಕಾರ, ಇರಾನ್‌ನಲ್ಲಿ 263 ನಾಗರಿಕರು ಸೇರಿದಂತೆ ಕನಿಷ್ಠ 639 ಜನರು ಸಾವನ್ನಪ್ಪಿದ್ದಾರೆ ಮತ್ತು 1,300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರತೀಕಾರವಾಗಿ, ಇರಾನ್ ಸುಮಾರು 400 ಕ್ಷಿಪಣಿಗಳು ಮತ್ತು ನೂರಾರು ಡ್ರೋನ್‌ಗಳನ್ನು ಹಾರಿಸಿದೆ, ಇಸ್ರೇಲ್‌ನಲ್ಲಿ ಕನಿಷ್ಠ 24 ಜನರು ಮೃತಪಟ್ಟಿದ್ದು ನೂರಾರು ಮಂದಿ ಗಾಯಗೊಂಡಿದ್ದಾರೆ.