ಮಂಗಳೂರು : ಎಕ್ಸ್‌ ಪರ್ಟ್ ಪದವಿ ಪೂರ್ವ ಕಾಲೇಜ್‌ ನೀಟ್ ಪ್ರವೇಶ ಪರೀಕ್ಷೆಯಲ್ಲಿ ದಾಖಲೆ

ಮಂಗಳೂರು : ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ಈ ಭಾರಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್‌ ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿಖಿಲ್ ಸೊನ್ನದ್ ಅಖಿಲ ಭಾರತ ಮಟ್ಟದಲ್ಲಿ 17ನೇ ಹಾಗೂ ದಕ್ಷಿಣ ಭಾರತ ಮತ್ತು ರಾಜ್ಯಕ್ಕೆ ಪ್ರಥಮ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾನೆ ಎಂದು ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಎಕ್ಸ್‌ಪರ್ಟ್ ಪದವಿ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀಟ್ ಪರೀಕ್ಷೆಗೆ ಹಾಜರಾದ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಶೇ. 99ರಷ್ಟು ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಈ ಮೂಲಕ ಎಕ್ಸ್‌ಪರ್ಟ್ ಕಾಲೇಜು ವಿದ್ಯಾರ್ಥಿಗಳು ಶೈಕ್ಷಣಿಕ ಲೋಕದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ.

648 ಅಂಕ ಪಡೆದ ನಿಧಿ ಕೆ.ಜಿ. ಅಖಿಲ ಭಾರತ ಮಟ್ಟದ ಜನರಲ್ ಮೆರಿಟ್‌ನಲ್ಲಿ 84ನೇ ರ್ಯಾಂಕ್ ಪಡೆದರೆ, 636 ಅಂಕ ಪಡೆದ ಸಾಯಿಶ್ ಶ್ರವಣ ಪಂಡಿತ್ 159ನೇ ರ್ಯಾಂಕ್, 632 ಅಂಕ ಪಡೆದ ಶ್ರೇಯಸ್ ಮಲ್ಲಪ್ಪ ಮಹಾಲಿಂಗಪುರ 214ನೇ ರಾಂಕ್ ಇದರ ಜೊತೆಗೆ ಮತ್ತಷ್ಟು ಪ್ರತಿಭಾನ್ವಿತ ವಿದ್ಯಾರ್ಥಿಗಳು ರಾಂಕ್ ಪಡೆದು ಶ್ರಮ ಏಕ ಜಯತೇ ಎನ್ನುವ ನಾಣುಡಿಗೆ ಅರ್ಥ ತಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್ ನಾಯಕ್, ಎಕ್ಸ್‌ ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕರಾದ ಶ್ರೀ ಅಂಕುಶ್ ಎನ್ ನಾಯಕ್, ದೀಪಿಕಾ ಎ.ನಾಯಕ್, ವಳಚ್ಚಿಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್‌.ಕೆ ವಿಜಯನ್, ಕೊಡಿಯಾಲ್‌ ಬೈಲ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್, ಶೈಕ್ಷಣಿಕ ವಿಭಾಗದ ಉಪಪ್ರಾಂಶುಪಾಲರಾದ ಪ್ರೊ. ಸುಬ್ರಹ್ಮಣ್ಯ ಉಡುಪ, ಎಐಸಿ ವಿಭಾಗದ ಮುಖ್ಯಸ್ಥರು ಪ್ರೊ.ಶ್ಯಾಮ್‌ ಪ್ರಸಾದ್ , ವಿದ್ಯಾರ್ಥಿಗಳಾದ ನಿಖಿಲ್ ಸೋನಾದ್, ನಿಧಿ ಕೆಜಿ ಮುಂತಾದವರು ಉಪಸ್ಥಿತರಿದ್ದರು.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

error: Content is protected !!