ಪಡುಬಿದ್ರೆಯಲ್ಲಿ ಖಾಸಗಿ ಬಸ್ ಆಟೋಗೆ ಢಿಕ್ಕಿ !

ಪಡುಬಿದ್ರೆ: ಖಾಸಗಿ ಬಸ್ಸೊಂದು ಆಟೊ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕನೊರ್ವ ಮೃತಪಟ್ಟಿದ್ದು, ರಿಕ್ಷಾ ಚಾಲಕ ಸಹಿತ ಇಬ್ಬರು ಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ಪಡುಬಿದ್ರೆ ಕಾರ್ಕಳ ರಾಜ್ಯ ಹೆದ್ದಾರಿಯ ಅಡ್ವೆ ಕಣಜಾರ್ ಕಟ್ಟೆ ಬಳಿ ಸಂಭವಿಸಿದೆ.

ಮಂಗಳೂರಿನಿಂದ ಕಾರ್ಕಳಕ್ಕೆ ಬರುತ್ತಿದ್ದ ಖಾಸಗಿ ಎಕ್ಸ್ ಪ್ರೆಸ್ ಬಸ್ ಆಟೊಗೆ ಢಿಕ್ಕಿ ಹೊಡೆದಿದೆ. ಆಟೊ ಚಾಲಕ ಕಂಚಿನಡ್ಕ ನಿವಾಸಿ ಹಂಝ ಗಂಭೀರ ಗಾಯಗೊಂಡಿದ್ದಾರೆ. ಮೃತ ಪ್ರಯಾಣಿಕನ ಹೆಸರು ತಿಳಿದುಬಂದಿಲ್ಲಬಸ್ ಢಿಕ್ಕಿ ಹೊಡೆದ ಪರಿಣಾಮ ಆಟೊ ಸಂಪೂರ್ಣ ನಜ್ಜುಗುಜ್ಜಾಗಿದೆ. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

error: Content is protected !!