ಹಕ್ಕಿ ಢಿಕ್ಕಿಯಾಗಿ ವಿಮಾನ ಪತನ? ದುರಂತಕ್ಕೂ ಮುನ್ನ ʻಮೇ ಡೇʼ ಕಾಲ್:‌ ರೂಪಾನಿ ಸಾವು!

ನವದೆಹಲಿ: ಹಕ್ಕಿ ಡಿಕ್ಕಿಯಾಗಿ ಅಹಮಾದಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನ ಪತನಗೊಂಡಿತಾ ಎಂಬ ಶಂಕೆ ವ್ಯಕ್ತವಾಗಿದೆ. ವಿಮಾನ ಟೇಕ್‌ ಆಫ್‌ ಆದ ಮೂರ್ನಾಲ್ಕು ನಿಮಿಷಗಳಲ್ಲೇ ಪೈಲಟ್‌ ʻಮೇ ಡೇ.. ಮೇ ಡೇ..ʼ ಎಂದು ಎಟಿಸಿಗೆ ಕೊನೆಯ ಸಂದೇಶ ಕೊಟ್ಟಿದ್ದರು. ದುರದೃಷ್ಟವಶಾತ್‌ ಗುಜರಾತ್‌ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಕೂಡಾ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 177ಕ್ಕೆ ಏರಿದ್ದು, ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.

Image

Image

ಹಕ್ಕಿ ಢಿಕ್ಕಿ ಹೊಡೆಯಿತೇ?

ವಿಮಾನ ನಿಲ್ದಾಣದಿಂದ ಟೇಕಾಫ್‌ ಆಗುವಾಗ ವಿಮಾನದ ಎಂಜಿನ್‌ಗೆ ಪಕ್ಷಿ ಬಡಿದ ಕಾರಣ ಈ ದುರಂತ ಸಂಭವಿಸಬರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ವಿಮಾನ ಹಾಗೂ ಹಕ್ಕಿ ವೇಗವಾಗಿ ಹಾರಾಡುತ್ತದೆ. ಈ ವೇಳೆ ಹಕ್ಕಿ ಏನಾದರೂ ಬಡಿದರೆ ಅದು ಬುಲೆಟ್‌ ವೇಗದಲ್ಲಿ ಇದ್ದು, ಭಾರವಾಗುತ್ತದೆ. ಇದರಿಂದ ವಿಮಾನದ ವೇಗ ಕಡಿಮೆ ಆಗಬಹುದು ಅಥವಾ ವಿಮಾನಕ್ಕೆ ಹಾನಿ ಆಗುವ ಸಾಧ್ಯತೆ ಇದೆ.

Image

ಹಕ್ಕಿಗಳು ತನ್ನಂತೆ ಹಾರುವ ವಸ್ತುಗಳನ್ನು ಕಂಡು ಕುತೂಹಲದಿಂದ ದಾಳಿ ಮಾಡುವುದಿದೆ. ಕೆಲವೊಮ್ಮೆ ಇಂಜಿನಿಗೂ ಹಾನಿಯಾಗುತ್ತದೆ. ಆವಾಗ ಪೈಲಟ್‌ ಇನ್ನೊಂದು ಇಂಜಿನ್‌ ಚಾಲೂ ಮಾಡಿ ವಿಮಾನವನ್ನು ರನ್‌ವೇಯಲ್ಲಿ ತುರ್ತಾಗಿ ಇಳಿಸುತ್ತಾನೆ. ಆದರೆ ಇಲ್ಲಿ ಎರಡು ಇಂಜಿನ್‌ಗಳಿಗೂ ಹಕ್ಕಿ ಬಿಡಿದಿರಬಹುದು ಎಂದು ಅಂದಾಜಿಸಲಾಗಿದೆ. ಇನ್ನೊಂದು ಮೂಲದ ಪ್ರಕಾರ ವಿಮಾನ ಲಂಡನ್‌ಗೆ ಹಾರುವುದರಿಂದ ಹೆಚ್ಚು ಇಂಧನ ತುಂಬಿಸಲಾಗಿತ್ತು. ಇಲ್ಲಿ ಅನಾಹುತ ಸಂಭವಿಸಿ ವಿಮಾನ ಸ್ಫೋಟಗೊಂಡಿರಬಹುದೆಂದು ಅಂದಾಜಿಸಲಾಗಿದೆ.

Image

ಅಲ್ಲದೆ ವಿಮಾನದ ಲ್ಯಾಂಡಿಂಗ್ ಗೇರ್ ಮೇಲಕ್ಕೆತ್ತುವ ಮೊದಲೇ ವಿಮಾನವನ್ನು ಕೆಳಗಿಳಿಯಲು ಪ್ರಾರಂಭಿಸಲಾಗಿತ್ತು. ವಿಮಾನದಲ್ಲಿ ಮಿತಿಮೀರಿದ ಇಂದನ ಇದ್ದುದರಿಂದ ಇಂಜಿನ್ ಶಕ್ತಿಯನ್ನು ಕಳೆದುಕೊಂಡು ಪತನಗೊಂಡಿತು ಎಂದು ಹೇಳಲಾಗಿದೆ. ಬ್ಲ್ಯಾಕ್‌ ಬಾಕ್ಸ್‌ಗಾಗಿ ಹುಡುಕಾಟ ನಡೆಯುತ್ತಿದ್ದು, ತನಿಖೆಯಿಂದ ನಿಖರವಾದ ಕಾರಣ ತಿಳಿಯುವ ಸಾಧ್ಯತೆಯಿದೆ.

Image

ಮೇ ಡೇ ಕಾಲ್

ವಿಮಾನ ಹಾರಿದ ಮೂರ್ನಾಲ್ಕು ನಿಮಿಷಗಳಲ್ಲೇ ಪೈಲಟ್‌ ʻಮೇ ಡೇ.. ಮೇ ಡೇ..ʼ (MAYDAY) ಎಂದು ಎಟಿಸಿಗೆ ಕೊನೆಯ ಸಂದೇಶ ಕೊಟ್ಟಿದ್ದರು. MAYDAY ಅಂದ್ರೆ ವಿಮಾನ ಡೇಂಜರ್‌ನಲ್ಲಿದ್ದು ತುರ್ತು ಅವಶ್ಯಕತೆ ಬಗ್ಗೆ ಎಮರ್ಜೆನ್ಸಿ ಕರೆ ಮಾಡುವುದು. ಎಟಿಸಿ ಮತ್ತೆ ಕರೆ ಮಾಡಿದಾಗ ವಾಪಸ್‌ ಪ್ರತಿಕ್ರಿಯೆ ಬಂದಿರಲಿಲ್ಲ. ಪೈಲಟ್‌ ಮೇ ಡೇ ಸಂದೇಶ ಕೊಟ್ಟ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತ್ತು ಎಂದು ವರದಿಗಳು ತಿಳಿಸಿವೆ.

Image

ವಿಜಯ್‌ ರೂಪಾನಿ ಸಾವು

gujarat cm vijay rupani

ಲಂಡನ್‌ಗೆ ಪ್ರಯಾಣಿಸುತ್ತಿದ್ದ ವಿಜಯ್‌ ರೂಪಾನಿ 12ನೇ ಸೀಟಿನಲ್ಲಿ ಕುಳಿತುಕೊಂಡಿದ್ದರು. ಲಂಡನ್‌ನಲ್ಲಿರುವ ಮಗಳ ಮನೆಗೆ ತೆರಳಲು ರೂಪಾನಿ ವಿಮಾನ ಹತ್ತಿದ್ದರು. ಆದರೆ ದುರಂತದಲ್ಲಿ ಅವರು ಮೃತಪಟ್ಟಿದ್ದಾರೆ. ಇಬ್ಬರು ಪೈಲಟ್‌, 10 ಸಿಬ್ಬಂದಿ ಸೇರಿ ಒಟ್ಟು 242 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನ ಮೆಡಿಕಲ್‌ ಕಾಲೇಜಿನ ಹಾಸ್ಟೆಲಿನ ಅಡುಗೆ ಮನೆ ಮೇಲೆ ಬಿದ್ದಿದೆ. ಮಧ್ಯಾಹ್ನ ವಿದ್ಯಾರ್ಥಿಗಳು ಊಟ ಮಾಡುವ ಸಮಯದಲ್ಲೇ ಪತನ ಗೊಂಡಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ವೈದ್ಯಕೀಯ ಕಾಲೇಜಿನ ಮೇಲೆ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನ 169 ಭಾರತೀಯರು, 53 ಬ್ರಿಟಿಷ್, 1 ಕೆನಡಿಯನ್ ಮತ್ತು 7 ಪೋರ್ಚುಗೀಸರು ಇದ್ದರು. ಇದೀಗ ಬಂದ ಮಾಹಿತಿಯ ಪ್ರಕಾರ 133 ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕಾಲೇಜಿನಲ್ಲಿದ್ದ ಕೆಲವು ವಿದ್ಯಾರ್ಥಿಗಳು ಕೂಡಾ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹೋಗುತ್ತಿದ್ದ AI171 ವಿಮಾನವು 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು ಮತ್ತು ಗುರುವಾರ ಮಧ್ಯಾಹ್ನ 1:38 ಕ್ಕೆ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು.

error: Content is protected !!