ವಿಮಾನ ದುರಂತ: 133ಕ್ಕೇರಿದ ಸಾವಿನ ಸಂಖ್ಯೆ! ಮಾಜಿ ಸಿಎಂ ರೂಪಾನಿ ಗಂಭೀರ!

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ವೈದ್ಯಕೀಯ ಕಾಲೇಜಿನ ಮೇಲೆ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನ 169 ಭಾರತೀಯರು, 53 ಬ್ರಿಟಿಷ್, 1 ಕೆನಡಿಯನ್ ಮತ್ತು 7 ಪೋರ್ಚುಗೀಸರು ಇದ್ದರು. ಇದೀಗ ಬಂದ ಮಾಹಿತಿಯ ಪ್ರಕಾರ 133 ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕಾಲೇಜಿನಲ್ಲಿದ್ದ ಕೆಲವು ವಿದ್ಯಾರ್ಥಿಗಳು ಕೂಡಾ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

Image Credit: TOI

ಈ ವಿಮಾನದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸಹಿತ ಹಲವು ಮಂದಿ VVIPಗಳು ಇದ್ದರು ಎಂದು ಹೇಳಲಾಗುತ್ತಿದೆ. ವಿಜಯ್ ರೂಪಾನಿ ಸೀಟ್ ಸಂಖ್ಯೆ 2-ಡಿಯಲ್ಲಿ ಕುಳಿತಿದ್ದರು. ಟಿಕೆಟ್ ದೃಢೀಕರಿಸಲಾಗಿದೆ. ಅವರ ಸೀಟ್ ನಂಬರ್ 11 ಜಿ. ಮೂಲಗಳ ಪ್ರಕಾರ, ವಿಜಯ್ ರೂಪಾನಿ ಅವರ ಪತ್ನಿ ಬ್ರಿಟನ್‌ನಲ್ಲಿದ್ದರು. ಅವರ ಪತ್ನಿ 6 ತಿಂಗಳು ಅಲ್ಲಿದ್ದರು. ಅವರನ್ನು ಮರಳಿ ಕರೆತರಲು ವಿಜಯ್ ರೂಪಾನಿ ಲಂಡನ್‌ಗೆ ಹೋಗುತ್ತಿದ್ದರು.

ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹೋಗುತ್ತಿದ್ದ AI171 ವಿಮಾನವು 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು ಮತ್ತು ಗುರುವಾರ ಮಧ್ಯಾಹ್ನ 1:38 ಕ್ಕೆ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು. ಬಿಜೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಹಾಸ್ಟೆಲ್ ಒಳಗೆ ವಿಮಾನದ ಒಂದು ಭಾಗ ಸಿಲುಕಿಕೊಂಡಿರುವುದನ್ನು ಚಿತ್ರಗಳು ತೋರಿಸಿವೆ. ಹಾಸ್ಟೆಲ್ ಕ್ಯಾಂಟೀನ್‌ನಲ್ಲಿನ ಟೇಬಲ್‌ಗಳ ಮೇಲೆ ಕೆಲವು ಆಹಾರ ತಟ್ಟೆಗಳು ಬಿದ್ದಿರುವುದನ್ನು ಮತ್ತು ಹಾನಿಗೊಳಗಾದ ಗೋಡೆಯ ಬಳಿ ಜನರು ನಿಂತಿರುವುದನ್ನು ಚಿತ್ರಗಳು ತೋರಿಸಿವೆ.

error: Content is protected !!