ಮಂಗಳೂರು: ಭಾರತದ ಲೆಕ್ಕಪರಿಶೋಧಕರ ಸಂಸ್ಥೆ (ICAI) – ಮಂಗಳೂರು ಶಾಖೆ “ವಿಮರ್ಶ್” – “ಜ್ಞಾನದ ಪಯಣವು ಸಮನ್ನಿತ ಬುದ್ಧಿಮತ್ತೆಯನ್ನು ಪುಜ್ವಲಿಸುತ್ತದೆ” ಎಂಬ ಶೀರ್ಷಿಕೆಯಡಿಯಲ್ಲಿ ಜೂ. 13 ಮತ್ತು 14 ರಂದು, ಮಂಗಳೂರಿನ ಟೌನ್ ಹಾಲ್ ನಲ್ಲಿ CA ವಿದ್ಯಾಥಿಗಳ ಮೆಗಾ ಸಮ್ಮೇಳನವನ್ನು ಆಯೋಜಿಸುತ್ತಿದೆ. ಈ ಸಮ್ಮೇಳನವು ಬೋರ್ಡ್ ಒಫ್ ಸ್ಟಡೀಸ್, ICAI ನ ಮುಂದಾಳತ್ವದಲ್ಲಿ ನಡೆಯಲಿದೆ ಎಂದು ಆಯೋಜಕರು ಮಂಗಳೂರಿನ ಪತ್ರಿಕಾ ಭವನದಲ್ಲಿ ಹೇಳಿದರು.
ICAI 1949ರಲ್ಲಿ ಸಂಸತ್ತಿನ ಅಧಿನಿಯಮದಡಿಯಲ್ಲಿ ಸ್ಥಾಪಿತವಾಗಿದ್ದು, ಜಗತ್ತಿನಲ್ಲಿ ಎರಡನೆಯ ಅತಿ ದೊಡ್ಡ ಲೆಕ್ಕಪರಿಶೋಧಕರ ಸಂಸ್ಥೆಯಾಗಿರುವದಲ್ಲದೇ, 4 ಲಕ್ಷಕ್ಕೂ ಹೆಚ್ಚು ಸದಸ್ಯರು, 10 ಲಕ್ಷಕ್ಕೂ ಮೀರಿದ ವಿದ್ಯಾರ್ಥಿ ಸಮೂಹ, 5 ಪ್ರಾದೇಶಿಕ ಕಚೇರಿಗಳು, 172 ಶಾಖೆಗಳು, 47 ದೇಶಗಳಲ್ಲಿ 45 ಓವರ್‌ಸೀಸ್ ಅಧ್ಯಾಯಗಳು ಮತ್ತು 33 ಪ್ರತಿನಿಧಿ ಕಚೇರಿಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತದೆ. ಮಂಗಳೂರು ಶಾಖೆಯಲ್ಲಿ 5,000ಕ್ಕೂ ಹೆಚ್ಚು CA ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದು, ದೇಶಾದ್ಯಾಂತ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿಯನ್ನು ಇ ಸಮ್ಮೇಳನದಲ್ಲಿ ನಿರೀಕ್ಷಿಸಬಹುದು. “ವಿಮರ್ಶ್” ಎಂದರೆ ಕೇವಲ ಸಮ್ಮೇಳನವಲ್ಲ; ಇದು ಜ್ಞಾನವನ್ನು ಕಾರ್ಯತ್ಮಕವಾಗಿ ಅನ್ವಯಿಸಿಕೊಡುವ, ಕಲಿಕೆಯೊಂದಿಗೆ ಕ್ರಿಯಾಶೀಲತೆಯನ್ನು ಕೂಡಾ ಒಳಗೊಂಡ ವೇದಿಕೆ. ಈ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು, ಮಾರ್ಗದರ್ಶಕರು ಮತ್ತು ಉದ್ಯಮ ತಜ್ಞರು ಪರಸ್ಪರ ಸಂವಾದ, ಗುಂಪು ಚರ್ಚೆಗಳು ಮತ್ತು ಸಹಭಾಗಿತ್ವದ ಪ್ರಕರ ಅಧ್ಯಯನಗಳ ಮೂಲಕ ಸಹಕಾರಾತ್ಮಕ ಅಧ್ಯಯನ ಅನುಭವವನ್ನು ಪಡೆಯುತ್ತಾರೆ ಎಂದು ಮಾಹಿತಿ ನೀಡಿದರು.
ತಾಂತ್ರಿಕ ಚರ್ಚೆಗಳು (ವಿದ್ಯಾರ್ಥಿ ಪ್ರಸ್ತುತಿಗಳು) :
“ಲೆಕ್ಕ ಪರಿಶೋದನೆಯಲ್ಲಿ ಕೃತಕ ಬುದ್ಧಿಮತ್ತೆಯ ಉಪಯೋಗ”
*ಸಾಂಸ್ಥಿಕೇತರ ವರದೀಗಾರಿಕೆ
“ನೇರ ತೆರಿಗೆ ಮಸೂದೆ ಹಾಗೂ ಸಾಮಾಜಿಕ ಮಾಧ್ಯಮ”
“ಹೊಸ ತಂತ್ರಜ್ಞಾನ ಮತ್ತು ಪರೋಕ್ಷ ತೆರಿಗೆಗಳ ಪರಸ್ಪರ ಪ್ರಭಾವ”
ಪ್ರೇರಣಾದಾಯಕ ಮತ್ತು ತಜ್ಞ ಅಧಿವೇಶನಗಳು:
CA. ಚಂದ್ರಶೇಖರ ಶೆಟ್ಟಿ – “ಜೀವನ ಪಯಣ ಮತ್ತು ಯಶಸ್ಸಿನ ಕಥೆ’
CA. ಪೂರ್ಣಿಮಾ ನಾಯಕ್ – “ಸ್ಮಾರ್ಟ್ ಅಪ್‌ಗಳಲ್ಲಿ ಮತ್ತು ವೆಂಚರ್ ಕ್ಯಾಪಿಟಲ್ ನಿಧಿ -ಅವಕಾಶಗಳು”
ಪ್ಯಾನೆಲ್ ಚರ್ಚೆ (CA. ಅನಂತೇಶ್ ಪ್ರಭು, CA. ನಿಥೇಶ್ ಶೆಟ್ಟಿ, CA. ಗಜಾನನ ಕಾಮತ್: ಸಂಯೋಜಕ: CA. ಪ್ರಸನ್ನ ಶೆಣೈ) – “ಭವಿಷ್ಯದಲ್ಲಿ ಲೆಕ್ಕಪರಿಶೋಧಕರಿಗೆ ಅವಕಾಶಗಳು (ಉದ್ಯಮ, ವತ್ತಿ, ಉದ್ಯೋಗ)”
ಶ್ರೀ ಅಂಬರೀಶ್ ಬಾಳಿಗ- “ಜಾಗತಿಕ ಬಂಡವಾಳ ಮಾರುಕಟ್ಟೆಯಲ್ಲಿ ಅವಕಾಶಗಳು”
ಡಾ. ಸಚಿನ್ ನಡ್ಕ – “ಮಾನಸಿಕ ಮತ್ತು ಪೌಷ್ಟಿಕ ಕ್ಷೇಮ ನಿರ್ವಹಣೆ”
ಶ್ರೀ ಸತ್ಯ ಶಂಕರ್ (Megha Fruit Processing ನಿರ್ವಹಣಾ ನಿರ್ದೇಶಕ ಮತ್ತು ಅಧ್ಯಕ್ಷರು) – “ನೀತಿಪರ
ನಾಯಕತ್ವ: ಉದ್ದೇಶದೊಂದಿಗೆ ಯಶಸ್ಸು ಸೃಷ್ಟಿ”
ಹೀಗೆ ಹಲವು ಕಾರ್ಯಕ್ರಮಗಳು ನಡೆಯಲಿದೆ ಎಂದು ಆಯೋಜಕರು ಮಾಹಿತಿ ನೀಡಿದರು.
CA. ಪ್ರಶಾಂತ್ ಪೈ ಕೆ. ಅಧ್ಯಕ್ಷ, ICAI ಮಂಗಳೂರು ಶಾಖೆ CA. ಡ್ಯಾನಿಯಲ್ ಮಾರ್ಷ್ ಪೆರೇರಾ – ಉಪಾ ಧ್ಯ ಕ್ಷ CA. ಮಯ್ತಾ ರಾವ್ ಕಾರ್ಯದರ್ಶಿ CA. ಬಾಲಸುಬ್ರಹ್ಮಣ್ಯ ಎನ್ ಖಜಾಂಜಿ, CA. ಬಂಟ್ವಾಲ್ ನಿಥಿನ್ ಬಾಲಿಗ- SICASA ಅಧ್ಯಕ್ಷ, CA. ಗೌರವ ಹೆಗ್ಡೆ – ಸಂಯೋಜಿತ ಸದಸ್ಯ, CA. ಕೃಷ್ಣಾನಂದ ಪೈ – ಸದಸ್ಯ, ಕುಮಾರಿ ಭೂಮಿಕಾ – SICASA ಉಪಾಧ್ಯಕ್ಷೆ, ಕುಮಾರಿ ಅದಿತಿ -SICASA ಕಾರ್ಯದರ್ಶಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.