ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಸಿಹಿ ಸುದ್ದಿ, ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್ ಗಳ ಅಂತರದಲ್ಲಿ ಜಯ ಸಾಧಿಸಿ ಆರ್ಸಿಬಿ ಪಡೆ ಮೊದಲ ಬಾರಿ ಟ್ರೋಫಿ ಎತ್ತಿ ಹಿಡಿದು 18 ವರ್ಷಗಳ ಕನಸನ್ನು ನನಸಾಗಿಸಿಕೊಂಡಿದೆ. ಇದೀಗ ವಿಜಯದ ಬೆನ್ನಲ್ಲೇ ಇಂದು ಸಂಜೆ ಬೆಂಗಳೂರಿನಲ್ಲಿ ಆರ್ಸಿಬಿಯ ವಿಕ್ಟರಿ ಪರೇಡ್ ನಡೆಯಲಿದೆ.
ಈ ವಿಚಾರವನ್ನು ಆರ್ಸಿಬಿ ಅಧಿಕೃತವಾಗಿ ತಿಳಿಸಿದ್ದು, ಮಧ್ಯಾಹ್ನ 3:30ಕ್ಕೆ ವಿಧಾನಸೌಧದಿಂದ ವಿಜಯೋತ್ಸವ ಮೆರವಣಿಗೆ ಆರಂಭಗೊಳ್ಳಲಿದ್ದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊನೆಯಾಗಲಿದೆ. ಈ ಬಗ್ಗೆ ಶೀಘ್ರವೇ ಮತ್ತಷ್ಟು ಮಾಹಿತಿಯನ್ನು ನೀಡಲಾಗುವುದು ಎಂದು ಆರ್ಸಿಬಿ ತಂಡವು ಹೇಳಿದೆ.
“ಬೆಂಗಳೂರಿನಲ್ಲಿ ಆರ್ಸಿಬಿಯ ವಿಕ್ಟರಿ ಪರೇಡ್ ನಡೆಯಲಿದೆ. ಈ ಕಿರೀಟ ನಿಮಗಾಗಿ. 12ನೇ ಮ್ಯಾನ್ ಆರ್ಮಿ. ಪ್ರತಿ ವರ್ಷ, ಪ್ರತಿ ಹರ್ಷೋದ್ಗಾರ, ಪ್ರತಿ ಕಣ್ಣೀರಿಗೆ” ಎಂದು ಆರ್ಸಿಬಿ ಸಾಮಾಜಿಕ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.