ಕಿನ್ನಿಗೋಳಿ: ಹಲಸಿನ ಮರದಿಂದ ಬಿದ್ದು ವ್ಯಕ್ತಿ ಸಾವು

ಕಿನ್ನಿಗೋಳಿ : ಹಲಸಿನ‌ ಮರದಿಂದ ಆಯತಪ್ಪಿ ಬಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ನಿನ್ನೆ ಇಲ್ಲಿನ ಬಾಬಕೋಡಿಯಲ್ಲಿ ಸಂಭವಿಸಿದ್ದು, ಇಂದು ಬೆಳಕಿಗೆ ಬಂದಿದೆ. ಕೆಮ್ಮಡೆ ಮೂಲದ ಪ್ರಸ್ತುತ ಕರ್ನಿರೆ ನಿವಾಸಿ, ಹರೀಶ್ ( 40) ಮೃತ ದುರ್ದೈವಿ.


ಇವರು ಹರೀಶ್ ಶುಕ್ರವಾರ ಮಧ್ಯಾಹ್ನ ಬಾಬಕೋಡಿಯ ಪಿಲಿಕ್ಸ್ ಡಿಸೋಜರ ಮನೆಗೆ ಹಲಸಿನ ಕಾಯಿ ಕೀಳಲು ತೆರಳಿದ್ದರು. ಮೊದಲಿಗೆ ತೆಂಗಿನ ಕಾಯಿ ಕಿತ್ತು ಬಳಿಕ ಹಲಸಿನ ಮರ ಹತ್ತಿದ್ದರು. ಈ ವೇಳೆ ಮರದಿಂದ ಆಯತಪ್ಪಿ ಕಾಂಕ್ರೀಟ್‌ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಬದುಕಿಲಸು ಸಾಧ್ಯವಾಗಿಲ್ಲ.

ಮರಕಡಿಯುವ ಕೆಲಸ ಮಾಡುವ ಹರೀಶ್‌ ಈ ಹಿಂದೆಯೂ ಒಮ್ಮೆ ಕಿನ್ನಿಗೋಳಿಯಲ್ಲಿ ಮರದಲ್ಲಿಯೇ ಸಿಲುಕಿದ್ದಾಗ ಸ್ಥಳೀಯರಾದ ವಿಜಯ್ ಅಮೀನ್ ಎಂಬವರು ರಕ್ಷಿಸಿದ್ದರು. ಮೃತ ಹರೀಶ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

error: Content is protected !!