ಬೆಂಗಳೂರು: ಸಂಗೀತ ಸಂಯೋಜಕ ಮತ್ತು ಗಾಯಕ ಅಶ್ವಿನ್ ಪಿ ಕುಮಾರ್ ಅವರಿಗೆ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ 2025 ಅನ್ನು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಹಿರಿಯರತ್ನ ಚಿನ್ನದ ಹಬ್ಬದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಅಶ್ವಿನ್ ಸಂಗೀತ ಸಂಯೋಜಿಸಿದ ವನ್ಯಜೀವಿ ಡಾಕ್ಯುಮೆಂಟರಿ ‘ಕಪ್ಪೆ ರಾಗ’, 2023ರಲ್ಲಿ ಜ್ಯಾಕ್ಸನ್ ವೈಲ್ಡ್ ಮೀಡಿಯಾ ಪ್ರಶಸ್ತಿ ಹಸಿರು ಆಸ್ಕರ್ ಗೆ ಪಾತ್ರವಾಗಿತ್ತು. ಈ ಗೌರವಕ್ಕೆ ಪಾತ್ರವಾದ ಮೊದಲ ಕನ್ನಡ ಭಾಷೆಯ ಚಿತ್ರವಾಗಿದೆ. ಅಶ್ವಿನ್ ‘ಮೇಡ್ ಇನ್ ಬೆಂಗಳೂರುʼ ಮತ್ತು ‘ಚೌಕಬಾರಾ’ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.