ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬ್ಯಾನರ್ ಹಾಕದಂತೆ ಸೂಚಿಸಿದ ಬ್ಯಾನರ್ ಪಕ್ಕವೇ ಖಾಸಗಿ ಸಂಸ್ಥೆಯೊಂದು ಪ್ಲಾಸ್ಟಿಕ್ ನ ಫ್ಲೆಕ್ಸ್ ಬ್ಯಾನರ್ ಅಳವಡಿಸಿರುವುದು ನಗರದ ನಂತೂರು ಸರ್ಕಲ್ ನಲ್ಲಿ ಕಂಡುಬಂದಿದ್ದು ಮಹಾನಗರಪಾಲಿಕೆಯ ಕ್ರಮವನ್ನೇ ಅಣಕಿಸುವಂತಿದೆ.

ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಬ್ಯಾನರ್, ಬಂಟಿಂಗ್ಸ್ ಅಳವಡಿಸದಂತೆ ಕ್ರಮ ಜರುಗಿಸುತ್ತಲೇ ಇದೆ. ಆದರೆ ನಗರದಲ್ಲಿ ಬ್ಯಾನರ್ ಬಂಟಿಂಗ್ ಹಾಕುವುದು ನಿಂತಿಲ್ಲ.

ಮೊನ್ನೆ ಸಿಎಂ ಸಿದ್ದರಾಮಯ್ಯ ಅವರಿಂದ ಜಿಲ್ಲಾಡಳಿ ಲೋಕಾರ್ಪಣೆ ವೇಳೆ ಇಡೀ ಮಂಗಳೂರು ಝಗಮಗಿಸುವಂತೆ ಬ್ಯಾನರ್, ಬಂಟಿಂಗ್ಸ್ ಹಾಕಿ ಇಡೀ ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆದಿತ್ತು. ಅದನ್ನು ಇನ್ನೂ ತೆರವು ಮಾಡಿಲ್ಲ. ಅಲ್ಲದೆ ತಿರಂಗದ ಬಟ್ಟೆಗಳು ಹರಿದು ಚೆಲ್ಲಾಡಿ ದೇಶಕ್ಕೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.