ನವದೆಹಲಿ: ಆಲಿಕಲ್ಲು ಹೊಡೆತಕ್ಕೆ ಇಂಡಿಗೋ (IndiGo) ವಿಮಾನದ ಮೂತಿಗೆ ಹಾನಿಯಾಗಿದ್ದು, ಭಯದಿಂದ ಜನರು ಕಾಪಾಡಿ ಕಾಪಾಡಿ ಎಂದು ಕಿರುಚಾಡಿದ ಘಟನೆ ಶ್ರೀನಗರದಲ್ಲಿ ಸಂಭವಿಸಿದೆ. ಈ ವಿಮಾನ ದೆಹಲಿಯಿಂದ ಶ್ರೀನಗರಕ್ಕೆ ಹೊರಟಿದ್ದು, ಘಟನೆ ನಡೆಯುತ್ತಿದ್ದಂತೆ ಎಮೆರ್ಜೆನ್ಸಿ ಘೋಷಿಸಿ ಶ್ರೀನಗರದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ. ವಿಮಾನದಲ್ಲಿದ್ದ ಸುಮಾರು 227ಕ್ಕೂ ಅಧಿಕ ಮಂದಿ ಸುರಕ್ಷಿತರಾಗಿದ್ದಾರೆ.
ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ- 6E2142 ವಿಮಾನವು ಮಂಗಳವಾರ ಸಂಜೆ ಗಾಳಿಯಲ್ಲಿ ತೀವ್ರ ಹವಾಮಾನ ಪ್ರಕ್ಷುಬ್ಧತೆಯನ್ನು ಅನುಭವಿಸಿತು. ಇದರಿಂದಾಗಿ ಪೈಲಟ್ ವಾಯು ಸಂಚಾರ ನಿಯಂತ್ರಣ (ಎಟಿಸಿ) ದೊಂದಿಗೆ ತುರ್ತು ಪರಿಸ್ಥಿತಿ ಘೋಷಿಸಿದರು ಎಟಿಸಿಗೆ ಪೈಲಟ್ ಎರ್ಮೆಜೆನ್ಸಿ ಘೋಷಿಸಿದರು. ಮಳೆ ಮತ್ತು ಆಲಿಕಲ್ಲು ರಭಸದಿಂದ ವಿಮಾನ ಅಲುಗಾಡಿತು. ವಿಮಾನ ಅಲುಗಾಡುತ್ತಿದ್ದಂತೆ ಪ್ರಯಾಣಿಕರು ಆಘಾತಗೊಂಡರು.
ಭಯಭೀತಿರಾದ ಪ್ರಯಾಣಿಕರಿಂದ ಕಿರುಚಾಡಿದರು. ವಿಮಾನವು ಶ್ರೀನಗರ ಸಮೀಪಿಸುತ್ತಿದ್ದಾಗ ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಮೂತಿಗೆ ಹಾನಿಯಾಗಿದೆ ಆದರೆ ಸಿಬ್ಬಂದಿ ಸಂಜೆ 6:30 ಕ್ಕೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು. ವಿಮಾನ ಇಳಿದ ನಂತರ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಪೈಲಟ್‌ಗಳ ಕೌಶಲ್ಯದಿಂದ ವಿಮಾನ ಬಚಾವ್ ಆಗಿದ್ದು, ಪ್ರಯಾಣಿಕರು ಬದುಕುಳಿಯುವಂತಾಗಿದೆ. ವಿಮಾನದಲ್ಲಾದ ತಲ್ಲಣದ ದೃಶ್ಯ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ.
ಹರಿಯಾಣ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ಚಂಡಮಾರುತದಿಂದಾಗ ಹವಾಮಾನದಲ್ಲಿ ಪ್ರಕ್ಷುಬ್ದ ಸ್ಥಿತಿ ಉಂಟಾಗಿದ್ದು, ವಿಮಾನ ಹಾರಾಟದ ಮೇಲೆ ಪರಿಣಾಮ ಬೀರುತ್ತಿದೆ. ಅರೇಬಿಯನ್ ಸಮುದ್ರ ಮತ್ತು ಬಂಗಾಳಕೊಲ್ಲಿಯಿಂದ ತೇವಾಂಶ ಅಧಿಕಾವಾಗಿದ್ದು, ಆಲಿಕಲ್ಲುಗಳು ವಿಮಾನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
Video Link
https://www.instagram.com/reel/DJ8gnEOTWiL/?igsh=aXU3OWRueTV1cXpx