ನಿಗೂಢವಾಗಿ ಕಣ್ಮರೆಯಾಗಿದ್ದ ಪ್ರೇತ ಸರೋವರ ಮತ್ತೆ ಪ್ರತ್ಯಕ್ಷ! 94,000 ಎಕರೆ ಕೃಷಿಭೂಮಿ ಮುಳುಗಡೆ

ಕ್ಯಾಲಿಫೋರ್ನಿಯಾ: ಒಂದು ಶತಮಾನದ ಹಿಂದೆ ನಿಗೂಢವಾಗಿ ಕಣ್ಮರೆಯಾಗಿದ್ದ ಪ್ರೇತ ಸರೋವರ ಎಂದೇ ಕರೆಯಲ್ಪಡುತ್ತಿದ್ದ ಕ್ಯಾಲಿಫೋರ್ನಿಯಾದ ಮಿಸ್ಸಿಸ್ಸಿಪ್ಪಿಯ ಪಶ್ಚಿಮಕ್ಕೆ ಸ್ಯಾನ್ ಜೋಕ್ವಿನ್ ಕಣಿವೆಯಲ್ಲಿದ್ದ ತುಲೇರ್ ಸರೋವರವು ಇದೀಗ ಮತ್ತೆ ಪ್ರತ್ಯಕ್ಷವಾಗುವ ಮೂಲಕ ಅಚ್ಚರಿಕೆ ಕಾರಣವಾಗಿದೆ.

ಇದು ಒಂದು ಕಾಲದಲ್ಲಿ ಅತ್ಯಂತ ದೊಡ್ಡ ಸಿಹಿನೀರಿನ ಜಲಾಶಯವಾಗಿತ್ತು. ಸರೋವರಕ್ಕೆ ಕಾಲುವೆ ನಿರ್ಮಿಸಿ ಇದರ ನೀರನ್ನು ಕೃಷಿಗಾಗಿ ಬಳಕೆ ಮಾಡಲಾಗುತ್ತಿತ್ತು. ನೂರು ವರ್ಷಗಳಿಂದ ಕಣ್ಮರೆಯಾಗಿ ಬಟಾಬಯಲಾಗಿದ್ದ ಜಾಗದಲ್ಲಿ ಇದೀಗ ಮತ್ತೆ ನೀರು ಕಾಣಿಸಿ ಅಚ್ಚರಿಗೆ ಕಾರಣವಾಗಿದ್ದು, 94,000 ಎಕರೆ ಕೃಷಿಭೂಮಿ ಮುಳುಗಡೆಯಾಗಿದೆ

19 ನೇ ಶತಮಾನದ ಉತ್ತರಾರ್ಧದಲ್ಲಿ, ತುಲೇರ್ ಸರೋವರವು 100 ಮೈಲುಗಳಿಗಿಂತ ಹೆಚ್ಚು ಉದ್ದ ಮತ್ತು 30 ಮೈಲುಗಳಷ್ಟು ಅಗಲವನ್ನು ಹೊಂದಿದ್ದು ಆಗಾಧ ನೀರನ್ನು ಹೊಂದಿತ್ತಯ. ಬೇಕರ್ಸ್ಫೀಲ್ಡ್ನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಉಗಿ ಹಡಗು ಪ್ರಯಾಣವನ್ನು ಸಹ ಇದರಿಂದಲೇ ಮಾಡಲಾಗುತ್ತಿತ್ತು. ಪೂರ್ವಜನರ ಮಾನವ ನಿರ್ಮಿತ ನೀರಾವರಿ ವ್ಯವಸ್ಥೆಯಿಂದಾಗಿ ನೀರಿನ ಮಟ್ಟ ಕಡಿಮೆಯಾಗಿ ಜಲಮಾರ್ಗಗಳು ಕಣ್ಮರೆಯಾಗಲಾರಂಭಿಸಿತು. ಸಿಯೆರಾ ನೆವಾಡಾ ಪರ್ವತಗಳಿಂದ ಕರಗುವ ಹಿಮದಿಂದ ತುಂಬುತ್ತಿದ್ದ ಸರೋವರವನ್ನು “ಪಾ’ಶಿ” ಎಂದು ಕರೆಯಲ್ಪಡುವ ಟಾಚಿ ಯೊಕುಟ್ ಬುಡಕಟ್ಟು ಜನಾಂಗದವರು ಅವಲಂಬಿಸಿದ್ದರು. ಏಕೆಂದರೆ ಈ ಪ್ರದೇಶದಲ್ಲಿ ಮಳೆ ವಿರಳವಾಗಿದೆ.

ತುಲೇರ್ ಸರೋವರವು ಮಿಸ್ಸಿಸ್ಸಿಪ್ಪಿ ನದಿಯ ಪಶ್ಚಿಮಕ್ಕೆ ಅತ್ಯಂತ ದೊಡ್ಡ ಸಿಹಿನೀರಿನ ಜಲಾಶಯವಾಗಿತ್ತು. ಈಗ ಅದನ್ನು ಊಹಿಸುವುದು ನಿಜವಾಗಿಯೂ ಕಷ್ಟವಾಗಿತ್ತು ಎಂದು ಸಾಮಾಜಿಕ ವಿಜ್ಞಾನ ಮತ್ತು ಪರಿಸರ ಆರೋಗ್ಯ ಸಂಶೋಧನಾ ಸಂಸ್ಥೆಯಲ್ಲಿ ಈಶಾನ್ಯ ವಿಶ್ವವಿದ್ಯಾಲಯದಲ್ಲಿ ಪೋಸ್ಟ್‌ಡಾಕ್ಟರಲ್ ಸಂಶೋಧಕ ವಿವಿಯನ್ ಅಂಡರ್‌ಹಿಲ್ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಸಂಶೋಧನೆಯ ಪ್ರಕಾರ 2023 ರಲ್ಲಿ ಕ್ಯಾಲಿಫೋರ್ನಿಯಾದ ವಾತಾವರಣ ಹಾಗೂ ನದಿಗಳ ನೀರಿನ ಮಟ್ಟ ಹೆಚ್ಚಳದಿಂದಾಗಿ ಸರೋವರ ಅಚ್ಚರಿಯ ರೀತಿಯಲ್ಲಿ ಮರುಪೂರಣಗೊಂಡಿರಬಹುದು. ಇದೀಗ ಸರೋವರದಲ್ಲಿ ಸ್ಯಾನ್ ಜೋಕ್ವಿನ್ ಕಣಿವೆಯಲ್ಲಿನ ಸ್ಥಳೀಯ ವನ್ಯಜೀವಿಗಳು ನೀರಿನ ಆಸರೆ ಪಡೆಯಲಾರಂಭಿಸಿದೆ. ಇಲ್ಲಿನ ಕೃಷಿ ಕಾರ್ಮಿಕರು ಸರೋವರದ ಮೇಲೆ ಕುತೂಹಲಭರಿತರಾಗಿದ್ದಾರೆ.

ಅಂಡರ್‌ಹಿಲ್ ಹೇಳುವಂತೆ, ಒಂದು ಕಾಲದಲ್ಲಿ ಒಂದು ಉಗಿ ಹಡಗು “ಬೇಕರ್ಸ್‌ಫೀಲ್ಡ್ ಪ್ರದೇಶದಿಂದ ಫ್ರೆಸ್ನೊಗೆ ಮತ್ತು ನಂತರ ಸ್ಯಾನ್ ಫ್ರಾನ್ಸಿಸ್ಕೋಗೆ ಕೃಷಿ ಸರಬರಾಜುಗಳನ್ನು ಸಾಗಿಸುವಷ್ಟು ನೀರಿತ್ತು. ಸುಮಾರು 300 ಮೈಲುಗಳಷ್ಟು ವಿಸ್ತೀರ್ಣ ಹೊಂದಿತ್ತು. ಆದರೆ ಹಿಂದೆ ಕೃಷಿಗಾಗಿ ಮಾನವ ನಿರ್ಮಿತ ಕಾಲುವೆ ಮಾಡಿರುವುದರಿಂದ ಇದರಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

Instagram Link:

https://www.instagram.com/reel/C0zIv5HriBO/?utm_source=ig_embed&ig_rid=39cfc00c-7802-492b-9e24-dca43a3a3bfb

error: Content is protected !!