ವಜ್ರದೇಹಿಯವರ ನರಸಿಂಹ ಹೋಮದಲ್ಲಿ ಕಾಣಿಸಿಕೊಂಡ ಅಭಯಪ್ರದ ಪರಮಾತ್ಮ

ಮಂಗಳೂರು: ಆಪರೇಷನ್ ಸಿಂಧೂರ್‌ನಲ್ಲಿ ಸಕ್ರಿಯವಾಗಿರುವ ನಮ್ಮ ದೇಶದ ವೀರ ಸೈನಿಕರ ಸಂರಕ್ಷಣೆಗಾಗಿ ಹಾಗೂ ನಮ್ಮ ಭಾರತ ದೇಶದ ಸಂರಕ್ಷಣೆಯ ಸಂಕಲ್ಪದೊಂದಿಗೆ ಗುರುಪುರ ಶ್ರೀ ವಜ್ರದೇಹಿ ಮಠದಲ್ಲಿ, ನರಸಿಂಹ ಜಯಂತಿಯಂಗವಾಗಿ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ವೇ।ಮೂ। ಪ್ರಜ್ವಲ್ ಭಟ್ ಅವರ ಪೌರೋಹಿತ್ಯದಲ್ಲಿ ನರಸಿಂಹ ಸೂಕ್ತ ಹೋಮವು ಭಾನುವಾರ ಯಶಸ್ವಿಯಾಗಿ ನೆರವೇರಿದೆ.


ಈ ಹೋಮದಲ್ಲಿ ಪ್ರಜ್ವಲಿಸಿಕೊಂಡ ಬೆಂಕಿ ನರಸಿಂಹ ದೇವರ ರೂಪ ತಾಳಿಕೊಂಡಿದ್ದು, ಅಚ್ಚರಿಕೆಗೆ ಕಾರಣವಾಗಿದೆ. ಹೋಮದಲ್ಲಿ ದೇವರು ಆಶೀರ್ವಾದ ನೀಡಿ ಅಭಯ ನೀಡುವಂತೆ ಬೆಂಕಿಯು ಪ್ರಜ್ವಲಿಸಿರುವುದು ಕಂಡು ಬಂದಿದ್ದು, ಇದರ ಚಿತ್ರವನ್ನು ಸ್ವತಃ ವಜ್ರದೇಹಿ ಶ್ರೀ ರಾಜಶೇಖಾರನಂದ ಸ್ವಾಮೀಜಿಯವರೇ ತನ್ನ ಸ್ಟೇಟಸ್‌ನಲ್ಲಿ ಹಾಕಿಕೊಂಡು, ʻನರಸಿಂಹ ಹೋಮದಲ್ಲಿ ಅಭಯಪ್ರದ ಪರಮಾತ್ಮʼ ಎಂದು ಬರೆದುಕೊಂಡಿದ್ದಾರೆ.

ವಜ್ರದೇಹಿ ಮಠದಲ್ಲಿ ಹಲವಾರು ಹೋಮ ಹವನಗಳು ನಡೆದಿದ್ದು, ಆವಾಗಲೂ ಅವರು ದೇವರ ರೂಪ ಕಾಣಿಸಿದ ಚಿತ್ರವನ್ನು ಸ್ಟೇಟಸ್‌ನಲ್ಲಿ ಹಾಕಿಕೊಳ್ಳುತ್ತಿದ್ದರು.

error: Content is protected !!