ಪಾಕಿಸ್ತಾನದ ವಿರುದ್ಧ ಭಾರತದಿಂದ ಯುದ್ಧ ಘೋಷಣೆ? ರಕ್ಷಣಾ ಸಚಿವರಿಂದ ಉನ್ನತ ಮಿಲಿಟರಿ ನಾಯಕರ ಜೊತೆ ಚರ್ಚೆ

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ವ್ಯಾಪಕ ಸಂಘರ್ಷದ ಭೀತಿಯ ನಡುವೆ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು (ಮೇ 9, 2025) ಉನ್ನತ ಮಿಲಿಟರಿ ನಾಯಕರ ಜೊತೆ ಅತ್ಯಂತ ಮಹತ್ವದ ಸಭೆ ನಡೆಸಿದ್ದು, ಸಭಯಲ್ಲಿ ನಡೆದ ಮಾಹಿತಿಗಳನ್ನು ಮಾಧ್ಯಮಗಳಿಗೆ ಇನ್ನೂ ಬಹಿರಂಗಪಡಿಸಲಾಗಿಲ್ಲ.

ನಿನ್ನೆ ಪಾಕಿಸ್ತಾನ ಭಾರತದ ಜೊತೆ ಕಾಲ್ಕೆರೆದು ಯುದ್ಧಕ್ಕೆ ಬಂದಿದ್ದು, ಇದರಿಂದ ರೊಚ್ಚಿಗೆದ್ದ ಭಾರತದ ವಾಯುಸೇನೆ ಅದರ ವಿರುದ್ಧ ಮಾರಕ ದಾಳಿ ನಡೆಸಿ ಸದ್ದಡಗಿಸಿದೆ.

ನಿನ್ನೆಯ ದಾಳಿಯಿಂದ ಕಂಗಾಲಾದ ಪಾಕಿಸ್ತಾನ ಇಂದು ಮತ್ತೆ ದಾಳಿ ನಡೆಸುವ ಗುಪ್ತಚರ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಮೂರೂ ಸೇನೆಗಳು ಹೈ ಅಲರ್ಟ್‌ನಲ್ಲಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಅವರು ಇಂದು ನವದೆಹಲಿಯ ಸೌತ್ ಬ್ಲಾಕ್‌ನಲ್ಲಿ ಸಿಡಿಎಸ್ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ, ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಪಾಕಿಸ್ತಾನ ಮತ್ತೆ ಭಾರತದ ಮೇಲೆ ದಾಳಿ ನಡೆಸಿದರೆ, ಭಾರತ ಇದನ್ನು ಯುದ್ಧ ಎಂದು ಪರಿಗಣಿಸಿ ಪಾಕಿಸ್ತಾನದ ಮೇಲೆ ದಾಳಿ ನಡೆಸಬೇಕು ಎನ್ನುವ ಬಗ್ಗೆ ಚರ್ಚೆಗಳು ನಡೆದಿವೆ ಎನ್ನಲಾಗಿದೆ.

error: Content is protected !!