ಕಾರ್ ಡಿಕ್ಕಿ: ಮಹಿಳೆ ಸ್ಥಳದಲ್ಲೇ ಮೃತ್ಯು!

ಮಂಗಳೂರು: ಬಸ್ ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಹಿಳೆಗೆ ವಿದ್ಯಾರ್ಥಿ ಚಲಾಯಿಸಿಕೊಂಡು ಬರುತ್ತಿದ್ದ ಕಾರ್ ಡಿಕ್ಕಿ ಹೊಡೆದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುತ್ತಾರ್ ಬಳಿಯ ಪಂಡಿತ್ ಹೌಸ್ ನಲ್ಲಿ ನಿನ್ನೆ ಸಂಜೆ ನಡೆದಿದೆ.


ಪಂಡಿತ್‌ ಹೌಸ್‌ ನಿವಾಸಿ ಪೂರ್ಣಿಮ(59)ಮೃತ ಮಹಿಳೆ. ಬಸ್ಸಿನಿಂದ ಇಳಿದು ರಸ್ತೆ ದಾಟುವ ಸಂದರ್ಭ ವೈದ್ಯಕೀಯ ವಿದ್ಯಾರ್ಥಿ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಪೂರ್ಣಿಮಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೇ.16 ರಂದು ಪೂರ್ಣಿಮಾ ಅವರ ಬಾವನ ಪುತ್ರನ ವಿವಾಹ ಸಮಾರಂಭವಿತ್ತು. ಆ ಪ್ರಯುಕ್ತ ಮದುವೆ ಮನೆಗೆ ತೆರಳಿ ವಾಪಸ್ಸಾಗುವಾಗ ಈ ದುರಂತ ಸಂಭವಿಸಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತಿ, ಓರ್ವ ಪುತ್ರನನ್ನು ಅಗಲಿದ್ದಾರೆ.

error: Content is protected !!