ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಪ್ರತೀಕಾರಕ್ಕೆ ಮೀನು ವ್ಯಾಪಾರಿಯ ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ರೌಡಿಶೀಟರ್ ಕೋಡಿಕೆರೆ ಲೋಕೇಶ್ ಯಾನೆ ಲೋಕಿ ಎಂಬಾತನನ್ನು ಕಾವೂರು ಪೊಲೀಸರು ಮೊನ್ನೆಯೇ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ದುಷ್ಕರ್ಮಿಗಳಿಂದ ಹತ್ಯೆಯಾದ ರೌಡಿ ಶೀಟರ್, ಹಿಂದೂ ಸಂಘಟನೆಗಳಲ್ಲಿ ಸಕ್ರಿಯನಾಗಿದ್ದ ಸುಹಾಸ್ ಶೆಟ್ಟಿ ಲೋಕೇಶ್ ಕೋಡಿಕೆರೆ ಸಹಚರನಾಗಿದ್ದ.
ಈ ಹಿನ್ನೆಲೆಯಲ್ಲಿ ಹತ್ಯೆಗೆ ಪ್ರತೀಕಾರ ತೀರಿಸಲು ತಂಡವು ಸ್ಕೆಚ್ ಹಾಕಿತ್ತು. ಮುಂಜಾನೆ ಕುಂಟಿಕಾನ ಬಳಿ ಮೀನು ವ್ಯಾಪಾರಿಯ ಕೊಲೆಗೆ ಇನ್ನೋವಾ ಕಾರ್ ನಲ್ಲಿ ಬಂದು ಯತ್ನಿಸಿತ್ತು ಎಂದು ತಿಳಿದು ಬಂದಿದೆ. ಹೀಗಾಗಿ ಕಾವೂರು ಪೊಲೀಸರು ಲೋಕೇಶ್ ನನ್ನು ವಶಕ್ಕೆ ಪಡೆದಿರುವ ಮಾಹಿತಿ ಲಭಿಸಿದೆ.
ಶುಕ್ರವಾರ ಬೆಳಿಗ್ಗೆ ಕುಂಟಿಕಾನ ಬಳಿ ಉಳ್ಳಾಲ ನಿವಾಸಿ ಲುಕ್ಮಾನ್ ಎಂಬ ಮೀನಿನ ವ್ಯಾಪಾರಿಯನ್ನು ಕೊಲೆಗೆ ಯತ್ನಿಸಿದ್ದು ಈ ವೇಳೆ ಹಿಂದೂ ಮಹಿಳೆ ಭಯದಿಂದ ಬೊಬ್ಬೆ ಹಾಕಿದ್ದು, ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು. ಮಹಿಳೆಯ ಸಮಯಪ್ರಜ್ಞೆಯಿಂದ ಮೀನು ವ್ಯಾಪಾರಿ ಸಾವಿನಿಂದ ಬಚಾವ್ ಆಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.