ಹಳೆಯಂಗಡಿ, ತೋಕೂರು ಗ್ರಾಮದ ಪವಿತ್ರ ಮಣ್ಣಿನಲ್ಲಿ ಮದ್ದೇರಿ ದೈವಸ್ಥಾನದ ಕಾರ್ಣಿಕ ಕ್ಷೇತ್ರದಲ್ಲಿ, ನಮಗೆಲ್ಲಾ ಅಭಯದ ಗಂಧ ನೀಡಿ ಹರಸುವ,ಉಲ್ಲಾಯ, ಮೈಸಂದಾಯ, ಕಾಂತೇರಿ ಜುಮಾದಿ ಬಂಟ , ಸಾರಾಳ ಜುಮಾದಿ ಬಂಟ ದೈವಗಳ ಪ್ರತಿಷ್ಠಾ ಕಲಶಾಭಿಷೇಕ ಮತ್ತು ಸಿರಿ ಸಿಂಗಾರದ ನೇಮೋತ್ಸವಕ್ಕೆ ಪೂರ್ವ ಸಿದ್ದತೆ ಆರಂಭಗೊಂಡಿವೆ.
ಮೇ 7,ಬುಧವಾರ ಮೊದಲ್ಗೊಂಡು 9 ರ ತನಕ ಜರಗಲಿದೆ.
ಸಂಪ್ರದಾಯ ಬದ್ದವಾಗಿ ಜರಗುವ ಧಾರ್ಮಿಕ, ಅಧ್ಯಾತ್ಮಿಕ,ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪರಿವಾರ ಸಮೇತ ತಾವೆಲ್ಲ ಉಪಸ್ಥಿತರಿರ ಬೇಕಾಗಿ ವಿನಂತಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪದ್ಮನಾಭ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಮೋಹನ್‌ದಾಸ್ ತೋಕೂರು ಮದ್ದೇರಿಗುತ್ತು ಕಾರ್ಯದರ್ಶಿ ಹೇಮನಾಥ ಅಮೀನ್ ,ಕೋಶಾಧಿಕಾರಿ ಪುರುಷೋತ್ತಮ ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ