ಮಂಗಳೂರು: ನಿನ್ನೆ ಹತ್ಯೆಗೀಡಾದ ಸುಹಾಸ್, ಫಾಜಿಲ್ ಕೊಲೆಯ ಅಪರಾಧಿ ಎಂದು ಇನ್ನೂ ಸಾಬೀತಾಗಿಲ್ಲ ಎಂದು = ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಹೇಳಿದ್ದಾರೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಧರ್ಮ, ದೇಶಕ್ಕಾಗಿ ಹೋರಾಟ ಮಾಡುವವರು ಕ್ಷಣ ಕ್ಷಣಕ್ಕೂ ಎಚ್ಚರವಾಗಿರಬೇಕಾದ ಪರಿಸ್ಥಿತಿ ಇದೆ. ಭಯದ ವಾತಾವರಣ ಸೃಷ್ಟಿ ಮಾಡುವ ಪ್ರಯತ್ನ, ಸಾವಿರಾರು ವರ್ಷದಿಂದ ರಾಕ್ಷಸರು ಸಜ್ಜನರ ಮೇಲೆ ಆಕ್ರಮಣ ಮಾಡುತ್ತಿದ್ದಾರೆ. ಅದು ಈಗಲೂ ಮುಂದುವರಿದಿದೆ ಇದರ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಕಲ್ಲಡ್ಕ ಪ್ರಭಾಕರ ಭಟ್ ಗುಡುಗಿದ್ದಾರೆ.