ಪತ್ನಿ- ಮಗುವಿನ ಕಣ್ಣೆದುರೇ ಬೆಂಗಳೂರು ಉದ್ಯಮಿಯ ಹತ್ಯೆಗೈದ ಉಗ್ರರು

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಹಾವೇರಿಯ ಎಂಜಿನಿಯರ್ ಮತ್ತು ಬೆಂಗಳೂರಿನ ನಿವಾಸಿ ಭರತ್ ಭೂಷಣ್ (41) ಸೇರಿದ್ದಾರೆ. ಅವರ ಪತ್ನಿ ಸುಜಾತಾ (37) ಮತ್ತು ಅವರ ಮೂರು ವರ್ಷದ ಮಗ ದಾಳಿಯಿಂದ ಬದುಕುಳಿದಿದ್ದಾರೆ.

ಭರತ್ ಭೂಷಣ್ ಮತ್ತು ಅವರ ಕುಟುಂಬವು ಏಪ್ರಿಲ್ 18 ರಂದು ಟೂರ್ ಆಪರೇಟರ್ ಮೂಲಕ ಕಾಶ್ಮೀರಕ್ಕೆ ತೆರಳಿತ್ತು. ಅವರು ಈ ಹಿಂದೆ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸದ್ಯ ಡಯಾಗ್ನೋಸ್ಟಿಕ್ ನಡೆಸುತ್ತಿದ್ದರು. ಭೂಷಣ್ ಯಶವಂತಪುರದ ಸುಂದರನಗರ ನಿವಾಸಿ ಮತ್ತು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದವರು.

ಅವರ ತಂದೆ ನಿವೃತ್ತ ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕರಾಗಿದ್ದರು. ಅವರ ಪೋಷಕರು ರಾಣೆಬೆನ್ನೂರು ಪಟ್ಟಣದ ದೇವಿ ನಗರದಲ್ಲಿ ವಾಸಿಸುತ್ತಿದ್ದು, ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಮತ್ತಿಕೆರೆಗೆ ಸ್ಥಳಾಂತರಗೊಂಡರು. ಭರತ್ ಬೆಂಗಳೂರಿನವರಾಗಿದ್ದು ಹಾವೇರಿ ಮೂಲದವರು ಎಂದು ಹಾವೇರಿ ಪೊಲೀಸರು ದೃಢಪಡಿಸಿದ್ದಾರೆ.

ಭೂಷಣ್ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ್ ಮತ್ತು ಶಾಸಕ ಪ್ರಕಾಶ್ ಕೋಳಿವಾಡ್ ಅವರ ಕುಟುಂಬ ಸ್ನೇಹಿತ ಎಂದು ಹೇಳಲಾಗಿದೆ. ಅವರ ಮೃತದೇಹವನ್ನು ಆದಷ್ಟು ಬೇಗ ಬೆಂಗಳೂರಿಗೆ ತರುವಂತೆ ಕೋಳಿವಾಡ್ ಕುಟುಂಬ ಸರ್ಕಾರಕ್ಕೆ ಮನವಿ ಮಾಡಿದೆ. ಇದೀಗ ಬೆಂಗಳೂರಿನ ಮತ್ತಿಕೆರೆ ನಿವಾಸಿ ಶ್ರೀಮತಿ ಸುಜಾತಾ ಅವರೊಂದಿಗೆ ಮಾತನಾಡಿದ್ದೇನೆ. ಅವರ ಪತಿ ಭರತ್ ಭೂಷಣ್ ಇಂದು ಮುಂಜಾನೆ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಅವರು ಮತ್ತು ಅವರ 3 ವರ್ಷದ ಮಗ ಬದುಕುಳಿದಿದ್ದಾರೆ ಎಂದು ಸುಜಾತಾ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

error: Content is protected !!