ಸುರತ್ಕಲ್: ಸುರತ್ಕಲ್ ಸ್ಪೋಟ್ಸ್೯ ಮತ್ತು ಕಲ್ಚರಲ್ ಕ್ಲಬ್ (ರಿ) ಇದರ ಆಶ್ರಯದಲ್ಲಿ ಸುರತ್ಕಲ್ ನಲ್ಲಿ ನಡೆದ ಲೆಜಂಡ್ಸ್ ಕ್ರಿಕೆಟ್ ಲೀಗ್ ಸೀಸನ್ 4 ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟದ ಯಶಸ್ಸಿನ ಹಿನ್ನಲೆಯಲ್ಲಿ ಸೂರಿಂಜೆಯಲ್ಲಿ ಮನೋಹರ್ ಶೆಟ್ಟಿಯವರ ಮನೆಯಲ್ಲಿ ಸ್ನೇಹ ಸಮ್ಮಿಲನ ಕೂಟ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸ್ಥೆಯ ಮಹಾಪೋಷಕ ವಿರಾಜಪೇಟೆ ಡಿವೈಎಸ್ ಪಿ ಮಹೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕ್ರೀಡೆಯಿಂದ ಮನಸ್ಸು ಹಗುರ ಗೊಳ್ಳುತ್ತದೆ, ಕ್ರೀಡೆ ವ್ಯಾಯಾಮಕ್ಕೂ ಸಹಕಾರಿಯಾಗುತ್ತದೆ ಎಂದರು.
ಸುರತ್ಕಲ್ ಸ್ಪೋಟ್ಸ್೯ ಮತ್ತು ಕಲ್ಚರಲ್ ಕ್ಲಬ್ ನಲ್ಲಿ ಕುಟುಂಬದ ವಾತಾವರಣ ಸೃಷ್ಟಿಯಾಗಿದೆ. ಮಕ್ಕಳು ಕೂಡಾ ಇಂತಹ ಸಂಘಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಮಹಿಳಾ ವಿಭಾಗವನ್ನೂ ರಚಿಸಬೇಕು. ಇಂತಹ ಸಂಘಟನೆಗಳು ಬೆಳೆಯಬೇಕು, ಅದಕ್ಕೆ ಎಲ್ಲರ ಸಹಕಾರವೂ ಬೇಕು ಎಂದು ಡಿವೈಎಸ್ ಪಿ ಮಹೇಶ್ ಕುಮಾರ್ ತಿಳಿಸಿದರು.
ಸ್ಪೋಟ್ಸ್೯ ಕ್ಲಬ್ ನ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ನಲ್ಲಿ ಸ್ಪೋಟ್ಸ್೯ ಮತ್ತು ಕಲ್ಚರಲ್ ಕ್ಲಬ್ ಬೆಳೆಯುವಲ್ಲಿ ಯುವಕರ ಶ್ರಮ ಬಹಳಷ್ಟಿದೆ. ಮುಂದಿನ ದಿನಗಳಲ್ಲೂ ಇದು ಸಂಘಟನಾತ್ಮಕವಾಗಿ, ಸೌಹಾರ್ದತಯುತವಾಗಿ ಸಮಾಜ ಪರ ಚಿಂತನೆಯಲ್ಲಿ ಬೆಳೆಯಲಿ ಎಂದರು.
ಸಂಚಾಲಕರಾದ ಮನೋಹರ ಶೆಟ್ಟಿ ಸೂರಿಂಜೆ, ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಕಾರ್ಯದರ್ಶಿ ಕಿರಣ್ ಅಚಾರ್ಯ ಸುರತ್ಕಲ್ , ನಾಗರಾಜ್ ಕಡಂಬೋಡಿ, ಕೇಸರಿ ಮನೋಹರ ಶೆಟ್ಟಿ , ಸುಧಾಕರ ಪೂಂಜ ,ಪುಷ್ಪರಾಜ್ ಶೆಟ್ಟಿ ಮಧ್ಯ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ ಮುಂತಾದವರು ಉಪಸ್ಥಿತರಿದ್ದರು. ಸುರತ್ಕಲ್ ಸ್ಪೋಟ್ಸ್೯ ಮತ್ತು ಕಲ್ಚರಲ್ ಕ್ಲಬ್ ನ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಕಿರಣ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.