ಮೂಲ್ಕಿಯ ರಿಕ್ಷಾ ಚಾಲಕನ ಹತ್ಯೆ: ಆರೋಪಿ ಅಭಿಷೇಕ್‌ ಶೆಟ್ಟಿ ಪೊಲೀಸ್‌ ವಶಕ್ಕೆ!

ಮಂಗಳೂರು: ನಾಪತ್ತೆಯಾಗಿದ್ದ ಮೂಲ್ಕಿ ಕೊಲ್ನಾಡ್ ಮೂಲದ ರಿಕ್ಷಾ ಚಾಲಕ‌ ಮುಹಮ್ಮದ್‌ ಶರೀಫ್(‌52) ಮೃತದೇಹ ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ಕಾಸರಗೋಡು ಸಮೀಪದ ಮಂಜೇಶ್ವರದ ಕುಂಜತ್ತೂರು ಎಂಬಲ್ಲಿನ ಬಾವಿಯಲ್ಲಿ ಸಿಕ್ಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಠಾಣಾ ಪೊಲೀಸರು ಆರೋಪಿ ಮಂಗಳೂರು ಮೂಲದ ಅಭಿಷೇಕ್ ಶೆಟ್ಟಿ ಎಂಬಾತನನ್ನು ಬಂಧಿಸಿದ್ದಾರೆ.


ಮೂಲ್ಕಿ ಕೊಲ್ನಾಡಿನಲ್ಲಿ ವಾಸ್ತವ್ಯವಿದ್ದು ಮಂಗಳೂರಿನ ಕೊಟ್ಟಾರದಲ್ಲಿ ರಿಕ್ಷಾ ಓಡಿಸುತ್ತಿದ್ದ ಶರೀಫ್‌ ಸಂಜೆ ಮನೆಗೆ ವಾಪಸ್‌ ಆಗದೆ ನಾಪತ್ತೆಯಾಗಿದ್ದು ಮನೆಮಂದಿ ಪೊಲೀಸರಿಗೆ ದೂರು ನೀಡಿದ್ದರು. ಮರುದಿನ ರಿಕ್ಷಾ ಮತ್ತು ಬಾವಿಯಲ್ಲಿ ಶರೀಫ್‌ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎನ್ನುವುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

error: Content is protected !!