ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಶೂಟಿಂಗ್‌ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ಬೆಂಗಳೂರು, ಮೈಸೂರು ಹಾಗೂ ರಾಜಸ್ಥಾನಕ್ಕೆ ಪ್ರಯಾಣ ಮಾಡುತ್ತಲೇ ಇದ್ದಾರೆ. ಆದರೆ ನಿನ್ನೆ ಕೋರ್ಟ್ ವಿಚಾರಣೆಗೆ ಮಾತ್ರ ಬೆನ್ನು ನೋವಿನ ಕಾರಣ ನೀಡಿ ಬಂದಿಲ್ಲ.
ದರ್ಶನ್ ಪರ ವಕೀಲ ಬೆನ್ನುನೋವಿನ ಕಾರಣ ನೀಡಿದ್ದಾರೆ. ಜೈಪುರದಲ್ಲಿ ನಡೆದ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ದರ್ಶನ್ 28 ಗಂಟೆಗಳ ಕಾಲ ಶೂಟಿಂಗ್ ಮಾಡಿದ್ದಾರಂತೆ. ಕಳೆದ ಮಂಗಳವಾರದಿಂದ ಗುರುವಾರದವರೆಗೂ ನಿರಂತರವಾಗಿ ಬಿಡುವಿಲ್ಲದೆ ಶೂಟಿಂಗ್ ಮಾಡಲಾಗಿದೆಯಂತೆ. ಹೀಗಾಗಿ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಆದರೆ ದರ್ಶನ್ರಾ ಜಸ್ಥಾನದಿಂದ ಬಂದಾಗ ಅವರ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ಆ ವಿಡಿಯೋಗಳಲ್ಲಿ ದರ್ಶನ್ ಸುಸ್ತಾದಂತೆ ಕಂಡು ಬಂದಿಲ್ಲ. ತುಂಬಾ ಆರಾಮಾಗಿ ನಡೆದುಕೊಂಡು ಬಂದು ಕಾರು ಹತ್ತಿ ಹೋದ ದೃಶ್ಯಗಳು ಕಂಡು ಬಂದಿತ್ತು. ಹೀಗಾಗಿ ದರ್ಶನ್ ನ್ಯಾಯಾಲಯಕ್ಕೆ ಬೇಕೆಂದೇ ಹಾಜರಾಗಿಲ್ಲ ಎಂಬ ಅನುಮಾನ ಕಾಡಲಾರಂಭಿಸಿದೆ.