ಧರ್ಮಸ್ಥಳ: ಬೆಳಾಲು ಕಾಡಿನಲ್ಲಿ ಮಗುವನ್ನು ಎಸೆದಿದ್ದ ಅಪ್ಪ- ಅಮ್ಮ ಮದುವೆಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ದಾರಿಹೋಕರಿಗೆ ಸಿಕ್ಕ ಹೆಣ್ಣು ಮಗು ಸಿಕ್ಕಿತ್ತು. ಪೊಲೀಸರು ಸಾಕಷ್ಟು ಹುಡುಕಾಡಿದ ಬಳಿಕ ಮಗುವಿನ ಹೆತ್ತವರು ಸಿಕ್ಕಿದ್ದರು. ಈ ಜೋಡಿ ಇದೀಗ ಅಧಿಕೃತವಾಗಿ ತಮ್ಮ ಕುಟುಂಬದ ಸಮ್ಮುಖದಲ್ಲಿ ಕುತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಎ. 6 ರಂದು ವಿವಾಹವಾಗಿದ್ದಾರೆ.
ದೇವಸ್ಥಾನದ ಅರ್ಚಕರು ಪೌರೋಹಿತ್ಯ ವಹಿಸಿದ್ದರು.
ಬೆಳಾಲು ಮಾಯದ ತಿಮ್ಮಪ್ಪ ಗೌಡರ ಪುತ್ರ ರಂಜಿತ್ ಮತ್ತು ಧರ್ಮಸ್ಥಳ ಕೊಳಂಗಾಜೆಯ ಧರ್ಣಪ್ಪ ಗೌಡರ ಪುತ್ರಿ ಸುಶ್ಮಿತಾ ಅವರೇ ಕಾಡಿನಲ್ಲಿ ಸಿಕ್ಕ ಹೆಣ್ಣು ಮಗುವಿನ ಹೆತ್ತವರಾಗಿದ್ದಾರೆ. ಇಬ್ಬರೂ ಪ್ರೀತಿ ಪರಸ್ಪರ ಪ್ರೀತಿಸುತ್ತಿದ್ದು, ಇದರ ಫಲವಾಗಿ ಹುಡುಗಿ ಗರ್ಭಿಣಿಯಾಗಿದ್ದಳು. ಗಂಡ ಹೆಂಡತಿಯಂತೆ ನಾಟಕವಾಡಿ ತಾಯಿ ಕಾರ್ಡ್ ಮಾಡಿಸಿದ್ದು, ಸುಶ್ಮಿತಾ ಖಾಸಗಿ ಆಸ್ಪತ್ರೆಯಲ್ಲಿ ಸುಸೂತ್ರವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.
ಆದರೆ ಇವರಿಬ್ಬರ ಮಧ್ಯೆ ಬಿರುಕು ಮೂಡಿತ್ತು. ಪೆಚ್ಚಾದ ಸುಶ್ಮಿತಾ ಮಗುವನ್ನು ರಂಜಿತ್‌ನ ಮನೆಯಲ್ಲಿಟ್ಟು ಹುಚ್ಚಾಟವಾಡಿದ್ದಳು. ರಂಜಿತ್ ತನ್ನ ಮಗುವನ್ನು ಕಾಡಿನಲ್ಲಿ ಬಿಟ್ಟು ಕ್ರೌರ್ಯ ಮೆರೆದಿದ್ದ. ಪೊಲೀಸರ ತನಿಖೆಯಲ್ಲಿ ಇವರಿಬ್ಬರೂ ಸಿಕ್ಕಿಬಿದ್ದಿದ್ದರು. ಇವರಿಬ್ಬರ ವರ್ತನೆಗೆ ಇಡೀ ಜಿಲ್ಲೆಯ ಜನತೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕಾನೂನಾತ್ಮಕವಾಗಿ ಮದುವೆಯಾಗಿದ್ದಾರೆ. ಮಗು ಮಕ್ಕಳ ರಕ್ಷಣಾಧಿಕಾರಿಗಳ ಆರೈಕೆಯಲ್ಲಿದ್ದು, ಆ ಮಗುವನ್ನು ವಾಪಸ್ ಹೆತ್ತವರ ಮಡಿಲು ಸೇರಿಸುವಂತೆ ರಂಜಿತ್ ಹೆತ್ತವರು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.