ಮ್ಯಾನ್ಮಾರ್ ದೇಶವು ಭೀಕರ ಭೂಕಂಪನಕ್ಕೆ ತತ್ತರಿಸಿದ್ದು ಈಗಾಗಲೇ ಸಾವಿರಾರು ಜನರು ಜೀವ ಬಿಟ್ಟಿದ್ದಾರೆ. ಶವಗಳನ್ನ ಹೊರಗೆ ತೆಗೆಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಂತಹ ಸಮಯದಲ್ಲೇ ಸಾವಿನ ಸಂಖ್ಯೆಯು 3,564 ದಾಟಿದ್ದು, 210 ಜನರು ನಾಪತ್ತೆಯಾಗಿದ್ದಾರೆ. ಮ್ಯಾನ್ಮಾರ್ ಸಂಕಷ್ಟದಲ್ಲಿ ಇರುವಾಗ ಮತ್ತೆ ಮತ್ತೆ ಪ್ರಾಕೃತಿಕ ವಿಕೋಪಗಳು ಕಾಡುತ್ತಿದ್ದು, ಹೀಗೆ ಮತ್ತೆ ಮತ್ತೆ ಅಲ್ಲಿ ಭೂಮಿ ಕಂಪಿಸುತ್ತಿದೆ.
ಹಳ್ಳಿಗಳ ಜನರು ನೀರು ಮತ್ತು ಆಹಾರ ಸಿಗದೆ ನರಳಿದ್ದಾರೆ. ಮ್ಯಾನ್ಮಾರ್ ದೇಶದ ಗ್ರಾಮೀಣ ಭಾಗದಲ್ಲಿ ಸಾವಿರಾರು ಮನೆಗಳಿಗೆ ಹಾನಿಯಾಗಿದ್ದು, ಜನಕ್ಕೆ ಇದೀಗ ಆಹಾರ ಮತ್ತು ನೀರು ಹೊಂದಿಸುವುದೇ ಕಷ್ಟವಾಗಿದೆ. ಇದೇ ಕಾರಣಕ್ಕೆ ಮ್ಯಾನ್ಮಾರ್ ದೇಶದ ಹಲವು ಹಳ್ಳಿಗಳ ಜನರು ಇದೀಗ ಗ್ರಾಮಗಳನ್ನು ಬಿಟ್ಟು ನಗರ ಪ್ರದೇಶಕ್ಕೆ ಹೆಜ್ಜೆ ಹಾಕುತ್ತಿದ್ದು, ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುವ ಸಾಧ್ಯತೆ ಇದೆ. ಈಗಾಗಲೇ ಹಲವು ದೇಶಗಳು ಸಾಕಷ್ಟು ದೊಡ್ಡ ಪ್ರಮಾಣದ ನೆರವು ರವಾನೆ ಮಾಡಿವೆ.