ಬದ್ರಿಯಾ ಜುಮಾ ಮಸೀದಿ: ಸಡಗರ ಸಂಭ್ರಮದ ಈದುಲ್ ಪವಿತ್ರ್ ಆಚರಣೆ!


ಮಂಗಳೂರು :
ಬಜಾಲ್ ನಂತೂರಿನ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಮಾನ್ಯ ಅಬ್ದುಲ್ ರವೂಫ್ ರ ವರ ಸಹಬಾಗಿತ್ವ ಹಾಗೂ ಸ್ಥಳೀಯ ಖತೀಬರಾದ ಬಹು! ಅಬ್ದುಲ್ ನಾಸಿರ್ ಸಅದಿಯವರ ನೇತ್ರತ್ವದಲ್ಲಿ ಆಚರಿಸಲಾಯಿತು ಪ್ರಸ್ತುತ ಕಾರ್ಯಕ್ರಮದ ಪ್ರಾರಂಭದಲ್ಲಿ ಖತೀಬರು ಬಾಷಣಗೈದರು ತನ್ನ ಭಾಷಣದಲ್ಲಿ ತಮಗಾಗಿ ಅನುಗ್ರಹವಾಗಿ ನೀಡಿದಂತಹ ತಮ್ಮ ಮಕ್ಕಳು ಡ್ರಗ್ಸ್ ನಂತಹ ಮಾದಕ ದ್ರವ್ಯಗಳ ದಾಸರಾಗುತ್ತಿದ್ದಾರೆ ಅದಕ್ಕೆ ಕಡಿವಾಣ ಹಾಕಿ ದೀನೀ ಬೋದಕರನ್ನಾಗಿ ಮಾಡುವುದು ಶಿಕ್ಷಕರಾದ ನಮ್ಮ ಜವಾಬ್ದಾರಿ ಯಾಗಿದೆ ಎಂದು ಕರೆ ನೀಡಿದರು. ಕೊನೆಗೆ ಈದ್ ನಮಾಝ್ ಬಳಿಕ ಖುತುಬಾ ಪಾರಾಯಣ ನಡೆಸಿ ನಂತರ ಕೂಟು ಪ್ರಾರ್ಥನೆ ಹಾಗೂ ಪರಸ್ಪರ ಹಸ್ತಲಾಂಘಣ ನಡೆಸಿ ಕಾರ್ಯಕ್ರಮವನ್ನು ಕೋನೆಗೊಳಿಸಲಾಯಿತು.


ಬಿ ಜೆ ಎಂ ಮಾಜಿ ಅಧ್ಯಕ್ಷ ಬಿ ಎನ್ ಅಬ್ಬಾಸ್, ಸಂಚಾಲಕರು ಬಿ ಪಕೃದ್ದಿನ್, ಮೊಯಿದಿನ್ ಕುಂಜಿ, ಅಶ್ರಫ್ ಕೆ ಇ, ಎಚ್ ಎಸ್ ಹನೀಫ್, ಎಂ ಎಚ್ ಮೊಹಮ್ಮದ್, ಅಬ್ದುಲ್ ಸಲಾಂ, ಅಬ್ದುಲ್ ಹಮೀದ್, ನಝೀರ್ ಬಜಾಲ್ ನೂರಾರು ಜಮಾತರು ನಮಾಜ್ ನಲ್ಲಿ ಪಾಲ್ಗೊಂಡರು.

error: Content is protected !!