ಮಂಗಳೂರು: ʻವೇದವ್ಯಾಸ ಕಾಮತ್ ರೌಡಿಶೀಟರ್ ಜೊತೆಯಲ್ಲೇ ಓಡಾಡಿಕೊಂಡು ಇರುವವರು!ʼ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ದಕ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ, ಹರೀಶ್ ಇಂಜಾಡಿ ಎನ್ನುವ ವ್ಯಕ್ತಿಯನ್ನು ಸುಬ್ರಮಣ್ಯ ದೇವಸ್ಥಾನದ ಆಡಳಿತ ಕಮಿಟಿಗೆ ಸೇರ್ಪಡೆ ಕುರಿತಾಗಿ ಮಾತನಾಡಿದ ಅವರು, ʻಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ದೇವಸ್ಥಾನಗಳಿಗೆ ಆಡಳಿತಾಧಿಕಾರಿ ನೇಮಿಸುವ ಪರಿಪಾಠ ಆರಂಭ ಆಯ್ತು. ಅಲ್ಲಿಂದ ದೇವಸ್ಥಾನಗಳಲ್ಲಿ ರಾಜಕೀಯ ಶುರುವಾಯಿತು. ಆಡಳಿತದಲ್ಲಿ ಇರುವ ಪಕ್ಷಗಳ ನಾಯಕರು, ಕಾರ್ಯಕರ್ತರನ್ನು ದೇವಸ್ಥಾನದ ಕಮಿಟಿಗೆ ಸೇರಿಸುವುದು ಇಲ್ಲಿಂದ ಆರಂಭ ಆಯ್ತು. ಕಾಂಗ್ರೆಸ್ ಸರಕಾರ ಇರುವಾಗ ಬಿಜೆಪಿ ನಾಯಕರು, ಹಿರಿಯರನ್ನು ಆಡಳಿತ ಕಮಿಟಿಗೆ ಸೇರಿಸಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಬಿಜೆಪಿ ಇಂತಹ ಒಂದು ಉದಾಹರಣೆ ತೋರಿಸಲಿ. ಶಾಸಕ ವೇದವ್ಯಾಸ ಕಾಮತ್ ರೌಡಿಶೀಟರ್ ಗಳನ್ನು ಜೊತೆಯಲ್ಲೇ ಇಟ್ಟುಕೊಂಡು ಓಡಾಡುವವರು. ಆರ್ ಟಿ ಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಕೊಲೆ ಕೇಸಲ್ಲಿ ಪಾಲ್ಗೊಂಡಿರುವ ರೌಡಿಯಿಂದಲೇ ದಕ್ಷಿಣ ಕ್ಷೇತ್ರ ನಡೆಯುತ್ತಿದೆ. ಹೀಗಿರುವಾಗ ವೇದವ್ಯಾಸ ಕಾಮತ್‌ಗೆ ಎಷ್ಟು ನೈತಿಕತೆ ಇದೆ?ʼ ಎಂದು ಪ್ರಶ್ನಿಸಿದರು.
”ಹರೀಶ್ ಇಂಜಾಡಿ ಎನ್ನುವ ವ್ಯಕ್ತಿಯನ್ನು ಸುಬ್ರಮಣ್ಯ ದೇವಸ್ಥಾನದ ಆಡಳಿತ ಕಮಿಟಿಗೆ ಸೇರ್ಪಡೆ ಮಾಡಿರುವುದಕ್ಕೆ ವಿರೋಧ ಯಾಕೆ? ಅವರು 23 ವರ್ಷಗಳ ಹಿಂದೆ ದೇವಸ್ಥಾನದ ಅಂಗಡಿಯನ್ನು ಬಾಡಿಗೆಗೆ ಹೊಂದಿದ್ದು ಅದರ ಬಾಡಿಗೆ ಪಾವತಿಸದ ಕಾರಣಕ್ಕೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು ನಿಜ, ಆದರೆ ಎರಡೇ ವರ್ಷಗಳಲ್ಲಿ ಸುಮಾರು 9 ಲಕ್ಷದಷ್ಟು ಹಣವನ್ನು ಮರುಪಾವತಿ ಮಾಡಿ ಆರೋಪ ಮುಕ್ತರಾಗಿದ್ದಾರೆ. ಸುಮಾರು 25 ವರ್ಷಗಳ ಹಿಂದೆ ರೌಡಿಶೀಟ್ ಹಾಕಲಾಗಿತ್ತು ಅದು 12 ವರ್ಷಗಳ ಹಿಂದೆಯೇ ತೆಗೆದು ಹಾಕಲಾಗಿದೆ. ವೇದವ್ಯಾಸ ಕಾಮತ್ ಅವರಿಗೆ ಅದನ್ನು ಪ್ರಶ್ನಿಸುವ ನೈತಿಕತೆ ಇದೆಯೇ? ಜಿಲ್ಲೆಯಲ್ಲಿ ಶಾಸಕರ ಆಪ್ತರು ಎಷ್ಟು ಮಂದಿ ಕ್ಲಬ್ ನಡೆಸುತ್ತಿಲ್ಲ? ಜುಗಾರಿ ಮಾಡುತ್ತಿಲ್ಲ? ಅವರಿಗೆ ಗೊತ್ತಿಲ್ಲದೆ ಇದ್ದರೆ ನೇರ ಚರ್ಚೆಗೆ ಬನ್ನಿ, ನಾನು ಅವರಿಗೆ ಮಾಹಿತಿ ಕೊಡುತ್ತೇನೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪದ್ಮರಾಜ್ ಆರ್., ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲಿಯಾನ್, ಯುವ ಕಾಂಗ್ರೆಸ್ ಅಧ್ಯಕ್ಷ ನವಾಜ್, ಶುಭಾಶ್ಚಂದ್ರ, ಜಾಕಿಂ, ವಿಕಾಸ್ ಕುಮಾರ್ ಶೆಟ್ಟಿ, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ವಿಡಿಯೋ ಸುದ್ದಿಗಾಗಿ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ⤵️