ವಿಡಿಯೋ ಮಾಡಿದ್ದು ಯಾರು?: ನಗ್ನ ವಿಡಿಯೋ ಬಗ್ಗೆ ಕೊನೆಗೂ ಮೌನ ಮುರಿದ ಶ್ರುತಿ ನಾರಾಯಣ್

ಚೆನ್ನೈ: ಕಾಲಿವುಡ್‌ನ ಬಹುಬೇಡಿಕೆಯ ನಟಿ ಶ್ರುತಿ ನಾರಾಯಣ್ ಅವರದ್ದು ಎನ್ನಲಾಗಿದ್ದ 14 ನಿಮಿಷಗಳ ನಗ್ನ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಿನಿಮಾದಲ್ಲಿ ಹೀರೋಯಿತ್‌ ಪಾತ್ರ ಕೊಡುವ ಆಮಿಷದಿಂದ ಪ್ರಭಾವಿಗಳು ಕಾಸ್ಟಿಂಗ್‌ ಕೌಚ್‌ ಮಾಡಿದ್ದು, ಅದರ ವಿಡಿಯೋ ಸೋರಿಕೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು.


ನಟಿಗೆ ವಿಡಿಯೋ ಕಾಲ್‌ ಮಾಡಿ ಆಕೆಯನ್ನು ಬೆತ್ತಲಾಗಿಸಿ, ನಗ್ನ ಪೋಸ್‌ ಮಾಡುವಂತೆ ಒತ್ತಡ ಹೇರಿ ಕಿರುಕುಳ ನೀಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದು, ತಮಿಳು ಚಿತ್ರರಂಗದ ಕಾಸ್ಟಿಂಗ್ ಕೌಚ್ ಬಗ್ಗೆಯೂ ಈ ವಿಡಿಯೋ ಅಲ್ಲಿನ ಕರಾಳ ಮುಖವನ್ನು ಬಹಿರಂಗಪಡಿಸುತ್ತದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು.

ಇದೇ ಸಂದರ್ಭದಲ್ಲಿ ನಟಿ ತನ್ನ ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳನ್ನು ಪ್ರೈವೇಟ್‌ನಲ್ಲಿರಿಸಿದ್ದರು. ಇಷ್ಟೆಲ್ಲಾ ರಾದ್ಧಾಂತದ ನಡುವೆ ನಟಿ ಶ್ರುತಿ ನಾರಾಯಣ್‌ ಮೌನ ಮುರಿದಿದ್ದು, ಈ ನಗ್ನ ವಿಡಿಯೋವನ್ನು ಎಐ ಜನರೇಟ್‌ ಮೂಲಕ ತಯಾರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೀಗ ಇನ್ಸ್ಟಾಗ್ರಾಂ ಖಾತೆಯನ್ನು ಸಾರ್ವಜನಿಕಗೊಳಿಸಿದ್ದು, ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಶೇರ್ ಮಾಡಿರುವ ಮೊದಲ ಇನ್ಟಾ ಸ್ಟೋರಿಯಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಎಐ ಕ್ಲೋನಿಂಗ್ ಮೂಲಕ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿ ಅದಕ್ಕೆ ಸಾಕ್ಷಿ ಎಂಬಂತೆ ಒಂದು ವಿಡಿಯೋವನ್ನು ಅವರು ಅಟ್ಯಾಚ್ ಮಾಡಿದ್ದಾರೆ.

ʻಎರಡನೇ ಸ್ಟೋರಿಯಲ್ಲಿ ಯಾರೂ ಕೂಡ ಆ ವಿಡಿಯೋವನ್ನು ಕಾಡ್ಗಿಚ್ಚಿನಂತೆ ಹರಡಬಾರದು. ನಿಮಗೆ ಇಂತಹ ವಿಡಿಯೋಗಳು ಖುಷಿ ನೀಡಬಹುದು. ಆದರೆ ನನಗೆ ಮತ್ತು ನನ್ನ ಹತ್ತಿರದವರಿಗೆ ಮನಸ್ಸಿಗೆ ನೋವನ್ನು ತಂದೊಡ್ಡುತ್ತದೆ. ಅಲ್ಲದೇ ಒಂದು ವೇಳೆ ನೀವು ನೋಡುವುದಾದರೆ ನಿಮ್ಮ ತಾಯಿ, ಸಹೋದರಿ ಅಥವಾ ಗೆಳತಿಯ ವಿಡಿಯೋಗಳನ್ನು ನೋಡಿ. ಏಕೆಂದರೆ ಅವರು ಕೂಡ ಮಹಿಳೆಯರು. ಅವರಿಗೂ ನನ್ನಂತೆಯೇ ದೇಹವಿದೆ. ಆದ್ದರಿಂದ ನಮ್ಮ ತೇಜೋವಧೆ ಮಾಡಲು ಎಐ ವಿಡಿಯೋ ನೋಡುವುದಕ್ಕಿಂದ ಹೋಗಿ ನಿಮ್ಮವರ ವಿಡಿಯೋ ನೋಡಿʼ ಎಂದು ಎಂದು ಶ್ರುತಿ ನಾರಾಯಣನ್ ನೋವು ತೋಡಿಕೊಂಡಿದ್ದಾರೆ.

error: Content is protected !!