ಜೈಲಿನಂತಾದ ಹಾಸ್ಟೆಲ್:‌ ಆತ್ಮಹತ್ಯೆಗೆ ಯತ್ನಿಸಿ ನಾಲ್ಕು ತಿಂಗಳು ಕೋಮಾದಲ್ಲಿದ್ದ ನರ್ಸಿಂಗ್‌ ವಿದ್ಯಾರ್ಥಿನಿ ಸಾವು

ಕಾಸರಗೋಡು: ನರ್ಸಿಂಗ್ ಕಾಲೇಜಿನ ಜೈಲಿನಂತಹಾ ಕಠಿಣ ನಿಯಮಗಳಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿ ಸುಮಾರು ನಾಲ್ಕು ತಿಂಗಳು ಕೋಮಾದಲ್ಲಿದ್ದ ವಿಧ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ಕಾಸರಗೋಡುವಿನ ಪಾಣತ್ತೂರಿನಲ್ಲಿ ಸಂಭವಿಸಿದೆ. ಕಾಂಞಿಂಗಾಡ್ ಖಾಸಗಿ ಆಸ್ಪತ್ರೆಯ ಮೂರನೇ ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಪಾಣತ್ತೂರಿನ ಚೈತನ್ಯ ಕುಮಾರಿ (20) ಮೃತ ದುರ್ದೈವಿ.


ಕರ್ನಾಟಕ-ಕಾಸರಗೋಡು ಗಡಿಯಲ್ಲಿರುವ ಪಣತ್ತೂರು ಗ್ರಾಮದ ಸದಾನಂದನ್ ಮೂಲತಃ ಕೊಟ್ಟಾಯಂ ಮೂಲದವರಾಗಿದ್ದು, ಜೀವನೋಪಾಯಕ್ಕಾಗಿ ಅವರು ಕರ್ನಾಟಕದ ಕರಿಕೆ ಗ್ರಾಮ ಪಂಚಾಯತ್‌ನಲ್ಲಿ ಕೃಷಿ ಭೂಮಿಯನ್ನು ಗುತ್ತಿಗೆಗೆ ಪಡೆದರು ಮತ್ತು ಹಲವಾರು ಜನರಿಂದ ಹಣವನ್ನು ಸಾಲ ಪಡೆದು ತಮ್ಮ ಮಗಳನ್ನು ನರ್ಸಿಂಗ್ ಶಾಲೆಗೆ ಕಳುಹಿಸಿದ್ದರು. ಇವರ ಅಮೆರಿಕದಲ್ಲಿರುವ ಸಂಬಂಧಿಯೊಬ್ಬರು ಮಗಳ ಕೋರ್ಸು ಪೂರ್ತಿಯಾದ ಮೇಲೆ ಅಮೆರಿಕದಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದ್ದರಿಂದ ಚೈತನ್ಯ ನರ್ಸಿಂಗ್‌ ಸೇರಿ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡುತ್ತಿದ್ದಳು. ಮೂರನೇ ವರ್ಷಕ್ಕೆ ಈಕೆಯ ವಿದ್ಯಾಭ್ಯಾಸ ಸಾಗಿದ್ದು, ಕೆಲವೇ ತಿಂಗಳಲ್ಲಿ ನರ್ಸ್‌ ಆಗಿ ಅಮೆರಿಕಾದಲ್ಲಿ ಸೆಟಲ್‌ ಆಗಿರುತ್ತಿದ್ದಳು. ದುರದೃಷ್ಟವಶಾತ್‌ ಕಾಞಂಗಾಡ್‌ನ ಮಂಜೂರ್ ಆಸ್ಪತ್ರೆ ಮತ್ತು ನರ್ಸಿಂಗ್ ಶಾಲೆಯ ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈಕೆಯ ವಾರ್ಡನ್‌ ಈಕೆಗೆ ಮನಸ್ಸಿಗೆ ತಾಗುವಂತೆ ಬೈದಿದ್ದಳು ಎನ್ನಲಾಗಿದ್ದು, ಹತಾಶಳಾದ ಈಕೆ ರೂಮಿನ ಬಾಗಿಲು ಹಾಕಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಡಿಸೆಂಬರ್‌ನಲ್ಲಿ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದ ದೃಶ್ಯ

ಇದರಿಂದ ರೊಚ್ಚಿಗೆದ್ದ ಈಕೆಯ ಸಹಪಾಠಿಗಳು ಪ್ರತಿಭಟನೆ ನಡೆಸಿದ್ದು ಇದು ಹಿಂಸಾತ್ಮಕ ರೂಪಕ್ಕೆ ಬದಲಾಗಿತ್ತು. ಕಾಲೇಜ್ ಆಡಳಿತ ಮಂಡಳಿಯು ಕೆಲಸದ ಸ್ಥಳದಲ್ಲಿ ಕಿರುಕುಳ ನೀಡುತ್ತಿದೆ ಮತ್ತು ಶಾಲೆ ಮತ್ತು ಹಾಸ್ಟೆಲ್‌ನಲ್ಲಿ “ಜೈಲು ತರಹದ ನಿಯಮಗಳನ್ನು ಜಾರಿಗೊಳಿಸಿ ಸ್ವಾತಂತ್ರ್ಯವನ್ನು ಕಸಿಯಲಾಗುತ್ತಿದೆ ಎಂದು ಆರೋಪಿಸಿದರು.

ಜೈಲಿನಂತಾದ ಹಾಸ್ಟೆಲ್: ವಿದ್ಯಾರ್ಥಿಗಳ ಆರೋಪದ ಪ್ರಕಾರ ವಿದ್ಯಾರ್ಥಿಗಳು ಹೊರಹೋಗದೆ ಕ್ಯಾಂಪಸ್ ಹಾಸ್ಟೆಲ್‌ನಲ್ಲಿಯೇ ಇರಲು ಒತ್ತಾಯಿಸಲಾಗುತ್ತದೆ. ಊಟದ ಸಮಯವನ್ನು ತಪ್ಪಿಸಿಕೊಂಡರೆ ಅವರಿಗೆ ಆಹಾರವನ್ನು ಕೊಡಲು ನಿರಾಕರಿಸಲಾಗುತ್ತದೆ ವಾರಕ್ಕೆ ಎರಡು ಗಂಟೆಗಳ ಕಾಲ ಮಾತ್ರ (ಭಾನುವಾರದಂದು) ಮೊಬೈಲ್ ಫೋನ್‌ಗಳನ್ನು ಬಳಸಲು ಅವಕಾಶ ನೀಡಲಾಗುತ್ತಿದೆ. ಮತ್ತು ವಾರಾಂತ್ಯದಲ್ಲಿ ಸಂಬಂಧಿಕರೊಂದಿಗೆ ಕೇವಲ ಎರಡು ಗಂಟೆಗಳ ಕಾಲ ಮಾತ್ರ ಹೊರಗೆ ಹೋಗಬಹುದು ಎಂಬಂತಹಾ ಉಸಿರುಗಟ್ಟಿಸುವ ವಾತಾವರಣ ಇರುವುದಾಗಿ ಆರೋಪಿಸಿದ್ದಾರೆ.

ಇಂತಹ ಕಠಿಣ ಜಿಯಮಗಳೇ ಚೈತನ್ಯ ಮಾನಸಿಕ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಕೊನೆಗೆ ಹೊಸದುರ್ಗ ಪೊಲೀಸರು ಆಗಮಿಸಿ ಮಾತುಕತೆಯ ನಂತರ, ಆಡಳಿತ ಮಂಡಳಿಯು ಕೆಲವು ನಿಯಮಗಳನ್ನು ಸಡಿಲಿಸಲು ಒಪ್ಪಿಕೊಂಡಿತು, ಇದರಲ್ಲಿ ವಿದ್ಯಾರ್ಥಿಗಳು ಕ್ಯಾಂಪಸ್‌ನ ಹೊರಗೆ ಹಾಗೂ ಹಾಸ್ಟೆಲ್‌ಗಳಲ್ಲಿ ಮತ್ತು ಪ್ರತಿ ಪರ್ಯಾಯ ದಿನದಂದು ಮೊಬೈಲ್ ಫೋನ್‌ಗಳನ್ನು ಬಳಸಲು ಅವಕಾಶ ನೀಡಲಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ್ದ ಆರಂಭದಲ್ಲಿ ಚೈತನ್ಯಳನ್ನು ಮೊದಲು ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿಗೆ (ಕೆಎಂಸಿ) ಮತ್ತು ನಂತರ ಕಣ್ಣೂರಿನ ಆಸ್ಟರ್ ಮಿಮ್ಸ್‌ಗೆ ಸ್ಥಳಾಂತರಿಸಲಾಯಿತು. ಕಳೆದ ಒಂದು ತಿಂಗಳಿನಿಂದ, ಆಕೆಗೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಯಿತು. ಮಂಜೂರ್ ಆಸ್ಪತ್ರೆಯ ಆಡಳಿತ ಮಂಡಳಿಯು ಆಕೆಯ ವೈದ್ಯಕೀಯ ವೆಚ್ಚವನ್ನು ಭರಿಸಿತು. ಆದರೆ ಮೂರು ತಿಂಗಳು ನರಳಾಡಿದ ವಿದ್ಯಾರ್ಥಿನಿ ಮೃತಪಟ್ಟಿದ್ದು, ಹೆತ್ತವರ ಕನಸು ಭಗ್ನಗೊಂಡಿದೆ.

error: Content is protected !!