ಮಂಗಳೂರು: “ಸಿದ್ದರಾಮಯ್ಯರ ಸರಕಾರ ಎಲ್ಲ ರೀತಿಯಲ್ಲಿ ಅಸಮರ್ಥ ಸರಕಾರ, ಸಿದ್ದರಾಮಯ್ಯ ಒಬ್ಬ ಮೋಸಗಾರ“ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತಾಡಿದ ಅವರು, ”ಸಿದ್ದರಾಮಯ್ಯ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿವೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ, ಜನರಿಗೆ ಗ್ಯಾರಂಟಿ ಹೆಸರಲ್ಲಿ ಮೋಸ ಮಾಡಿ ಜನರಿಗೆ ಹೊರೆಯಾಗಿರುವ ಸರಕಾರ ಇದಾಗಿದೆ. ದಲಿತರಿಗೆ ಮೀಸಲಿಟ್ಟ ಸಾವಿರಾರು ಕೋಟಿ ರೂ. ಹಣವನ್ನು ಬೇರೆ ಕಾರ್ಯಗಳಿಗೆ ದುರುಪಯೋಗ ಪಡಿಸಿರುವ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಜನರಿಗೆ ನಿರಾಸೆಯನ್ನು ಮೂಡಿಸಿದೆ. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಮೇಲೆ 75 ವರ್ಷಗಳಲ್ಲಿ ನಡೆಯದೇ ಇದ್ದಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 733 ಮಂದಿ ಬಾಣಂತಿಯರು ಸಾವನ್ನಪ್ಪಿದ್ದಾರೆ. 50 ಮಂದಿ ಹೆಣ್ಣುಮಕ್ಕಳನ್ನು ರೇಪ್ ಮಾಡಿ ಕೊಲ್ಲಲಾಗಿದೆ. 12 ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 23 ಮಂದಿ ಫೈನಾನ್ಸ್ ಕಿರುಕುಳಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ“ ಎಂದರು.
”ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮುಸ್ಲಿಮರಿಗೆ ಅನ್ಯಾಯ ಮಾಡಲಾಗುತ್ತಿದೆ. ಧರ್ಮಾಧಾರಿತ ಮೀಸಲಾತಿ ಯಾರಿಗೂ ಕೊಡಬೇಡಿ. ಸದನದಲ್ಲಿ ಸಚಿವರೇ ತಮ್ಮ ಮೇಲೆ ಹನಿ ಟ್ರ್ಯಾಪ್ ಆಗಿದೆ ಎನ್ನುತ್ತಾರೆ. 48 ಮಂದಿಯ ಹನಿಟ್ರ್ಯಾಪ್ ಆಗಿದ್ದರೆ ಮಾಡಿದ್ದು ಯಾರು? ಇಂತಹ ಸರಕಾರ ತೊಲಗಬೇಕು ಕೂಡಲೇ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ“ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಭಾರತಿ ಶೆಟ್ಟಿ, ಪ್ರತಾಪ್ ಸಿಂಹ ನಾಯಕ್, ಕಿಶೋರ್ ಕುಮಾರ್ ಬೊಟ್ಯಾಡಿ, ಶಿಲ್ಪಾ ಸುವರ್ಣ, ಆರ್ ಸಿ ನಾರಾಯಣ್, ಸುಲೋಚನಾ ಭಟ್, ರಾಜೇಶ್, ಪೂಜಾ ಪೈ, ಸಂಜಯ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.