ಪಾಕಿಸ್ತಾನ- ಬಲೂಚಿಸ್ತಾನ ಯುದ್ಧದ ಬೆನ್ನಲ್ಲೇ ಮುಸ್ಲಿಂ ರಾಷ್ಟ್ರ ಟರ್ಕಿಯ ಖಲೀಫನ ವಿರುದ್ಧ ಬೀದಿಗಿಳಿದ ಜನರು!

ನವದೆಹಲಿ: ಪಾಕಿಸ್ತಾನ-ಬಲೂಚಿಸ್ತಾನ ನಡುವೆ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಇನ್ನೊಂದು ಮುಸ್ಲಿಂ ರಾಷ್ಟ್ರ ಟರ್ಕಿಯಲ್ಲೂ ದಂಗೆ ಆರಂಭಗೊಂಡಿದೆ. ಈ ದೇಶದ ನಾಯಕನಾಗಿರುವ ಖಲೀಫ ರೆಸೆಪ್ ತಯ್ಯಿಪ್ ಎರ್ಡೋಗನ್ ವಿರುದ್ಧ ಜನರು ತಿರುಗಿಬಿದ್ದಿದ್ದು, ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ.

Turkish elections Sunday will create a problem for the world - a re ...
ಸದ್ಯಕ್ಕೆ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಪ್ರತಿಭಟನಾಕಾರರ ಮೇಲೆ ಕಠಿಣ ಕ್ರಮಕ್ಕೆ ಖಲೀಫ ಸೂಚನೆ ನೀಡಿದ್ದಾರೆ. ಟರ್ಕಿಶ್ ಆಡಳಿತವು ಮುಂದಿನ 4 ದಿನಗಳವರೆಗೆ ದೇಶದಲ್ಲಿ ಎಲ್ಲ ರೀತಿಯ ಪ್ರತಿಭಟನೆಗಳನ್ನು ನಿಷೇಧಿಸಿದೆ. ಈ ಹಿಂದೆ ಹಮಾಸ್‌ ವಿರುದ್ಧ ಯುದ್ಧ ಸಾರಿದ್ದ ಇಸ್ರೇಲ್‌ಗೆ ಖಲೀಫ ರೆಸೆಪ್ ತಯ್ಯಿಪ್ ಎರ್ಡೋಗನ್ ಬುದ್ಧಿ ಕಲಿಸುವುದಾಗಿ ಧಮ್ಕಿ ಹಾಕುತ್ತಿದ್ದರು. ಇಸ್ರೇಲ್‌ ವಿರುದ್ಧ ಕ್ರಮ ತೆಗೆದುಕೊಳ್ಳದ ಸೌದಿ ಅರೇಬಿಯಾಗೆ ನೇರ ಸವಾಲು ಹಾಕುತ್ತಿದ್ದರು. ಇರಾನ್‌ ಆಂತರಿಕ ಕಲಹದ ಮಧ್ಯೆ ಮೂಗು ತೂರಿಸುತ್ತಿದ್ದರು. ಇದೀಗ ಖಲೀಫ ರೆಸೆಪ್ ತಯ್ಯಿಪ್ ಎರ್ಡೋಗನ್ ಇದೀಗ ತನ್ನದೇ ದೇಶದಲ್ಲಿ ದಂಗೆ ಎದ್ದ ಜನರನ್ನು ನಿಯಂತ್ರಿಸಲಾಗದೆ ಪರಿತಪಿಸಲಾರಂಭಿಸಿದ್ದಾರೆ.

Turkey, Turkey news, Turkey latest news, Turkey protests, Recep Tayyip Erdogan, Ekrem Imamoglu
ಅಂತಃಕಲಹ ಯಾಕೆ?
ಟರ್ಕಿಯ ಪ್ರಮುಖ ನಗರವಾದ ಇಸ್ತಾನ್‌ಬುಲ್‌ನ ಮೇಯರ್ ಎಕ್ರೆಮ್ ಇಮಾಮೊಗ್ಲು ಅವರ ಬಂಧನದ ನಂತರ ಇಂದು ಸಾವಿರಾರು ಪ್ರತಿಭಟನಾಕಾರರು ಇಸ್ತಾನ್‌ಬುಲ್‌ನ ಬೀದಿಗಿಳಿದಿದ್ದಾರೆ. ಸೆಕ್ಯುಲರ್ ರಿಪಬ್ಲಿಕನ್ ಪಕ್ಷದ ನಾಯಕ ಮತ್ತು ಇಸ್ತಾನ್‌ಬುಲ್‌ನ ಮೇಯರ್ ಆಗಿರುವ ಎಕ್ರೆಮ್ ಇಮಾಮೊಗ್ಲು ಅವರನ್ನು ಟರ್ಕಿಯಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಅಧ್ಯಕ್ಷ ಎರ್ಡೋಗನ್ ಅವರ ಪ್ರಮುಖ ಪ್ರತಿಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಈಗಿರುವಾಗ ಇಮಾಮೊಗ್ಲು ವಿರುದ್ಧ ಭ್ರಷ್ಟಾಚಾರ ಮತ್ತು ಭಯೋತ್ಪಾದಕ ಗುಂಪಿಗೆ ಸಹಾಯ ಮಾಡಲಾಗುತ್ತಿದೆ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ. ಅವರನ್ನು ಕ್ರಿಮಿನಲ್ ಸಂಘಟನೆಯ ಶಂಕಿತ ನಾಯಕ ಎಂದು ಬಣ್ಣಿಸಿದ್ದಾರೆ.

ತನಿಖೆಯ ಭಾಗವಾಗಿ ಖಲೀಫಾ ಪೊಲೀಸರು 100 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ದೇಶದ ಪತ್ರಕರ್ತರು, ರಾಜಕಾರಣಿಗಳು ಮತ್ತು ಉದ್ಯಮಿಗಳು ಕೂಡ ಸೇರಿದ್ದಾರೆ. ಅದೇ ಸಮಯದಲ್ಲಿ, ಅವರ ಬಂಧನದ ನಂತರ ಜನರ ಕೋಪವನ್ನು ನೋಡಿ, ಇಸ್ತಾನ್‌ಬುಲ್ ಗವರ್ನರ್ ಕಚೇರಿ 4 ದಿನಗಳವರೆಗೆ ಯಾವುದೇ ರೀತಿಯ ಪ್ರತಿಭಟನೆ ಪ್ರದರ್ಶನವನ್ನು ನಿಷೇಧಿಸಿದೆ. ಇದರಿಂದ ರೊಚ್ಚಿಗೆದ್ದ ಜನರು ಇಮಾಮೊಗ್ಲು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿ, ʻಜನರ ಇಚ್ಛೆಯನ್ನು ನಿಗ್ರಹಿಸಲು ಸಾಧ್ಯವಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.

 

ಪ್ರತಿಭಟನೆಗಳ ಮೇಲೆ ನಾಲ್ಕು ದಿನಗಳ ನಿಷೇಧವಿದ್ದರೂ, ಇಸ್ತಾನ್‌ಬುಲ್‌ನ ಪೊಲೀಸ್ ಪ್ರಧಾನ ಕಚೇರಿ, ನಗರ ಸಭಾಂಗಣ ಮತ್ತು ಇಮಾಮೊಗ್ಲು ಅವರ ಪಕ್ಷದ ಕಚೇರಿಯ ಹೊರಗೆ ಸಾವಿರಾರು ಜನರು ಜಮಾಯಿಸಿ ಇಮಾಮೊಗ್ಲು ಅವರ ಬಂಧನವನ್ನು ಕಾನೂನುಬಾಹಿರ ಮತ್ತು ಆಧಾರರಹಿತ ಎಂದು ಖಲೀಫಾ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಘರ್ಷಣೆ ಯಾವ ಕ್ಷಣದಲ್ಲಾದರೂ ಭುಗಿಲೇಳುವ ಸಾಧ್ಯತೆಯಿದ್ದು, ನೂರಾರು ಜನರ ಮಾರಣ ಹೋಮ ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

error: Content is protected !!