ಮಂಗಳೂರು ಸಿಸಿಬಿ ಪೊಲೀಸರ ಕಠಿಣ ಪರಿಶ್ರಮದಿಂದ ರಾಜ್ಯದ ಇತಿಹಾಸದಲ್ಲೇ 75 ಕೋಟಿಗೂ ಅಧಿಕ ಮೌಲ್ಯದ ಎಂಡಿಎಂಎ ಮಾದಕ ದ್ರವ್ಯ ವಶಪಡಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಾಮರಸ್ಯ ಮಂಗಳೂರು ಪರವಾಗಿ ಅಭಿನಂದಿಸಿ , ಗೌರವಿಸಲಾಯಿತು.
ಅಧಿಕಾರಿಗಳಾದ ಮನೋಜ್ ಕುಮಾರ್ , ರಫೀಕ್ , ಸುದೀಪ್ , ಶರಣಪ್ಪ ,ನರೇಂದ್ರ ಮತ್ತಿತರು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ಸಮರ್ಥ್ ಭಟ್ , ಸಾಮರಸ್ಯ ಮಂಗಳೂರು ಸಂಘಟನೆ ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾಯಕ್ ಹಾಗೂ ಪದಾಧಿಕಾರಿಗಳಾದ,ನೀತ್ ಶರಣ್ , ರಾಜೇಶ್ ದೇವಾಡಿಗ , ಯೋಗೀಶ್ ನಾಯಕ್, ಟಿಸಿ ಗಣೇಶ್ , ಜಯರಾಜ್ ಕೋಟಿಯಾನ್ , ವಿದ್ಯಾ ಶೆಣೈ ,ಮಮತಾ ಕುಡ್ವ , ರಾಧಿಕಾ ನಾಯಕ್ ಮತ್ತಿತರು ಉಪಸ್ಥಿತರಿದ್ದರು.