ಸಿಡಿಲಾಘಾತಕ್ಕೆ ಕ್ರಿಕೆಟ್‌ ಆಡುತ್ತಿದ್ದ ಯುವಕ ಬಲಿ

ಅಲಪ್ಪುಳ: ಕ್ರಿಕೆಟ್ ಆಟ ಆಡುತ್ತಿದ್ದ ಯುವಕ ಸಿಡಿಲಾಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ಕೇರಳ ಅಲಪ್ಪುಳದಲ್ಲಿ ಸಂಭವಿಸಿದೆ.
ಅಲಪ್ಪುಳದ ಕೊಡುಪ್ಪುನ್ನ ಮೂಲದ ಅಖಿಲ್ ಪಿ. ಶ್ರೀನಿವಾಸನ್(28) ಮೃತ ದುದೈವಿ.

ಅಖಿಲ್‌ ಮಧ್ಯಾಹ್ನ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ಇದಕ್ಕಿದ್ದಂತೆ ಸಿಡಿಲು ಬಡಿದು ಈ ದುರ್ಘಟನೆ ಸಂಭವಿಸಿದೆ. ಗಾಯಾಳು ಅಖಿಲ್ ಅವರನ್ನು ತಕ್ಷಣ ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು.
ಆದರೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!