ಭಾರೀ ಮಳೆಯಿಂದ ಕೆಂಪಾಯ್ತು ಇರಾನ್‌ ಸಮುದ್ರ!

ಇರಾನ್ : ಭಾರೀ ಮಳೆಯ ಕಾರಣ ಇರಾನ್‌ನ ಕಡಲ ತೀರ ಕಡು ಕೆಂಪು ಬಣ್ಣಕ್ಕೆ ತಿರುಗಿ ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿರುವುದು ನಾವು ನೋಡಬಹುದು. ಈ ರೀತಿಯ ಅನಿರೀಕ್ಷಿತ ಬೆಳವಣಿಗೆ ವಿಶ್ವವನ್ನೇ ದಂಗಾಗಿಸಿದೆ. ಇಡೀ ಸಮುದ್ರ ಕೆಂಪು ಬಣ್ಣಕ್ಕೆ ತಿರುಗಿರುವುದನ್ನು ಕಂಡು ಜನರು ಆಘಾತಕ್ಕೆ ಒಳಗಾಗಿದ್ದಾರೆ. ಅಲ್ಲಿನ ನೀರು ರಕ್ತವನ್ನೇ ಹೋಲುವಂತಹ ಕೆಂಪು ಬಣ್ಣಕ್ಕೆ ತಿರುಗಿದೆ. ಈ ಕಡಲಿನ ಹತ್ತು ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೋಡುಗರ ಎದೆ ನಡುಗಿಸುವಂತಿದೆ. ಹಾರ್ಮುಜ್ ದ್ವೀಪದ ಸಿಲ್ವರ್ ಮತ್ತು ರೆಡ್ ಬೀಚ್ ಕೆಂಪು ಬಣ್ಣಕ್ಕೆ ತಿರುಗಿರುವುದನ್ನು ವಿಡಿಯೋ ತೋರಿಸಲಿದೆ. ಹಾಗೆ ಬಂಡೆಗಳ ನಡುವೆ ಹರಿಯುತ್ತಿರುವ ನೀರು ಕೂಡ ಕೆಂಪು ಬಣ್ಣದಿಂದ ಕೂಡಿರುವುದು ನೋಡಬಹುದು. ಈ ಸಮುದ್ರದ ನೀರು ಕೆಂಪಾಗಿರುವುದನ್ನು ಕಂಡ ನೆಟ್ಟಿಗರು ಇದು ಕೇಡುಗಾಲ ಹಾಗೆ ಅಪಾಯದ ಮುನ್ಸೂಚನೆ ಎಂದೆಲ್ಲಾ ಅಭಿಪ್ರಾಯ ಹೊರಹಾಕಿದ್ದಾರೆ. ವಿಡಿಯೋದಲ್ಲಿ ಈ ಕಡಲಿನ ನೀರು ಸಂಪೂರ್ಣವಾಗಿ ಕೆಂಪಾಗಿರುವುದು ನೋಡಬಹುದು. ಈ ವಿಡಿಯೋ ಯಾವುದೇ ಕಾರಣಕ್ಕೆ ಎಡಿಟ್ ಮಾಡಲಾದ ಅಥವಾ ಎಐ ರಚಿತ ವಿಡಿಯೋ ಅಲ್ಲವೇ ಅಲ್ಲ. ಈ ಸಮುದ್ರದ ನೀರು ಕೆಂಪಾಗಿರುವುದು ನೈಸರ್ಗಿಕ ಕಾರಣದಿಂದಾಗಿ. ವಿಡಿಯೋದಲ್ಲಿ ನೋಡಿದಂತೆ ಸಮುದ್ರದ ದಡದಲ್ಲಿ ವ್ಯಕ್ತಿಯೊಬ್ಬ ಓಡಾಡುತ್ತಿದ್ದಾನೆ. ಹಾಗೆ ಸಮುದ್ರದ ನೀರು ಕೆಂಪಾಗಿದೆ. ಆದ್ರೆ ಗಮನವಿಟ್ಟು ನೋಡಿದರೆ ಇಡೀ ಸಮುದ್ರದ ನೀರು ಕೆಂಪಗಾಗಿಲ್ಲ. ಬದಲಿಗೆ ಸಮುದ್ರದ ಅಲೆ ಬರುವ ಭಾಗದ ನೀರು ಮಾತ್ರ ಕೆಂಪಾಗಿದೆ. ಉಳಿದಂತೆ ಹಿಂದೆ ನೀರು ಸರಿಯಾಗಿ ಶುದ್ಧವಾಗಿ ಕಾಣಿಸುತ್ತಿದೆ.

error: Content is protected !!