ಪುದಿನಾ ಚಿಕನ್‌ ಮನೆಯಲ್ಲೇ ಮಾಡಿ ರುಚಿ ನೋಡಿ!

ನಾನ್ ವೆಜ್ ಪ್ರಿಯರಿಗೆ ಚಿಕನ್‌ನಿಂದ ಮಾಡಿರುವ ಪ್ರತಿಯೊಂದು ಖಾದ್ಯಗಳೂ ಕೂಡ ಇಷ್ಟವಾಗುತ್ತೆ. ಚಿಕನ್ ಸಾರು, ಚಿಕನ್ ಗ್ರೇವಿ, ಚಿಕನ್ ಕಬಾಬ್, ಬಿರಿಯಾನಿ, ಚಿಕನ್ 65, ಚಿಕನ್ ಕರಿ ಹೀಗೆ ಚಿಕನ್‌ನಿಂದ ಹಲವು ರೀತಿಯ ಖಾದ್ಯ ರೆಡಿ ಮಾಡಿದ್ರೆ ಬಾಯಲ್ಲಿ ನೀರು ಬರುತ್ತೆ. ಕೆಲವರು ನಾನ್ ವೆಜ್ ಇಲ್ಲದೆ ಊಟ ಮಾಡುವುದೇ ಕಷ್ಟ ಎನ್ನುವುದನ್ನು ನೋಡಿರುತ್ತೇವೆ. ಹಾಗೆ ಅವರು ಎಲ್ಲಾ ಸಮಯದಲ್ಲಿ ನಾನ್ ವೆಜ್ ಸವಿಯಲು ಮುಂದಾಗೋದು ಹೆಚ್ಚು. ಅದರಲ್ಲೂ ನಾವು ಮೇಲೆಯೇ ಹೇಳಿದಂತೆ ಬಗೆ ಬಗೆಯ ಚಿಕನ್ ಖಾದ್ಯ ನಾನ್ ಪ್ರಿಯರ ಬಾಯಲ್ಲಿ ನೀರು ತರಿಸುವುದು ಖಚಿತ. ಹಾಗೆ ಚಿಕನ್ ಅಗತ್ಯದಷ್ಟು ಸವಿದರೆ ದೇಹಕ್ಕೂ ಬಹಳ ಉತ್ತಮ. ಹಾಗೆ ಊಟದ ಜೊತೆಗೆ ಚಿಕನ್ ಸವಿಯುವುದು ಎಲ್ಲರ ಆಸೆಯಾಗಿರುತ್ತೆ. ಹೀಗಾಗಿ ನಾವಿಂದು ಚಿಕನ್‌ನಿಂದ ಮಾಡುವಂತಹ ವಿಭಿನ್ನ ಹಾಗೂ ವಿಶೇಷ ರೀತಿಯ ಖಾದ್ಯದ ಬಗ್ಗೆ ತಿಳಿದುಕೊಳ್ಳೋಣ. ಇಂದು ಚಿಕನ್ ಪುದಿನ ಚಿಕನ್ ಮಾಡುವ ಕುರಿತಂತೆ ತಿಳಿಯೋಣ.

ಪುದಿನ ಚಿಕನ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?

ಚಿಕನ್ ಪುದಿನ ಈರುಳ್ಳಿ ಅರಿಶಿನ ಪುಡಿ ಗರಂ ಮಸಾಲ ಪುಡಿ ಕಾಳು ಮೆಣಸಿನ ಪುಡಿ ಕರಿಬೇವು ಚಕ್ರಮೊಗ್ಗು ದಾಲ್ಚಿನ್ನಿ ಅಥವಾ ಚಕ್ಕೆ ಲವಂಗ ಏಲಕ್ಕಿ ಶುಂಠಿ ಬೆಳ್ಳುಳ್ಳಿ ಹಸಿ ಮೆಣಸಿನಕಾಯಿ ಕೊತ್ತಂಬರಿ ಸೊಪ್ಪು ಅಡುಗೆ ಎಣ್ಣೆ ರುಚಿಗೆ ತಕ್ಕಷ್ಟು ಉಪ್ಪು

ಪುದಿನ ಚಿಕನ್ ಮಾಡುವ ವಿಧಾನವೇನು?

ಮೊದಲು ಒಂದು ಮಿಕ್ಸಿ ಜಾರ್‌ ತೆಗೆದುಕೊಂಡು ಅದಕ್ಕೆ ಪುದಿನ, ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಬೆಳ್ಳುಳ್ಳಿ, ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಲವಂಗ, ಕಾಳು ಮೆಣಸು, ಪಲಾವ್ ಎಲೆ, ಚಕ್ಕೆ, ಚಕ್ರಮೊಗ್ಗು, ಹಾಗೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಈರುಳ್ಳಿ ಕೂಡ ಹಾಕಿ ಫ್ರೈ ಮಾಡಿಕೊಳ್ಳಿ. ಈರುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿದ ಬಳಿಕ ಚೆನ್ನಾಗಿ ತೊಳದು ಇಟ್ಟುಕೊಂಡಿರುವ ಚಿಕನ್ ಫೀಸ್‌ಗಳನ್ನು ಇದಕ್ಕೆ ಹಾಕಿಕೊಳ್ಳಿ. ಹಾಗೆ ಇದರ ಮೇಲೆ ಅರಶಿಣ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 5 ನಿಮಿಷ ಫ್ರೈ ಮಾಡಿಕೊಳ್ಳಬೇಕು. 5ರಿಂದ 6 ನಿಮಿಷದ ಬಳಿಕ ಇದಕ್ಕೆ ಮಿಕ್ಸಿ ಜಾರ್‌ನಲ್ಲಿ ರುಬ್ಬಿದ್ದ ಮಸಾಲೆಯನ್ನು ಹಾಕಿ. ಹಾಗೆ ಸ್ವಲ್ಪವೇ ಸ್ವಲ್ಪ ನೀರು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ವೇಳೆ ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಂಡು ಮಿಕ್ಸ್ ಮಾಡಿ. ಈಗ ಇದಕ್ಕೆ ಖಾರದ ಪುಡಿ, ಕರಿ ಮೆಣಸಿನ ಪುಡಿ, ಗರಂ ಮಸಾಲೆ ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 10 ನಿಮಿಷ ಬೇಯಲು ಬಿಡಿ. ಆಗಾಗ ತಳ ಹಿಡಿಯದಂತೆ ತಿರುಗಿಸುತ್ತಾ ಇರಿ. ಹಾಗೆ ಗಟ್ಟಿಯಾಗಿದೆ ಎನಿಸಿದರೆ ನೀರು ಕೂಡ ಹಾಕಿಕೊಳ್ಳಿ. ಬಳಿಕ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಪುದಿನ ಚಿಕನ್ ಗ್ರೇವಿ ರೆಡಿಯಾಗುತ್ತದೆ.

error: Content is protected !!