ಫೆ.16: ಕಾಟಿಪಳ್ಳ ಬದ್ರುಲ್ ಹುದಾ ಜುಮಾ ಮಸೀದಿ ಉದ್ಘಾಟನೆ

ಮಂಗಳೂರು: ನವಮಂಗಳೂರು ಬಂದರು ನಿರ್ಮಾಣದ ವೇಳೆ ಭೂಸ್ವಾಧೀನತೆಯಿಂದ ಮನೆ ಕಳೆದುಕೊಂಡ ನಿರ್ವಸಿತರಿಗೆ ಕೃಷ್ಣಾಪುರ ಕಾಟಿಪಳ್ಳ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲಾಯಿತು. ಆ ಸಂದರ್ಭ ಕೃಷ್ಣಾಪುರ 7ನೇ ಬ್ಲಾಕ್ ವ್ಯಾಪ್ತಿಯಲ್ಲಿ ಸುಮಾರು 40 ವರ್ಷಗಳ ಹಿಂದೆ ನಮಗೆ ಮೀಸಲಿಟ್ಟಿದ್ದ ಜಾಗದಲ್ಲಿ ಊರಿನ ಹಿರಿಯರು ಕೂಡಿ ಪ್ರಾರ್ಥನೆ ಹಾಗೂ ಧಾರ್ಮಿಕ ವಿದ್ಯಾಭ್ಯಾಸಕ್ಕಾಗಿ ಹಂಚಿನ ಕಟ್ಟಡ ಕಟ್ಟಿದ್ದು ಕಾಲ ಕ್ರಮೇಣ ಇದನ್ನು ಅಭಿವೃದ್ಧಿ ಪಡಿಸಲಾಯಿತು. ಇದೀಗ ಮಸೀದಿ ಹಾಗೂ ಮದರಸ ಕಟ್ಟಡವನ್ನು ಸಮಗ್ರವಾಗಿ ನಿರ್ಮಿಸಲಾಗಿದೆ. ಒಟ್ಟು 500 ಮಂದಿ ಒಟ್ಟಾಗಿ ಪ್ರಾರ್ಥನೆ ಮಾಡುವಷ್ಟು ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ 1 ರಿಂದ 9 ನೇ ತರಗತಿವರೆಗೆ ಧಾರ್ಮಿಕ ಶಿಕ್ಷಣ ನೀಡುತ್ತಾ ಬರಲಾಗುತ್ತಿದೆ. ಇದೀಗ ಮಸೀದಿ ಹಾಗೂ ಮದರಸ ಕಟ್ಟಡ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿದ್ದು ಧಾರ್ಮಿಕ ಗುರುಗಳು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಆಗಮಿಸಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಕಟ್ಟಡದ ಉದ್ಘಾಟನೆಯು ಫೆ.16ರ ಆದಿತ್ಯವಾರದಂದು ಬೆಳಿಗ್ಗೆ 10.30ಕ್ಕೆ ಸರಿಯಾಗಿ ಜರಗಲಿದ್ದು ಬಹುಮಾನ್ಯರಾದ ಅಸ್ಸಯ್ಯದ್ ಕೆ.ಎಸ್. ಆಟಕೋಯ ತಂಬಳ್ ಕುಂಬೋಳ್ ಹಾಗೂ ಬಹು। ಅಸ್ಸಯ್ಯದ್ ಝನುಲ್ ಅಬಿದೀನ್ ಜಮಲುಲಿ ತಂಬಳ್ ಕಾಜೂರು ರವರು ಉದ್ಘಾಟನೆಯನ್ನು ನೆರವೇರಿಸಲಿಕ್ಕಿದ್ದು, ಬಹು| ಝನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಬಹು। ಆಲ್ಹಾಜ್ ಮುಹಮ್ಮದ್ ಅಸ್ಕರ್ ಫೈಝಿ ಬೊಳ್ಳೂರು ಉಸ್ತಾದ್ ಹಾಗೂ ಬಹು। ಅಲ್ ಹಾಜ್ ಇ. ಕೆ. ಇಬ್ರಾಹಿಂ ಮುಸ್ಲಿಯಾರ್ ಖಾಝಿ ಕೃಷ್ಣಾಪುರ ಇವರು ಉಪಸ್ಥಿತರಿರಲಿದ್ದಾರೆ ಎಂದು ಬದ್ರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷರಾದ ಮೊಹಮ್ಮದ್ ಇಸ್ಮಾಯಿಲ್ ಜಿ. ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

ಮುಖ್ಯ ಅಥಿತಿಗಳಾಗಿ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್, ವಕ್ಫ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಾದ ಬಿ.ಝಡ್.ಜಮೀರ್ ಅಹ್ಮದ್ ಖಾನ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಮಾಜಿ ಶಾಸಕರಾದ ಬಿ.ಎ. ಮೊಯಿದಿನ್ ಬಾವ, ಡೆಲ್ಟಾ ಗ್ರೂಪ್ ಇದರ ವ್ಯವಸ್ಥಾಪಕ ನಿರ್ದೇಶಕರಾದ ಎ.ಮೊಯಿದಿನ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಹಾಗೂ ಅಧ್ಯಕ್ಷತೆಯನ್ನು ಬದ್ರಿಯಾ ಜುಮಾ ಮಸೀದಿ ಇದರ ಅಧ್ಯಕ್ಷರಾದ ಹಾಜಿ ಝಾಕೀರ್ ಹುಸೈನ್ ಬಳ್ಕುಂಜೆ ವಹಿಸಲಿದ್ದು, ಈ ಸಮಾರಂಭದಲ್ಲಿ ಅನೇಕ ನೇತಾರರು ಭಾಗವಹಿಸಲಿಕ್ಕಿದ್ದಾರೆ.
ಫೆ.14ನೇ ಶುಕ್ರವಾರ ಹಾಗೂ ಫೆ.15ನೇ ಶನಿವಾರ ರಾತ್ರಿ 8.30 ಕ್ಕೆ ಸರಿಯಾಗಿ ಬಹು। ಅಸ್ಸಯ್ಯದ್ ಶಿಹಾಬುದ್ದೀನ್ ಆಲ್ ಅದ್ದಲ್ ಮುತ್ತನ್ನೂರ್ ತಂಬಳ್ ಹಾಗೂ ಬಹು। ಅತಾವುಲ್ಲ ಹಿಮಮಿ ಸಖಾಫಿ ಆಲ್ ಪುರ್ಖಾನಿ ಉಪ್ಪಿನಂಗಡಿ ಇವರಿಂದ ಧಾರ್ಮಿಕ ಪ್ರಭಾಷಣ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಟ್ಟಡ ಸಮಿತಿ ಅಧ್ಯಕ್ಷರಾದ ಟಿ.ಎಮ್. ಅಬೂಬಕ್ಕರ್, ಸದಸ್ಯರಾದ ಮಹಮ್ಮದ್ ಆಲಿ, ಉಮ್ಮರ್ ಫಾರೂಕ್, ಬಶೀರ್ ಅಹಮದ್ ಹಾಗೂ ಅಬ್ಬಾಸ್ ಕಕ್ಕಿಂಜೆ ಉಪಸ್ಥಿತರಿದ್ದರು.

error: Content is protected !!